ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಸರ್ಕಾರ ಆಗಿದ್ದು ಈ ಸರ್ಕಾರ ಮೂರು ವರ್ಷದ ಆಡಳಿತದ ಅವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿಯ ಅಂಚಿಗ ತಳ್ಳಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಅವರು ಭಾರತೀಯ ಜನತಾ ಪಾರ್ಟಿ ಚಿಕ್ಕಬಳ್ಳಾಪುರ ಜಿಲ್ಲಾ ಕಚೇರಿಯಲ್ಲಿ ಇಂದು ರಾಜ್ಯ ರೈತ ವಿರೋಧಿ ದಲಿತ ವಿರೋಧಿ ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ ವಿರುದ್ಧ ಮೂರು ವರ್ಷಗಳ ಸರ್ಕಾರದ ಆಡಳಿತದ ವೈಫಲ್ಯದ ಕುರಿತು ಪತ್ರಿಕಾಗೋಷ್ಠಿ ನಡೆಸಿ ತುಮಕೂರಿನಲ್ಲಿ ಕಾಂಗ್ರೆಸ್ ಸರ್ಕಾರ ಮೂರು ವರ್ಷದ ಸಾಧನೆಯ ಸಮರ್ಪಣ ಸಮಾವೇಶವನ್ನು ಇದು ಸಾಧನೆಯ ಸಮಾವೇಶ ಅಲ್ಲ ಇದಕ್ಕೆ ಬದಲಾಗಿ ರಾಜ್ಯದ ವೇದನೆಯ ಸಮಾವೇಶ ಎಂದು ಮೊದಲಿಸಿದರು.
ಸಿದ್ದರಾಮಯ್ಯ ರವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೂರು ವರ್ಷದ ಅವಧಿಯಲ್ಲಿ ಈ ರಾಜ್ಯದ ಸಾಲವನ್ನು 5 ಲಕ್ಷ ಕೋಟಿಗೊಬ್ಬ ಹೆಚ್ಚು ಮಾಡಿದ್ದು ಪ್ರತಿಯೊಬ್ಬ ನಾಗರಿಕನ ಮೇಲು ಒಂದು ಲಕ್ಷ ಕು ಅಧಿಕ ಸಾಲದ ಮೊತ್ತ ವರಿಸಿದ್ದಾರೆ, ಇದೊಂದು ನತದೃಷ್ಟ ಸರ್ಕಾರ ಎಂದು ಹೀಯಾಳಿಸಿದರು. ಸಿದ್ದರಾಮಯ್ಯ ರವರ ಸರ್ಕಾರದ ಆಡಳಿತದ ಧೋರಣೆ ಜನ ವಿರೋಧಿ ಧೋರಣೆ ಆಗಿದ್ದು ಈ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಚುನಾವಣಾ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿಗಳನ್ನು ಸಂಪೂರ್ಣವಾಗಿ ರಾಜ್ಯದ ಜನತೆಗೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಯಾವ ಗ್ಯಾರೆಂಟಿಯು ಸಹ ಸಮರ್ಪಕವಾಗಿ ನೀಡುತ್ತಿಲ್ಲ ಹಾಗಾಗಿ ಇದು ವಚನಭ್ರಷ್ಟ ಸರ್ಕಾರ ಆಗಿದೆ ಎಂದರು. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹಳಿ ತಪ್ಪಿದೆ ಸಚಿವರುಗಳಲ್ಲಿ ಒಬ್ಬರ ನಡುವೆ ಮತ್ತೊಬ್ಬರಲ್ಲಿ ಸಾಮರಸ್ಯ ಇಲ್ಲ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೇರಳವಾಗಿ ಇದೆ ಈ ಎಲ್ಲಾ ಕಾರಣಗಳಿಂದ ಸಿದ್ದರಾಮಯ್ಯರವರ ಸರ್ಕಾರವನ್ನು ರಾಜ್ಯದ ಜನತೆ ಮುಂದಿನ ಚುನಾವಣೆ ವೇಳೆಗೆ ಸಂಪೂರ್ಣವಾಗಿ ಮೂಲೆಗುಂಪು ಮಾಡುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದರು.
ದೇಶದ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಆಗುವ ದಿನಗಳು ದೂರವಿಲ್ಲ ಈ ಸಾಧನೆಯ ರೂವಾರಿ ಸ್ವಯಂ ರಾಹುಲ್ ಗಾಂಧಿ ರವರೆ ಆಗುತ್ತಾರೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಮತ್ತು ದೇಶದಲ್ಲಿ ನಮ್ಮ ವಿಶೇಷ ಆಗುತ್ತದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಶ ಸೀಕಲ್ ರಾಮಚಂದ್ರಗೌಡ ರವರು ಮಾತನಾಡಿ ಬಿಜೆಪಿ ಪಕ್ಷದ ಪತ್ರಿಕಾಗೋಷ್ಠಿಯ ಮಹತ್ವವನ್ನು ತಿಳಿಸಿ ಮುಂದಿನ ಎಲ್ಲಾ ವಿಚಾರವನ್ನು ಹಿಂದಿನ ಪತ್ರಿಕಾಗೋಷ್ಠಿಯ ಕೇಂದ್ರಬಿಂದುವಾದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರವರು ವಿವರಿಸುತ್ತಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ,ಪ್ರಧಾನ ಕಾರ್ಯದರ್ಶಿಗ ಕೆ.ಬಿ ಮುರಳಿ, ರಾಜ್ಯ ಪರಿಷತ್ ಸದಸ್ಯ ಎ.ಬಿ. ಬೈರೇಗೌಡ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಲಕ್ಷ್ಮೀಪತಿ, ಜಿಲ್ಲಾ ಕಾರ್ಯದರ್ಶಿ ಆರ್. ಎನ್. ಅಶೋಕ್, ಜಿಲ್ಲಾ ಮುಖಂಡ ಬಾಲಕುಂಟೆ ಗಂಗಾಧರಪ್ಪ,ಗ್ರಾಮಾಂತರ ಮಂಡಲ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ನಗರ ಮಂಡಲ ಅಧ್ಯಕ್ಷ ತೇಜೇಂದ್ರ ಪಾಪು, ರಾಷ್ಟ್ರೀಯ ಪರಿಷತ್ ಸದಸ್ಯರಾದ ಲಕ್ಷ್ಮೀನಾರಾಯಣ ಗುಪ್ತ, ಜಿಲ್ಲಾ ಮಾಧ್ಯಮ ಸಂಚಾಲಕ ವಿ.ಮಧುಚಂದ್ರ, ನಗರ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾಬು, ಏರ್ಪೋರ್ಟ್ ಮುನಿರಾಜು, ಭಾಗವಹಿಸಿದ್ದರು
ಸರ್ಕಾರ ಮೂರು ವರ್ಷದ ಆಡಳಿತದ ಅವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿಯ ಅಂಚಿಗೆ ತಳ್ಳಿದೆ: ಛಲವಾದಿ ನಾರಾಯಣಸ್ವಾಮಿ



