ಐಪಿಎಲ್ 2026ರ ಅಂತಿಮ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅನ್ನು 30 ರನ್ ಗಳಿಂದ ಸೋಲಿಸಿದ ರಾಜಸ್ಥಾನ ರಾಯಲ್ಸ್ 16 ಅಂಕಗಳನ್ನು ಕಲೆ ಹಾಕಿ ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಹೀಗಾಗಿ ಈ ಪಂದ್ಯದ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ತೀವ್ರ ನಿರಾಸೆಗೊಳಗಾಗಿವೆ. ಇದೀಗ ಮೇ 27ರ ಬುಧವಾರದಂದು ನ್ಯೂ ಚಂಡೀಗಢದಲ್ಲಿ ನಡೆಯಲಿರುವ ಎಲಿಮಿನೇಟರ್ 2 ಪಂದ್ಯದಲ್ಲಿ 4ನೇ ಸ್ಥಾನಿ ರಾಜಸ್ಥಾನ ರಾಯಲ್ಸ್ ತಂಡ ತೃತೀಯ ಸ್ಥಾನಿ ಸನ್ ರೈಸರ್ಸ್ ತಂಡವನ್ನು ಎದುರಿಸಲಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೇ 24ರ ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ ತಂಡ ಅಷ್ಟೇ ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ಮುಂಬೈ ಇಂಡಿಯನ್ಸ್ ತಂಡವನ್ನು ಆರಂಭದಿAದಲೇ ಕಾಡಿ 3 ವಿಕೆಟ್ ಕಿತ್ತದ್ದಲ್ಲದೆ ರನ್ ಬಿಟ್ಟುಕೊಡುವಲ್ಲೂ ಜಿಪುಣತನ ತೋರಿದ ಜೋಫ್ರಾ ಆರ್ಚರ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಮುಂಬೈ ಬಿಗು ಬೌಲಿಂಗ್ರಾಜಸ್ಥಾನ ರಾಯಲ್ಸ್ ಬೌಲರ್ ಗಳ ಬಿಗು ಬೌಲಿಂಗ್ ದಾಳಿಯ ಮುಂದೆ ಮುಂಬೈ ಇಂಡಿಯನ್ಸ್ ವಿಕೆಟ್ ಗಳು ಒಂದರ ಮೇಲೊಂದರಂತೆ ಬೀಳುತ್ತಾ ಹೋಯಿತು. ತಂಡದ ಮೊತ್ತ 38 ಆಗಿರುವಾಗ 4 ವಿಕೆಟ್ ಗಳು ಉರುಳಿದ್ದವು. ಹಾಗಾಗಿ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಬಿತ್ತು. ಆದರೂ ಸೂರ್ಯಕುಮಾರ್ ಯಾದವ್(42 ಎಸೆತದಲ್ಲಿ 60 ರನ್), ವಿಲ್ ಜಾಕ್ಸ್(18 ಎಸೆತದಲ್ಲಿ 33) ಮತ್ತು ನಾಯಕ ಹಾರ್ದಿಕ್ ಪಾಂಡ್ಯ(15 ಎಸೆತದಲ್ಲಿ 34 ರನ್) ತಂಡವನ್ನು ಗೆಲುವಿನ ಹಳಿಗೆ ತರಲು ಶತ ಪ್ರಯತ್ನ ಮಾಡಿದರು. ಇನ್ನೇನು ಈ ಪ್ರಯತ್ನದಲ್ಲಿ ಯಶಸ್ವಿಯಾಯಿತು ಎಂತAದುಕೊಳ್ಳುತ್ತಿರುವಾಗಲೇ ಆರ್ಚರ್, ಯಶ್ ರಾಜ್ ಪೂಂಜಾ ಅವರು ಮುಂಬೈಗೆ ಮತ್ತೆ ಆಘಾತ ನೀಡಿದರು.
ರಾಜಸ್ಥಾನ ಸಾಂಘಿಕ ಬ್ಯಾಟಿಂಗ್ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ ರಾಯಲ್ಸ್ ತಂಡ ಅಂದುಕೊAಡ ರೀತಿಯಲ್ಲಿ ನಡೆಯಲಿಲ್ಲ. ಉತ್ತಮವಾಗಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ (17 ಎಸೆತದಲ್ಲಿ 27 ರನ್) ಮತ್ತು ಸೆಟ್ ಆಗಲು ಯತ್ನಿಸುತ್ತಿದ್ದ ವೈಭವ್ ಸೂರ್ಯವಂಶಿ(6 ಎಸೆತದಲ್ಲಿ 4 ರನ್) ಅವರನ್ನು ಪವರ್ ಪ್ಲೇ ಮುಗಿಯುವುದರೊಳಗಾಗಿ ಪೆವಿಲಿಯನ್ ಗಟ್ಟಲು ಮುಂಬೈ ಇಂಡಿಯನ್ಸ್ ಯಶಸ್ವಿಯಾಯಿತು. ಪವರ್ ಪ್ಲೇ ನಲ್ಲೇ ಸ್ಪಿನ್ನರ್ ವಿಲ್ ಜಾಕ್ಸ್ ಅವರನ್ನು ಬೌಲಿಂಗ್ ಗೆ ಇಳಿಸಿ ಹಾರ್ದಿಕ್ ಪಾಂಡ್ಯ ಯಶಶ್ವಿಯಾದರು.
MIಯನ್ನು ವಾಂಖೆಡೆಯಲ್ಲೇ ಕಟ್ಟಿಹಾಕಿದ RR ಪ್ಲೇ ಆಫ್ಗೆ ಎಂಟ್ರಿ!



