ಬೆಂಗಳೂರು : ಟ್ರಿಪಲ್ ಎ-ಕೇಂದ್ರಿತ ಗೇಮ್-ಟೆಕ್ ಸ್ಟುಡಿಯೊ – ಲೈಟ್ಫ್ಯೂರಿ ಗೇಮ್ಸಲ್ಲಿ (ಎಲ್ಎಫ್ಜಿ) ದೇಶಿ ಕ್ರಿಕೆಟ್ ಜಗತ್ತಿನ ದಿಗ್ಗಜರು ಬಂಡವಾಳ ಹೂಡಿಕೆ ಮಾಡಿದ್ದಾರೆ. ಕ್ರಿಕೆಟ್ ಜಗತ್ತಿನ ಪ್ರಮುಖ ತಾರೆಯರಾಗಿರುವ ಎಂ.ಎಸ್ ಧೋನಿ, ಜಸ್ಪಿತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಅವರು ಶ್ರೇಯಸ್ ಅಯ್ಯರ್ , ರವೀಂದ್ರ ಜಡೇಜಾ, ಇಶಾನ್ ಕಿಶನ್, ತಿಲಕ್ ವರ್ಮಾ ಮತ್ತು ಸಾಯಿ ಸುದರ್ಶನ್ ಅವರ ಜೊತೆಗೂಡಿ ಹೂಡಿಕೆ ಮಾಡಿದ್ದಾರೆ ಎಂದು ಲೈಟ್ಫೂ÷್ಯರಿ ಗೇಮ್ಸ್ ಪ್ರಕಟಿಸಿದೆ.ಇಲ್ಲಿಯವರೆಗೆ, ಲೈಟ್ಫ್ಯೂರಿ ಗೇಮ್ಸ್, ಹಲವಾರು ಸುತ್ತುಗಳಲ್ಲಿ ಸುಮಾರು 20 ದಶಲಕ್ಷ ಡಾಲರ್ಗಳಷ್ಟು ಒಟ್ಟಾರೆ ಬಂಡವಾಳ ಸಂಗ್ರಹಿಸಿದೆ. ಬ್ಲೂಮ್ ವೆಂಚರ್ಸ್, ವಿ3 ವೆಂಚರ್ಸ್, ಎಂಐಎಕ್ಸ್ಐ, ಟೈಮ್ಸ್ ಇಂಟರ್ನೆಟ್ ಜೊತೆಗೆ ಈ ಕ್ರಿಕೆಟ್ ಖ್ಯಾತನಾಮರೆಲ್ಲ ಲೈಟ್ಫ್ಯೂರಿಗೇಮ್ಸ್ 11 ದಶಲಕ್ಷ ಡಾಲರ್ ಪ್ರಿ-ಸೀರೀಸ್ ಎ ಫಂಡ್ನಲ್ಲಿ ಹೂಡಿಕೆ ಮಾಡಿದ್ದಾರೆ. 100 ಸದಸ್ಯರ ಸ್ಟುಡಿಯೊ, ಪ್ರೀಮಿಯಂ ಹಾಗೂ ಜಾಗತಿಕವಾಗಿ ಸ್ಪರ್ಧಾತ್ಮಕ ಗೇಮ್ಗಳನ್ನು ರೂಪಿಸಲು ಪರಿಣತ ಹಾಗೂ ಸಮೃದ್ಧ ಸೃಜನಶೀಲ ಪ್ರತಿಭಾನ್ವಿತರನ್ನು ಮತ್ತು ಮುಂದುವರಿದ ತಾಂತ್ರಿಕ ಸಾಮರ್ಥ್ಯವನ್ನು ಹೊಂದಿದೆ.
ಈ ಸಹಯೋಗದ ಬಗ್ಗೆ ಮಾತನಾಡಿರುವ ಎಂ.ಎಸ್. ಧೋನಿ ಅವರು, “ಕಳೆದ ಹಲವಾರು ವರ್ಷಗಳಿಂದ ನಾನು ಬಹಳಷ್ಟು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಿದ್ದೇನೆ. ಅವುಗಳಲ್ಲಿ ಯಾವುದಾದರೂ ಒಂದು ಮಹತ್ವದ ಸಂಗತಿ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ಲೈಟ್ಫೂ÷್ಯರಿಯ ತಂಡವು ಇಕ್ರಿಕೆಟ್ ಗೇಮಿಂಗ್ ಬಗ್ಗೆ ನನಗೆ ವಿವರಗಳನ್ನು ತೋರಿಸಿದಾಗ, ಅವರು ಆ ಕೊರತೆಯನ್ನು ಕಡಿಮೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವುದು ನನ್ನ ಅನುಭವಕ್ಕೆ ಬಂದಿತು. ಜಾಗತಿಕ ಪ್ರೇಕ್ಷಕರಿಗಾಗಿ ಭಾರತದಲ್ಲಿ ಇಂತಹ ಗೇಮಿಂಗ್ ನಿರ್ಮಿಸುವ ದೊಡ್ಡ ಹೊಣೆಗಾರಿಕೆಯನ್ನು ಅವರು ಯಶಸ್ವಿಯಾಗಿ ನಿಭಾಯಿಸಲು ಮುಂದೆ ಬಂದಿದ್ದಾರೆ. ಗೇಮ್ನಲ್ಲಿ ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಕೊಡುಗೆ ನೀಡುವ ಉದ್ದೇಶಕ್ಕೆ ನಾನು ಈ ಸಂಸ್ಥೆ ಜೊತೆ ಕೈಜೋಡಿಸಿರುವೆ. ನಾನು ಗಮನಿಸಿದಂತೆ, ಅವರು ಉತ್ತಮ ಕೆಲಸ ಮಾಡಲಿದ್ದಾರೆ” ಎಂದು ಧೋನಿ ಅವರು ಹೇಳಿದ್ದಾರೆ.
ಮೈದಾನದಿಂದ ಮೊಬೈಲ್ಗೆ `ಇಕ್ರಿಕೆಟ್’ ಗೇಮ್ಗೆ ದಿಗ್ಗಜರ ಬೆಂಬಲ



