ಬೆಂಗಳೂರು: ಬಿಜೆಪಿ ಸರ್ಕಾರ ಶಾಲಾ ಕಾಲೇಜು ಗಳಲ್ಲಿ ಜಾರಿಗೊಳಿಸಿದ್ದ ವಸ್ತ್ರಸಂಹಿತೆಯನ್ನು ರಾಜ್ಯದ ಹಾಲಿ ಕಾಂಗ್ರೆಸ್ ಸರ್ಕಾರ ವಸ್ತ್ರ ಸಂಹಿತೆ ತೆಗೆದು ಹಿಜಾಬ್ಗೆ ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ಬಿಜೆಪಿಯ ನಾಯಕರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇದೇ ವಿಚಾರದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವಿಟ್ ಮಾಡಿ, ಸರ್ಕಾರದ ನಡೆ ಸರಿಯಲ್ಲ. ಸರ್ವೋಚ್ಛ ನ್ಯಾಯಾಲಯದಲ್ಲಿ ಶಾಲಾ ಮಕ್ಕಳು ಹಿಜಾಬ್ ಧರಿಸಬಹುದೇ ಇಲ್ಲವೇ ಎಂಬುವ ವಿಷಯದ ಪ್ರಕರಣ ಬಾಕಿ ಇರುವ ಸಂದರ್ಭದಲ್ಲಿ ಶಾಲಾ ಮಕ್ಕಳು ತಮ್ಮ ಸಮವಸ್ತ್ರದೊಂದಿಗೆ ಹಿಜಾಬ್ ಕೂಡ ಧರಿಸಬಹುದು ಎಂದು ಸುತ್ತೋಲೆ ಹೊರಡಿಸಿರುವ ಕರ್ನಾಟಕ ಸರ್ಕಾರದ ನಿಲುವು ಅಲ್ಪಸಂಖ್ಯಾತರ ಮತ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುವ ಮತ್ತೊಂದು ಪ್ರಯತ್ನ ಎಂದಿದ್ದಾರೆ.
ಸರ್ಕಾರದ ನಡೆ ಸರಿಯಲ್ಲ ಯತ್ನಾಳ್



