ಹೊಸದಿಲ್ಲಿ: ಕಳೆದ ಶನಿವಾರ (ಏಪ್ರಿಲ್ 25) ಪಂಜಾಬ್ ಕಿಂಗ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ 264 ರನ್ನುಗಳ ಬೃಹತ್ ಮೊತ್ತವನ್ನು ಪೇರಿಸಿತ್ತು, ಆದರೆ ಆ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳಲು, ಡೆಲ್ಲಿ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. ಸೋಮವಾರದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಕೇವಲ 75 ರನ್ನಿಗೆ ಡೆಲ್ಲಿ ಆಲೌಟ್ ಆಯಿತು. ಆರ್ಸಿಬಿ, ಬೌಲರ್?ಗಳ ಬೌಲಿಂಗ್?ಗೆ ಡೆಲ್ಲಿ ಬ್ಯಾಟರ್ ಬಳಿ ಉತ್ತರವಿರಲಿಲ್ಲ.
ಎರಡು ದಿನಗಳ ಅಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಎರಡು ಸೋಲು, ಅದೂ ಅವಮಾನಕಾರಿ ಸೋಲು. ಒಂದು, ಬೃಹತ್ ಮೊತ್ತವನ್ನು ಪೇರಿಸಿದರೂ, ಮ್ಯಾಚ್ ಗೆಲ್ಲಲಾಗಲಿಲ್ಲ. ಇನ್ನೊಂದು ಕೇವಲ 75ರನ್ನಿಗೆ ಆಲೌಟ್ ಆಗುವ ಮೂಲಕ, ಕೆಟ್ಟ ದಾಖಲೆಯ ಮೂಲಕ ಸೋಲು ಅನುಭವಿಸುವಂತಾಯಿತು. ಈ ಎರಡು ಸೋಲಿನ ಬಗ್ಗೆ ನಾಯಕ ಅಕ್ಷರ್ ಪಟೇಲ್ ಪ್ರತಿಕ್ರಿಯೆ ನೀಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸತತ ಸೋಲಿನಿಂದ ನಾಯಕ ಅಕ್ಷರ್ ಪಟೇಲ್ ತೀವ್ರ ಗೊಂದಲಕ್ಕೆ ಒಳಗಾದಂತೆ ಕಾಣುತ್ತಿದ್ದಾರೆ. ನನಗೂ ಏನಾಯಿತು ಎಂದು ತಿಳಿದಿಲ್ಲ. ಅದಕ್ಕಾಗಿಯೇ, ನಮ್ಮ ತಂಡದ ಬಳಿ ಯಾವಾಗಲೂ ಹೇಳುತ್ತಿರುತ್ತೇನೆ, ಕ್ರಿಕೆಟ್ನಲ್ಲಿ ಯಾವಾಗಲೂ ಜಾಗರೂ
ಕರಾಗಿರಬೇಕು ಎಂದು. ಹಿಂದಿನ ಎರಡು ಸೋಲುಗಳನ್ನು ಮರೆತು, ಟೂರ್ನಮೆಂಟ್ನ ಮುಂದಿನ ಪಂದ್ಯಗಳನ್ನು ಆಡಬೇಕಿದೆ ಎಂದು ಅಕ್ಷರ್ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ದದ ಒಂದು ರನ್ ಸೋಲಿನ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ರನ್ ಓಡಲು ನಿರಾಕರಿಸಿದ್ದು ಡಿಸಿ ತಂಡದ ಮೇಲೆ ಪ್ರಭಾವವನ್ನು ಬೀರಿತ್ತು. ಅದೇ ರೀತಿ, ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಕರುಣ್ ನಾಯರ್, ಸುಲಭವಾದ ಕ್ಯಾಚ್ ಅನ್ನು ಹಿಡಿದಿದ್ದರೆ ಪಂದ್ಯದ ಗತಿ ಬದಲಾಗುತ್ತಿತ್ತೋ ಏನೋ? ಕ್ರಿಕೆಟ್ನಲ್ಲಿ ಒಂದು ವೇಳೆ, ಆದರೆ ಎಂಬ ಮಾತುಗಳಿಗೆ ಜಾಗವಿಲ್ಲ. ನಾವು ಸಕಾರಾತ್ಮಕವಾಗಿ ಇರಬೇಕು ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.
ಭುವಿ (ಭುವನೇಶ್ವರ್ ಕುಮಾರ್) ಅವರ ಎರಡನೇ ಬಾಲ್ನಲ್ಲೇ ಸಾಹಿಲ್ ಪರಕ್ ಕ್ಲೀನ್ ಬೌಲ್ಡ್ ಆದರು. ಆವೇಳೆ ಹೆಚ್ಚಿನ ಸ್ವಿಂಗ್ ಇತ್ತು ಎನ್ನುವುದನ್ನು ಅಕ್ಷರ್ ಪಟೇಲ್ ಒಪ್ಪಿಕೊಳ್ಳಲಿಲ್ಲ. “ನನಗೇನು ಅಚ್ಚರಿಯಾಗಲಿಲ್ಲ, ಅವರು ವಿಶ್ವದರ್ಜೆಯ ಬೌಲರ್ಗಳು. ಎಲ್ಲಾ ಮೈದಾನಗಳಲ್ಲೂ ಚೆಂಡನ್ನು ಸ್ವಿಂಗ್ ಮಾಡುತ್ತಾರೆ. ಆದರೆ, ನಮ್ಮ ಆರಂಭಿಕರು ಅಥವಾ ಅಗ್ರ ಕ್ರಮಾಂಕದ ಬ್ಯಾಟರ್ಗಳು ಅವರನ್ನು ಎದುರಿಸಿ ಆಡಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು” ಎಂದು ಅಕ್ಷರ್ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ. ಕೆಎಲ್ ರಾಹುಲ್ ಮತ್ತು ನಿತೀಶ್ ರಾಣಾ, ಶಾರ್ಟ್ ಬಾಲ್ ಮೂಲಕ ಔಟಾದರು.
`ಆರ್.ಸಿ.ಬಿ ವಿರುದ್ಧ ಹೀನಾಯ ಸೋಲು : ಏನಾಯಿತೋ ನನಗೆ ಗೊತ್ತಿಲ್ಲ’



