ಕೋಲ್ಕತಾ: ಉತ್ತಮ ಫಾರ್ಮ್ನಲ್ಲಿರುವ ಕೋಲ್ಕತಾ ನೈಟ್ರೈಡರ್ ತಂಡವು ಶುಕ್ರವಾರ ನಡೆಯುವ ಐಪಿಎಲ್ ಪಂದ್ಯದಲ್ಲಿಸಾಧಾರಣ ತಂಡವಾದ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದು ಗೆಲುವಿನ ಉತ್ಸಾಹದಲ್ಲಿದೆ. ಬ್ಯಾಟಿಂಗ್ ಪ್ರಯತ್ನದಿಂದಲೇ ಹೆಚ್ಚಿನ ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದ್ದ ಕೆಕೆಆರ್ ತಂಡವು ಬೌಲರ್ಗಳೂ ಉತ್ಕೃಷ್ಟ ನಿರ್ವಹಣೆ ನೀಡಲಿ ಎಂದು ಹಾರೈಸುತ್ತಿದೆ.
ಅಂಕಪಟ್ಟಿಯಲ್ಲಿ 10 ಅಂಕ ಹೊಂದಿರುವ ಕೆಕೆಆರ್ ತಂಡವು ದ್ವಿತೀಯ ಸ್ಥಾನದಲ್ಲಿದೆ. 14 ಅಂಕ ಹೊಂದಿರುವ ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನದಲ್ಲಿದೆ. ಅಗ್ರ ಕ್ರಮಾಂಕದ ಆಟಗಾರರು ಪ್ರಚಂಡ ಆಟ ಪ್ರದರ್ಶಿಸುತ್ತಿದ್ದಾರೆ. ಸುನೀಲ್ ನಾರಾಯಣ್ (286), ಫಿಲ್ ಸಾಲ್ಟ್ (249) ಬಿರುಸಿನ ಆಟ ಆಡಿದ್ದರೆ ಆಯಂಡ್ರೆ ರಸೆಲ್ (155), ನಾಯಕ ಶ್ರೇಯಸ್ ಅಯ್ಯರ್ (190) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರಿಂಕು ಸಿಂಗ್ ಕೂಡ ಮಿಂಚಿದ್ದಾರೆ.