ಬೆಂಗಳೂರು: ಬೆಂಗಳೂರು ಸಂಚಾರಿ ಉತ್ತರ ವಿಭಾಗದ ಪೊಲೀಸರು ಅವ್ಯಾಹತವಾಗಿ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುತ್ತಾರೆ.
ಪಾದಚಾರಿ ರಸ್ತೆ ಮೇಲೆ ದ್ವಿಚಕ್ರ ವಾಹನ ಚಾಲನೆ ಮತ್ತು ಪಾದಚಾರಿ ರಸ್ತೆಯಲ್ಲಿ ತಳ್ಳುವ ಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರ ವಿರುದ್ಧ, ಕರ್ಕಾಶ ಹಾರನ್, ಕರ್ಕಶ ಸೈಲೆನ್ಸರ್, ನೀರಿನ ಟ್ಯಾಂಕರ್ ಗಳ ಮೇಲೆ, ಬಿಬಿಎಂಪಿ ವಾಹನಗಳ ಮೇಲೆ, ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವ ವಿರುದ್ಧ ಹಾಗೂ ಇತರೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಿರುದ್ಧ ಕ್ರಮ ಕೈಗೊಂಡಿರುತ್ತಾರೆ. ಮೇ 16 ರಿಂದ ಮೇ 23ರ ತನಕ ಈ ವಿಶೇಷ ತಪಾಸಣೆ ನಡೆದಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.