ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ರಿಲೀಸ್ಗೂ ಮುನ್ನ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿತ್ತು. ಸೆನ್ಸಾರ್ ಮಾಡಿಸುವುದಕ್ಕೆ ಪರದಾಡಿದ್ದ ಸಿನಿಮಾ ಬಳಿಕ ಇಡೀ ಸಿನಿಮಾ ಸೋರಿಕೆಯಾಗಿತ್ತು. ಈಗ ಮತ್ತೊಬ್ಬ ತಮಿಳಿನ ಸ್ಟಾರ್ ನಟನ ಸಿನಿಮಾ ಸೋರಿಕೆಯಾಗಿದೆ. ಸೂರ್ಯ ಹಾಗೂ ತ್ರಿಶಾ ನಟನೆಯ `ಕರುಪ್ಪು’ ಸಿನಿಮಾ ಸೋರಿಕೆಯಾಗಿದ್ದು, ತಮಿಳು ಚಿತ್ರರಂಗದಲ್ಲಿ ಆತಂಕ ಮೂಡಿಸಿದೆ.
ಸೂರ್ಯ ಹಾಗೂ ತ್ರಿಶಾ ನಟನೆಯ ಈ ಸಿನಿಮಾ ಈ ವಾರ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾಗೆ ಫೈನಾನ್ಸ್ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಸೂರ್ಯ ಸಿನಿಮಾ ಇತ್ತೀಚೆಗೆ ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗುತ್ತಿದೆ. ಹೀಗಾಗಿ ‘ಕರುಪ್ಪು’ ಸಿನಿಮಾದ ಮೇಲೆ ಎಲ್ಲರ ಕಣ್ಣು ಇತ್ತು. ಈ ಸಿನಿಮಾವಾದರೂ ಬಾಕ್ಸಾಫೀಸ್ನಲ್ಲಿ ಗೆಲ್ಲಬಹುದೇ ಎಂದು ಎದುರು ನೋಡುತ್ತಿದ್ದರು.
ಇನ್ನೇನು ಸಿನಿಮಾ ರಿಲೀಸ್ ಆಗಬೇಕು ಎನ್ನುವಷ್ಟರಲ್ಲೇ ಸಿನಿಮಾ ಫೈನಾನ್ಸ್ ಸಮಸ್ಯೆಯಿಂದ ಬಿಡುಗಡೆಯಾಗುವುದು ಅನುಮಾನ ಎನ್ನಲಾಗಿದೆ. ಒಂದು ವೇಳೆ ಎಲ್ಲಾ ಸರಿಯಿದ್ದಿದ್ದರೆ, ಇಂದು (ಮೇ 15) ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ನಿರ್ಮಾಪಕರು ಸಿನಿಮಾ ಬಿಡುಗಡೆಗೆ ಶ್ರಮಿಸುತ್ತಿದ್ದರೆ, ಇನ್ನೊಂದು ಕಡೆ ಪುಣೆಯಂತಹ ನಗರದಲ್ಲಿ ‘ಕರುಪ್ಪು’ ಸಿನಿಮಾ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
`ಕರುಪ್ಪು’ ಸಿನಿಮಾ ತಮಿಳುನಾಡಿನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಆದರೆ, ಈ ಸಿನಿಮಾದ ನಿರ್ಮಾಪಕರಾದ ಎಸ್.ಆರ್. ಪ್ರಭು ಮತ್ತು ಡಿ. ಶಿವ ತಮ್ಮ ಹಣಕಾಸಿನ ಬಿಕ್ಕಟ್ಟನ್ನು ಸರಿಪಡಿಸಿಕೊಂಡಿಲ್ಲ. ಹೀಗಾಗಿ ಸಿನಿಮಾ ಬಿಡುಗಡೆ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಅವರು ಫೈನಾನ್ಸ್ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದೇ ಆದರೆ ಮಾತ್ರ ರಿಲೀಸ್ ಆಗಲಿದೆ. ಸದ್ಯ ಈ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ.
ತಮಿಳು ಮಾಧ್ಯಮಗಳು ಈಗಾಗಲೇ ವರದಿ ಮಾಡಿರುವಂತೆ ನಿರ್ಮಾಪಕರು 54 ಕೋಟಿ ರೂಪಾಯಿ ಸಾಲದಲ್ಲಿ ಇದ್ದಾರೆ. ಇನ್ನು ಕೆಲವ ವರದಿಗಳು ರೂ.90 ಕೋಟಿ ಎಂದು ಹೇಳಿವೆ. ಇನ್ನು ಕೆಲವು ವರದಿಗಳಲ್ಲಿ 28 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸಿನಿಮಾ ಅಂತೂ ಫೈನಾನ್ಸ್ ಸಮಸ್ಯೆಯಿಂದ ಬಿಡುಗಡೆ ತಡ ಆಗುತ್ತಿರುವುದು ಪಕ್ಕಾ ಆಗಿದೆ. ಮೂಲಗಳ ಪ್ರಕಾರ ಮೇ 15 ರಾತ್ರಿಯೊಳಗೆ ಸಿನಿಮಾ ರಿಲೀಸ್ ಆಗಬಹುದು.
ಈ ಗ್ಯಾಪ್ನಲ್ಲಿಯೇ ‘ಕರುಪ್ಪು’ ಸಿನಿಮಾ ಪುಣೆ ಅಂತಹ ನಗರದಲ್ಲಿ ಲೀಕ್ ಆಗಿರುವುದು ಬೆಳಕಿಗೆ ಬಂದಿದೆ. ಅಲ್ಲಿನ ಕೆಲವು ಥಿಯೇಟರ್ಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಹೀಗಾಗಿ ಸಿನಿಮಾ ‘ಜನ ನಾಯಗನ್’ನಂತಯೇ ಎಚ್ಡಿ ಕ್ವಾಲಿಟಿಯಲ್ಲಿ ಸೋರಿಕೆಯಾಗುವ ಭಯ ಚಿತ್ರತಂಡವನ್ನು ಕಾಡುತ್ತಿದೆ. ಕ್ಯೂಬ್ನಿಂದ ಸಿನಿಮಾ ಹೇಗೆ ಸೋರಿಕೆ ಆಯ್ತು, ಸುಮಾರು 140 ಕೋಟಿ ರೂಪಾಯಿ ವೆಚ್ಚದ ಈ ಸಿನಿಮಾ ಲೀಕ್ ಆಗಿದ್ದೇ ಆದರೆ, ತೀವ್ರ ನಷ್ಟ ಆಗುತ್ತೆ ಎಂದು ನಿರ್ಮಾಪಕರು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತ ಸೂರ್ಯ ಸಿನಿಮಾ ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿದೆ. ‘ಸೂರರೈ ಪೊಟ್ರು’ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಆ ನಂತರ ಬಿಡುಗಡೆಯಾದ ಸೂರ್ಯ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಗಟ್ಟಿಯಾಗಿ ನಿಲ್ಲುತ್ತಿಲ್ಲ. ‘ಎದರ್ಕುಮ್ ತುಣಿಂಧವನ್’,’ಕAಗುವಾ’,’ರೆಟ್ರೋ’ದAತಹ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಗೆಲ್ಲುವಲ್ಲಿ ಹಿಂದೆ ಬಿದ್ದಿದೆ. ಹೀಗಾಗಿ ಸೂರ್ಯ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸೋಲುತ್ತಿರುವ ಬೆನ್ನಲ್ಲೇ ‘ಕರುಪ್ಪು’ ಗೆಲ್ಲಬಹುದೆಂಬ ನಿರೀಕ್ಷೆ ಇದೆ. ಇನ್ನೊಂದು ಕಡೆ ಮೇ 15ರ ಮಧ್ಯಾಹ್ನದ ವೇಳೆಗೆ ಸಿನಿಮಾ ಪ್ರದರ್ಶನ ಕಾಣುವ ನಿರೀಕ್ಷೆಯಿದೆ.
`ಜನ ನಾಯಗನ್’ ನಂತೆಯೇ `ಕರುಪ್ಪು’ ಮೂವಿ ಲೀಕ್..



