ಪನ್ನಗ ಹಾಗೂ ಸ್ನೇಹಿತರು, ನಿರ್ದೇಶಕ ವಿಶ್ವಾಸ್ ಕೃಷ್ಣ ಸುಮ್ನೆ ತಮಾಷೆಗೆಚಿತ್ರಕ್ಕೆ ಹಣ ಹಾಕುತ್ತಿದ್ದಾರೆ.
ಸುರೇಶ್ ಬಾಬು ಸುಮ್ನೆ ತಮಾಷೆಗೆ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಅವರು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ. ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ಬೆಂಗಳೂರಿನ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನೆರವೇರಿತು. ಪಟೇಲ್ ವರುಣ್ ರಾಜು ಸುಮ್ನೆ ತಮಾಷೆಗೆ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಯುವ ಪ್ರತಿಭೆಗಳಾದ ಹರೀಶ್, ದರ್ಶನ್ ಹಾಗೂ ಮಾಧವ ತಾರಾಬಳಗದಲ್ಲಿದ್ದಾರೆ. ಸಾಮ್ರಾಟ್ ಮ್ಯೂಸಿಕ್, ಪುನೀತ್ ಓಂಕಾರ್ ಸ್ಟಂಟ್ ಕೊರಿಯೋಗ್ರಫಿ ಚಿತ್ರಕ್ಕಿದೆ.
`ಸುಮ್ನೆ ತಮಾಷೆಗೆ’ ಸಿನಿಮಾದ ಸ್ಕ್ರಿಪ್ಟ್ಗೆ ಪೂಜೆ



