ಅಹಮದಾಬಾದ್: ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಿಸ್ಟರಿ ರಿಪೀಟ್ಸ್ ಎಂಬಂತೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗುವ ಮೂಲಕ ಐ.ಪಿ.ಲ್ ಟ್ರೋಫಿಯನ್ನು ಜಯಿಸಿದೆ. ರಾಯಲ್ಸ್ ಪಾಳೆಯವನ್ನು ಗೆಲುವಿನ ಹಾದಿಗೆ ನಡೆಸಿದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಸಹ ತಂಡದ ಗೆಲುವಿನ ಜೊತೆಗೆ ಹಲವು ದಾಖಲೆಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದು, ಫೈನಲ್ಸ್ ಮ್ಯಾಚ್ನಲ್ಲಿ 42 ಎಸೆತಗಳಲ್ಲಿ 75ರನ್ಗಳನ್ನು ಬಾಚಿಕೊಳ್ಳುವ ಮೂಲಕ ತಂಡಕ್ಕೆ ಬಲ ತುಂಬಿದ್ದು, ಪಂದ್ಯಶ್ರೇಷ್ಠ ಪ್ರಶಸ್ತಿ ಗೆದಿದ್ದಾರೆ.



