ಐಪಿಎಲ್ 2026ನ ಮತ್ತೊಂದು ದೊಡ್ಡ ಮೊತ್ತ ಕಂಡ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ ಗಳ ಜಯಭೇರಿ ಬಾರಿಸಿದೆ. ಈ ಮೂಲಕ ಪ್ಯಾಟ್ ಕಮಿನ್ಸ್ ಬಳಗ ಸತತ 5 ಪಂದ್ಯಗಳಲ್ಲಿ ಗೆಲುವು ಕಾಣುವ ಮೂಲಕ ಸೀಸನ್ ನಲ್ಲಿ ಅತ್ಯಂತ ಪ್ರಬಲ ತಂಡವಾಗಿ ಮೂಡಿ ಬಂದಿದೆ. ಜೊತೆಗೆ ಆಡಿರುವ ಒಟ್ಟು 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು 12 ಅಂಕಗಳನ್ನು ಕಲೆ ಹಾಕಿರುವ ಸನ್ ರೈಸರ್ಸ್ ಇದೀಗ ಐಪಿಎಲ್ ಅಂಕಪಟ್ಟಿಯಲ್ಲಿ 12 ಅಂಕಗಳೊAದಿಗೆ 3ನೇ ಸ್ಥಾನದಲ್ಲಿ ವಿರಾಜಮಾನವಾಗಿದೆ. ಇದೇವೇಳೆ ಆಡಿರುವ 8 ಪಂದ್ಯಗಳಲ್ಲಿ ಕೇವಲ 2ನ್ನು ಮಾತ್ರ ಗೆದ್ದಿರುವ ಮುಂಬೈ ಇಂಡಿಯನ್ಸ್ ಇದೀಗ ಪ್ಲೇ ಆಫ್ ರೇಸ್ ನಲ್ಲಿ ಬಹುತೇಕ ಹೊರಬಿದ್ದಿದೆ.ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್ 29ರ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 243 ರನ್ ಗಳಿಸಿತು. ಇದಕ್ಕುತ್ತರವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಇನ್ನೂ 8 ಎಸೆತಗಳು ಬಾಕಿ ಉಳಿದಿರುವಂತೆ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇದು ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಯಾವುದೇ ತಂಡ ಮಾಡಿರುವ ಅತಿ ದೊಡ್ಡ ರನ್ ಚೇಸ್ ಆಗಿದೆ ಮತ್ತು ಸನ್ ರೈಸರ್ಸ್ ತಂಡ ಯಾವುದೇ ತಂಡದ ವಿರುದ್ಧ ಮಾಡಿರುವ 2ನೇ ಅತಿ ದೊಡ್ಡ ರನ್ ಚೇಸ್ ಆಗಿದೆ.
ಅಭಿಷೇಕ್- ಹೆಡ್ ಭರ್ಜರಿ ಆರಂಭಬೃಹತ್ ಗುರಿ ಪಡೆದರೂ ಸನ್ ರೈಸರ್ಸ್ ಆರಂಭಿಕರಾದ ಅಭಿಷೇಕ್ ಶರ್ಮಾ(24 ಎಸೆತದಲ್ಲಿ 45 ರನ್) ಮತ್ತು ಟ್ರಾವಿಸ್ ಹೆಡ್(30 ಎಸೆತದಲ್ಲಿ 76 ರನ್) ಅವರು ವಿಚಲಿತರಾಗದೆ ರನ್ ಕೊಳ್ಳೆ ಹೊಡೆಯತೊಡಗಿದರು. ಪವರ್ ಪ್ಲೇನ 6 ಓವರ್ ನಲ್ಲಿ ಇವರಿಬ್ಬರು 92 ರನ್ ಪೇರಿಸಿದ್ದು ತಂಡಕ್ಕೆ ವರದಾನವಾಯಿತು.
ರಾನ್ ರಿಕೆಲ್ಟನ್ ಸೆಂಚುರಿ ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್ ರಾನ್ ರಿಕೆಲ್ಟನ್ ಅವರ ಶೋ ಆಗಿ ಪರಿವರ್ತಿತವಾಗಿತ್ತು. ಕೇವಲ 44 ಎಸೆತಗಳಲ್ಲಿ ಶತಕ ಬಾರಿಸಿದ ಅವರು ವಿಲ್ ಜಾಕ್ಸ್ (46 ಎಸೆತದಲ್ಲಿ 46 ರನ್) ಅವರ ಜೊತೆ ಮೊದಲ ವಿಕೆಟ್ ಗೆ 7.1 ಓವರ್ ಗೆ 93 ರನ್ ಗಳ ಜೊತೆಯಾಟವಾಡಿದರು. ಕೊನೆಯವರೆಗೂ ಅಜೇಯರಾಗುಳಿದ ಅವರು 55 ಎಸೆತಗಳಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್ ಗಳನ್ನು ಒಳಗೊಂಡ 123 ರನ್ ಗಳಿಸಿದರು. ಅಂತಿಮ ಓವರ್ ಗಳಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅವರು 15 ಎಸೆತಗಳಲ್ಲಿ 31 ರನ್ ಗಳಿಸಿದರು. ಹೈದರಾಬಾದ್ ಪರ ಪ್ರಫುಲ್ ಹಿಂಗೆ 54 ರನ್ ಗೆ 2 ವಿಕೆಟ್ ಗಳಿಸಿದರು.
ಬೃಹತ್ ಮೊತ್ತವನ್ನೂ ಉಳಿಸಿಕೊಳ್ಳಲಾಗದ ಮುಂಬೈ ಇಂಡಿಯನ್ಸ್



