LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ

ವಿಜಯಪುರ: ಪಕ್ಷದ ಅಧ್ಯಕ್ಷರ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ಇದ್ದೇ ಇರುತ್ತೆ. ಈ ವಿಚಾರವಾಗಿ ಪ್ರಹ್ಲಾದ್ ಜೋಶಿ ಹೇಳಿರುವುದು ಸರಿಯಿದೆ. ಯಾರು ಅಧ್ಯಕ್ಷರು ಆಗುತ್ತಾರೆಂಬುದನ್ನು ಕೇಂದ್ರಕ್ಕೆ ಬಿಡುತ್ತೇವೆ. ಈಗ ಇರುವುದು ಹಂಗಾಮಿ ಅಧ್ಯಕ್ಷರು. ಕೇಂದ್ರ ಸಚಿವ ಪ್ರಹ್ಲಾದ್​​​ ಜೋಶಿ ಹೇಳಿಕೆ ನೀಡಿರುವುದು ಸರಿಯಿದೆ. ಪ್ರಹ್ಲಾದ್ ಜೋಶಿ ನಮ್ಮ ಪಕ್ಷದ ನಿಯಮಗಳ ಬಗ್ಗೆ ಹೇಳಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದ್ದಾರೆ.

ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಜೋಶಿ ಅವರು ನಮ್ಮ ಪಕ್ಷದ ನಿಯಮಗಳ ಬಗ್ಗೆ ಹೇಳಿದ್ದಾರೆ. ಅದನ್ನು ವಿವಾದ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಯತ್ನಾಳ್, ಚುನಾವಣೆ ಆಗಲ್ಲ. ಸಹಮತ ಮಾಡಿಕೊಂಡು ರಾಜ್ಯಾಧ್ಯಕ್ಷರ ಆಯ್ಕೆ ಮಾಡುವ ಪದ್ದತಿಯಿದೆ. ಚುನಾವಣಾ ಆಯೋಗದ ನಿಬಂಧನೆಗಳು ಇವೆ. ಈ ನಿಬಂಧನೆಗಳನ್ನು ಪಾಲನೆ ಮಾಡಿ ರಾಷ್ಟ್ರೀಯ ಆಧ್ಯಕ್ಷರ ಸೂಚನೆ ಮೇರೆಗೆ ಘೋಷಣೆ ಆಗುತ್ತದೆ. ಜಿಲ್ಲಾ ಘಟಕದ ಆಧ್ಯಕ್ಷರ ಬದಲಾವಣೆಯೂ ಆಗಲಿದೆ ಎಂದ ಬಾಂಬ್ ಸಿಡಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST