LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕಾಂಗ್ರೆಸ್ ಸೇರ್ಪಡೆಯಾದ ಒಂದೇ ದಿನದಲ್ಲಿ ತಗ್ಗೀಕುಪ್ಪೆ ಗ್ರಾಪಂ ಅಧ್ಯಕ್ಷೆ

ಮಾಗಡಿ: ಕಳೆದ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಾಗಿ ಚುನಾಯಿತರಾಗಿದ್ದ ತಗ್ಗೀಕುಪ್ಪೆಯ ತೇಜಶ್ವಿನಿ ರಮೇಶ್ ಅವರು ಶಾಸಕ ಹೆಚ್.ಸಿ.ಬಾಲಕೃಷ್ಣರವರ ಸ್ವಗೃಹದಲ್ಲಿ ಕೈ ಮುಖಂಡ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಬ್ಯಾಲದಕೆರೆ ಚಿಕ್ಕರಾಜು, ಮಹೇಶ್, ಮದಲಾರಯ್ಯನಪಾಳ್ಯ ರಾಜಣ್ಣ ಅವರ ನೇತೃತ್ವದಲ್ಲಿ ಜೆಡಿಎಸ್ ತೊರೆದಿದ್ದ ಇವರು ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.ಗುರುವಾರ ನಡೆದ ಗ್ರಾಪಂ ಅದ್ಯಕ್ಷೀಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅದ್ಯಕ್ಷೆಯಾಗಿ ತೇಜಶ್ವಿನಿ ರಮೇಶ್ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ತಮ್ಮ ಪ್ರತಿಸ್ಪರ್ಧಿಗಳಿಗಿಂತ ನಾಲ್ಕು ಮತಗಳ ಅಂತರದಿಂದ ಗೆಲುವು ಸಾಧಿಸಿ ತಗ್ಗೀಕುಪ್ಪೆ ಗ್ರಾಪಂಗೆ ನೂತನ ಅದ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.ಇನ್ನು ಉಪಾದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿಂದಿನ ಅದ್ಯಕ್ಷ ಮದಲಾರಯ್ಯನಪಾಳ್ಯ ರಾಜಣ್ಣ ಅವರೂ ಕೂಡಾ ಹತ್ತು ಮತಗಳನ್ನು ಪಡೆದು ಉಪಾದ್ಯಕ್ಷರಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.

ನೂತನ ಅದ್ಯಕ್ಷೆ ತೇಜಶ್ವಿನಿ ರಮೇಶ್ ಮಾತನಾಡಿ ನಾನು ತಗ್ಗೀಕುಪ್ಪೆ ಗ್ರಾಪಂ ಅದ್ಯಕ್ಷೆಯಾಗಲು ಅನುವುಮಾಡಿಕೊಟ್ಟಿರುವ ಶಾಸಕ ಹೆಚ್.ಸಿ.ಬಾಲಕೃಷ್ಣ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಎನ್.ಅಶೋಕ್ ಪೂಜಾರಿಪಾಳ್ಯ ಕೃಷ್ಣಮೂರ್ತಿ ಜಿಪಂ ಮಾಜಿ ಸದಸ್ಯ ಬೆಳಗುಂಬ ವಿಜಯಣ್ಣ ಜೆ.ಪಿ.ಚಂದ್ರೇಗೌಡ ಮತ್ತು ನನಗೆ ಬೆಂಬಲ ವ್ಯಕ್ತಪಡಿಸಿದ ಸದಸ್ಯರಿಗೆ ಅಭಾರಿಯಾಗಿರುತ್ತೇನೆ. ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೂ ರಸ್ತೆ ಚರಂಡಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಉಪಾದ್ಯಕ್ಷ ಮದರಾಯ್ಯನಪಾಳ್ಯ ರಾಜಣ್ಣ ಮಾತನಾಡಿ ಈ ಹಿಂದೆ ನಾವು ಇದೇ ಪಂಚಾಯತಿಯಲ್ಲಿ ಅಧಿಕಾರ ಹಿಡಿಯಲು ಮಾಜಿ ಸಂಸದ ಡಿ.ಕೆ.ಸುರೇಶ್ ಅಂದು ಮಾಜಿ ಶಾಸಕ ಬಾಲಕೃಷ್ಣ ಬೆಳಗುಂಬ ವಿಜಯಣ್ಣ ಜೆ.ಪಿ.ಚಂದ್ರೇಗೌಡ ಸೇರಿದಂತೆ ಮತ್ತಿತರರು ಸಾಕಷ್ಟು ಹರಸಾಹಸ ಪಟ್ಟಿದ್ದೆವು.ಇದೇ ಪೂಜಾರಿಪಾಳ್ಯ ಕೃಷ್ಣಮೂರ್ತಿ ಅವರು ಅಂದು ಜೆಡಿಎಸ್ ಪಕ್ಷದಲ್ಲಿದ್ದರು ಇದೀಗ ನಮ್ಮಲ್ಲಿ ಬಂದಿರುವುದು ಸ್ವಾಗತಾರ್ಹ.ಮೀಸಲಾತಿ ಇದ್ದದ್ದರಿಂದ ಶಾಸಕರು ನೀನೇ ಉಪಾದ್ಯಕ್ಷನಾಗು ಎಂಬ ಸೂಚನೆಯಂತೆ ಉಪಾದ್ಯಕ್ಷನಾಗಿದ್ದು ಪಂಚಾಯತಿ ಅಭಿವೃದ್ಧಿಗೆ ನೂತನ ಅದ್ಯಕ್ಷರ ಜೊತೆಗೂಡಿ ಶ್ರಮಿಸಲಾಗುವುದು ಎಂದು ರಾಜಣ್ಣ ಸ್ಪಷ್ಟಪಡಿಸಿದರು.

ಸದಸ್ಯರಾದ ತೇಜಶ್ವಿನಿ ಚಿಕ್ಕರಾಜು, ಕುಮಾರ್, ರಮೇಶ್, ವಿ.ಮುರಳೀಧರ್, ಭೈರಪ್ಪ, ಬ್ಯಾಟಮ್ಮ, ಗೌರಮ್ಮ, ಗಿರಿಜಮ್ಮ, ಎಚ್.ಹನುಮೇಗೌಡ, ಮೋಹನ್, ಮುನಿರತ್ನಮ್ಮ, ಎಸ್.ಸಿ.ಎಸ್.ಟಿ.ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಚಿಕ್ಕರಾಜು, ಹೊಸಹಳ್ಳಿ ಪುಟ್ಟಸ್ವಾಮಿ, ಸಿದ್ದರಾಜು, ಕುಮಾರ್, ಪಿಡಿಒಎಸ್.ಆರ್.ನರಸಿಂಹಮೂರ್ತಿ, ಸಿಬ್ಬಂದಿಗಳಾದ ಜಯರಾಮ್, ರೇವಣ್ಣಸಿದ್ದಯ್ಯ ಸೇರಿದಂತೆ ಮತ್ತಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು