LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕುಂಭಮೇಳ: ಚುಂಚಶ್ರೀಗಳಿಂದ ಸಿದ್ಧತಾ ಪರಿಶೀಲನೆ

ತಿ.ನರಸೀಪುರ: ಕಾವೇರಿ, ಕಪಿಲ, ಸ್ಪಟಿಕ ಸರೋವರ ತ್ರಿವೇಣಿ ಸಂಗಮ ಕ್ಷೇತ್ರ ಎಂದೇ ಪ್ರಖ್ಯಾತಿ ಹೊಂದಿರುವ ತಿರುಮಕೂಡಲು ಕ್ಷೇತ್ರದಲ್ಲಿ ಫೆ.10 ಸೋಮವಾರದಿಂದ ಮೂರು ದಿನಗಳ ಕಾಲ ಕುಂಭಮೇಳ ನಡೆಯಲಿರುವ ಹಿನ್ನೆಲೆಯಲ್ಲಿ ಆದಿ ಚುಂಚನಗಿರಿ ಶ್ರೀಕ್ಷೇತ್ರದ ಶ್ರೀ ನಿರ್ಮಲಾನಂದ ಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ಪಟ್ಟಣದ ಆದಿಚುಂಚನಗಿರಿ ರಜತೋತ್ಸವ ಕಲ್ಯಾಣ ಮಂಟಪದಲ್ಲಿ ಆದಿಚುಂಚನಗಿರಿ ಶ್ರೀಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಉಪವಿಭಾಗಾಧಿಕಾರಿ ರಕ್ಷಿತ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿ,ತಿರುಚ್ಚಿ ಬುದ್ಧ ಸ್ವಾಮೀಜಿ ಹಾಗು ಟಿ ನರಸೀಪುರದ ದೊರೆಸ್ವಾಮಿ ಸ್ವಾಮೀಜಿ ಗಳೊಂದಿಗೆ 13ನೇ ಕುಂಭಮೇಳದ ಸಿದ್ಧತೆ ಬಗ್ಗೆ ಮಾಹಿತಿ ಪಡೆದು ಶ್ರೀಗಳು ನಂತರ ತೆಪ್ಪದಲ್ಲಿ ಸಂಗಮಕ್ಕೆ ತೆರಳಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿ ಆಗಬೇಕಾದ ಕೆಲ ಮಾರ್ಪಾಡುಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಈ ವೇಳೆ ಶ್ರೀಗಳಿಗೆ ಸಿದ್ಧತಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಉಪ ವಿಭಾಗಾಧಿಕಾರಿ ರಕ್ಷಿತ್ ನದಿಯಲ್ಲಿ ಮರಳು ಪ್ರಮಾಣ ಇಲ್ಲದಿರುವ ಕಾರಣ ನದಿ ಮದ್ಯೆ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ಅಗಸ್ತೇಶ್ವರ ಸ್ವಾಮಿ ದೇವಸ್ಥಾನ ಹಾಗು ಆಸು ಪಾಸಿನಲ್ಲಿ ನಡೆಸಲಾಗುತ್ತಿದೆ, ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನ ಹಾಗು ಆದಿ ಚುಂಚನಗಿರಿ ಸಮುದಾಯ ಭವನದ ಬಳಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಎರಡು ವೇದಿಕೆಗಳನ್ನು ನಿರ್ಮಿಸಲಾಗಿದೆ,ತ್ರಿವೇಣಿ ಸಂಗಮದ ನದಿ ತಟದಲ್ಲಿ ಸ್ವಾಮೀಜಿಗಳು ತಂಗಲು ಕುಟೀರ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಭಕ್ತಾಧಿಗಳು ಆತಂಕವಿಲ್ಲದೇ ಪುಣ್ಯ ಸ್ನಾನ ಮಾಡಲು ನದಿಯ ಒಳಗೆ ಗುರುತಿಸಲಾದ ಸ್ಥಳದಲ್ಲಿ ಬ್ಯಾರಿಕೆಡ್ ಗಳನ್ನು ಅಳವಡಿಸಿ ಸುಗಮವಾಗಿ ಅನುವು ಮಾಡಿಕೊಡಲಾಗಿದೆ
ಸಾಧು ಸಂತರು ಮಠಾಧೀಶರಿಗೆ ನಡುಹೊಳೆ ಬಸಪ್ಪನ ಬಳಿ ಸ್ನಾನ ಮಾಡಲು ಅವಕಾಶ ಮಾಡಿಕೊಡಲಾಗಿದ್ದು ಅವರಿಗೆ ಬಟ್ಟೆ ಬದಲಿಸಲು ನದಿ ಮದ್ಯೆ ವ್ಯವಸ್ಥೆ ಮಾಡಲಾಗಿದೆ,ಗಣ್ಯರು ಮತ್ತು ಅತಿ ಗಣ್ಯರಿಗೆ ಸ್ನಾನಕ್ಕೆ ಪ್ರತ್ಯೇಕ ಜಾಗ ಗುರುತಿಸಲಾಗಿದೆ ಎಂದು ತಿಳಿಸಿದರು.

ಧಾರ್ಮಿಕ ಸಭೆಗೆ ವಿಶಾಲವಾದ ವೇದಿಕೆ...! ತಿರುಮಕೂಡಲಿನ ಚೌಡಯ್ಯ ಸರ್ಕಲ್ ಹಾಗು ಚೌಡೇಶ್ವರಿ ದೇವಸ್ಥಾನದ ಅನತಿ ದೂರದಲ್ಲಿ ಧಾರ್ಮಿಕ ಸಭೆ ನಡೆಸಲು ವೇದಿಕೆ ನಿರ್ಮಿಸಲಾಗಿದೆ, ಸುಮಾರು 5 ರಿಂದ 8 ಸಾವಿರ ಮಂದಿ ಕೂತು ಧಾರ್ಮಿಕ ಸಭೆ ವೀಕ್ಷಿಸಬಹುದಾದಂತಹ ವಿಶಾಲವಾದ ವೇದಿಕೆ ನಿರ್ಮಿಸಲಾಗಿದೆ.ತ್ರಿವೇಣಿ ಸಂಗಮಕ್ಕೆ ಏಕ ಮುಖ ಸಂಚಾರ...! ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ತೆರಲುವ ಭಕ್ತಾಧಿಗಳಿಗೆ ಈ ಬಾರಿ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ.ತಿರುಮಕೂಡಲಿನ ಚೌಡಯ್ಯ ಸರ್ಕಲ್ ನಿಂದಲೇ ಇದು ಅನ್ವಯವಾಗಲಿದ್ದು, ಅಲ್ಲಿಂದ ಯಾವುದೇ ವಾಹನಗಳ ಓಡಾಟ ನಿಷೇಧ ಮಾಡಲಾಗಿದೆ.ಸರ್ಕಲ್ ನಿಂದ ನಡೆದೇ ತ್ರಿವೇಣಿ ಸಂಗಮ ತಲುಪಬೇಕಿದೆ.

ಸ್ನಾನ ಮುಗಿಸಿ ಅಲ್ಲಿಂದ ಅಗಸ್ತೇಶ್ವರ ಸ್ವಾಮಿ ದೇವಸ್ಥಾನದ ಮೂಲಕ ಆದಿ ಚುಂಚನಗಿರಿ ಕಲ್ಯಾಣ ಮಂಟಪದ ಹಿಂಭಾಗದಿಂದ ತೆರಳಿ ಧಾರ್ಮಿಕ ಸಭೆ ಜಾಗಕ್ಕೆ ತಲುಪಲು ವ್ಯವಸ್ಥೆ ಮಾಡಲಾಗಿದೆ.ನಂಜನಗೂಡು, ಬನ್ನೂರು,ತಲಕಾಡು ಹಾಗು ಕೊಳ್ಳೇಗಾಲದಿಂದ ಬರುವ ವಾಹನಗಳಿಗೆ ಪಟ್ಟಣದ ಮುಖ್ಯ ದ್ವಾರದಲ್ಲೇ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.ವಿಶೇಷ ಚೇತನರು ಹಾಗು ವಯೋವೃದ್ಧರಿಗೆ ತ್ರಿವೇಣಿ ಸಂಗಮಕ್ಕೆ ತೆರಳಲು ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ.ಈ ಸಂದರ್ಭ ತಹಸೀಲ್ದಾರ್ ಸುರೇಶ್ ಚಾರ್, ಸಬ್ ಇನ್ಸ್‍ಪೆಕ್ಟರ್ ಜಗದೀಶ್ ಧೂಳಶೆಟ್ಟಿ, ಸೇರಿದಂತೆ ಸ್ಥಳೀಯ ಮುಖಂಡರುಗಳು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು