LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ನಾನೇ ನಂ.1 ಲೀಡರ್ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

ಹುಬ್ಬಳ್ಳಿ: ನಮ್ಮ ಪಕ್ಷದಲ್ಲಿ ನಾನೇ ನಂಬರ್ ಒನ್ ಲೀಡರ್ ಹಣ ತೆಗೆದುಕೊಂಡು ಸರ್ವೇ ಮಾಡೋದನ್ನು ಬಿಡಲಿ, ಬೋಗಸ್ ಸರ್ವೇ ಬಿಡಬೇಕು. ಸರಿಯಾದ ಸರ್ವೇ ಆಗಬೇಕು. ನಮ್ಮ ಸರ್ವೇ ಪ್ರಕಾರ ನಾನೇ ನಂಬರ್ ಒನ್ ಲೀಡರ್ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳನ್ನು ಸಿಎಂ ಆದಿಯಾಗಿ ಸರ್ಕಾರ ಅಪಮಾನ ಮಾಡುತ್ತಿದೆ. ಹಿಂದೂ ಹೋರಾಟಗಾರರನ್ನು ಜೈಲಿಗೆ ಕಳಿಸುತ್ತಿದ್ದಾರೆ.

ಅದೇ ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ಯುವ ಕೆಲಸ ಮಾಡಿದ್ದಾರೆ. ಅಂತವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೂಗಳ ಭಾವನೆಗೆ ದಕ್ಕೆ ತಂದು, ಹಿಂದೂಗಳ ಸ್ವಾಭಿಮಾನವನ್ನು ಕೆದುಕಿ ರಾಜ್ಯದಲ್ಲಿ ಮತ್ತೊಮ್ಮೆ ಗಲಭೆ ಎಬ್ಬಿಸುವ ಕೆಲಸನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದ್ದಾರೆ.ಮುಸ್ಲಿಂರಿಗೆ ಇಷ್ಟು ಧೈರ್ಯ ಬರಲು ಸಿಎಂ ಸಿದ್ದರಾಮಯ್ಯ, ಡಿಕೆಶಿ ಕಾರಣವಾಗಿದ್ದಾರೆ. ಅವರು ಮುಸ್ಲಿಂರನ್ನು ನಮ್ಮ ಸಹೋದರರು ಎಂದು ಹೇಳುತ್ತಿರುವ ಕಾರಣ ಇಷ್ಟೆಲ್ಲ ನಡೆಯುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಗೆ ಕರ್ನಾಟಕದಲ್ಲಿ ಸೋಲಾಗಲು ಕಾರಣ ಹಿಂದೂಗಳ ರಕ್ಷಣೆ ಮಾಡದೇ ಇರುವುದು. ಬಿಜೆಪಿ ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಹಿಂದೂಗಳು ವಿಧಾನಸಭಾ ಚುನಾವಣೆಯಲ್ಲಿ ಸರಿಯಾದ ಕೆಲಸ ಮಾಡಲಿಲ್ಲ. ಒಂದು ವೇಳೆ ಹಿಂದೂಗಳ ರಕ್ಷಣೆ ಮಾಡಿ, ಕಾನೂನು ಸುವ್ಯವಸ್ಥೆ ಮಾಡಿದಲ್ಲಿ ಉತ್ತರ ಪ್ರದೇಶದ ವಾತಾವರಣ ರಾಜ್ಯದಲ್ಲಿ ಇರುತ್ತಿತ್ತು. ಬಿಜೆಪಿಯಲ್ಲಿ ನಮ್ಮ ತಪ್ಪುಗಳು ಬಹಳಷ್ಟಿವೆ. ಯಡಿಯೂರಪ್ಪ ಏನೂ ಮಾಡಲಿಲ್ಲ, ಶಿವಮೊಗ್ಗದಲ್ಲಿ ನಿಯಂತ್ರಣ ಮಾಡದೇ ಅವರು ರಾಜ್ಯದಲ್ಲಿ ಏನ ಮಾಡತ್ತಾರೆ ಎಂದರು.
ಯತ್ನಾಳ ಅವರು ನಂಬರ್ ಒನ್ ಲೀಡರ್ ಯಾವಾಗ ಆಗತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹಣ ತೆಗೆದುಕೊಂಡು ಸರ್ವೇ ಮಾಡೋದನ್ನು ಬಿಡಲಿ, ಬೋಗಸ್ ಸರ್ವೇ ಬಿಡಬೇಕು. ಸರಿಯಾದ ಸರ್ವೇ ಆಗಬೇಕು. ನಮ್ಮ ಸರ್ವೇ ಪ್ರಕಾರ ನಾನೇ ನಂಬರ್ ಒನ್ ಲೀಡರ್ ಎಂದರು.

ರಾಜ್ಯದಲ್ಲಿ ನಿಗಮಮಂಡಳಿಗಳಿಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ವಾಲ್ಮೀಕಿ ಹಗರಣದಲ್ಲಿ ಮೀಸಲಿಟ್ಟ 187 ಕೋಟಿ ಹಣವನ್ನು ಲೂಟಿ ಮಾಡತ್ತಾರೆ. ಇದೀಗ ಅಭಿವೃದ್ಧಿಗೆ ಯಾವುದೇ ಹಣ ಸರ್ಕಾರದ ಬಳಿಯಿಲ್ಲ. ಇದನ್ನು ಸ್ವತಃ ಸರ್ಕಾರ ಒಪ್ಪಿಕೊಂಡಿದೆ ಎಂದರು. ರಾಜ್ಯ ಸರ್ಕಾರವನ್ನು ನಾವು ಟಾರ್ಗೆಟ್ ಮಾಡುತ್ತಿಲ್ಲ, ಬದಲಾಗಿ ಸಿಟಿ ರವಿ, ನಾನು ಸೇರಿದಂತೆ ಹಿಂದೂಪರವಾಗಿ ಮಾತನಾಡುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅದೇ ವಿಜಯೇಂದ್ರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಇದನ್ನು ನೋಡಿದರೆ ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಜೆಸ್ಟ್ ಮೆಂಟ್ ಇದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯವರು ಗೋಡ್ಸೆ ವಂಶಸ್ಥರು ಎಂಬ ಕಾಂಗ್ರೆಸ್ ನವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗಾಂಧೀಜಿಗೆ ಗೋಡ್ಸೆ ಹೊಡೆದಿದ್ದು ಒಂದೇ ಗುಂಡು, ಇನ್ನೆರಡು ಗುಂಡುಗಳು ಎಲ್ಲಿಂದ ಬಂದವು. ಒಂದು ಗುಂಡು ಗೂಡ್ಸೆ ಹೊಡೆದಿದ್ದು ಎಂದು ಕೋರ್ಟ್ ನಲ್ಲಿ ವಾದ ವಿವಾದ ಆಗಿದೆ.ಇನ್ನೆರಡು ಗುಂಡುಗಳನ್ನು ನೆಹರು ಹೊಡೆಸಿದ್ದಾರಾ? ನಮಗೆ ಸಂಶಯವಿದೆ. ಗಾಂಧಿ ಅವರನ್ನು ಕೊಲ್ಲಿಸಿದ್ದು ನೆಹರು ಅವರೇ. ನೆಹರು ಅವರಿಗೆ ಸರ್ವಾಧಿಕಾರಿ ಆಗುವ ಹಂಬಲವಿತ್ತು. ಅದಕ್ಕೆ ಅವರೇ ಗಾಂಧಿಯನ್ನು ಕೊಲ್ಲಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ನಮ್ಮ ವಿರೋಧಿ ಬಣ ದೆಹಲಿಗೆ ಹೋಗಲಿ, ವಾಷಿಂಗ್ಟನ್ ಗೆ ಹೋಗಲಿ ಎಲ್ಲಿಬೇಕಾದಲ್ಲಿ ಹೋಗಲಿ ಸತ್ಯ ಸತ್ಯವೇ. ಮಾಧ್ಯಮದವರು ಒಳ್ಳೆಯವರನ್ನು ಮಾತನಾಡಿಸಿ, ಕಿಸೆ ಕಳ್ಳರನ್ನು, ದಲಿತರ ಮೀಸಲಾತಿ ಕಸಿದುಕೊಂಡ ನಾಲಾಯಕರನ್ನು ಬಿಡಬೇಕು ಎಂದು ಪರೋಕ್ಷವಾಗಿ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದರು.ತಮ್ಮ ತಂದೆಯೇ ನಕಲಿ ಸಹಿ ಮಾಡಿದ ವಿಯಜೇಂದ್ರ ಅವರಿಗೆ ರಮೇಶ ಜಾರಕಿಹೊಳಿ ನಾಲಾಯಕ ಅನ್ನದೇ ಸಾಚಾ ಅನ್ನಬೇಕಾ. ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತು ಇದ್ದರೇ ಯಡಿಯೂರಪ್ಪ ಸಿಎಂ ಆಗಿದ್ದಾಗ ಎಷ್ಟು ಸಹಿ ಮಾಡಿದ್ದಾರೆ ಎಂಬುವರ ಸಮಗ್ರ ತನಿಖೆ ನಡೆಸಿ ಎಂದು ಸವಾಲ್ ಹಾಕಿದರು.

ಎಲ್ಲ ಸಹಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿ ಯಡಿಯೂರಪ್ಪ ಅವರು ಕಳಿಸಿ ಪ್ರಯೋಗ ಮಾಡಿಸಿ, ಅದು ಸತ್ಯ ಆದಲ್ಲಿ ನಾಲಾಯಕ್ ಎನ್ನುವ ಪ್ರಶ್ನೆಯನ್ನು ವಾಪಾಸ್ ತೆಗೆದುಕೊಳ್ಳತ್ತೇವೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾವು ಅಭ್ಯರ್ಥಿಯನ್ನು ಹಾಕಿದ್ದೇವೆ. ನಮ್ಮದೇ ಕೋರ್ ಕಮಿಟಿಯಿದೆ. ಅಲ್ಲಿ ತೀರ್ಮಾನ ಮಾಡತ್ತೇವೆ. ಅಧ್ಯಕ್ಷರ ಚುನಾವಣೆ ನಡೆಸಲು ನಾವು ಸಿದ್ದ ಎಂದರು.

ಮತ್ತೊಂದು ಅವಧಿಗೆ ವಿಜಯೇಂದ್ರ ಅಧಿಕಾರ ನಡೆಸುವ ಆಸೆಯಿದೆ ಎಂದರೆ ಕರ್ನಾಟಕವನ್ನು ಲೂಟಿ ಹೊಡೆಯುವ ಆಸೆ ಇದೆ ಎಂದರ್ಥ. ಮತ್ತೊಮ್ಮೆ ನಕಲಿ ಸಹಿ ಕರ್ನಾಟಕವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಹುನ್ನಾರ ಎಂದರ್ಥ. ನನ್ನ ವಿರುದ್ಧ ಬಿಜೆಪಿಯವರು ದೂರು ಕೊಟ್ಟು ಕೊಟ್ಟು ಬಿಜೆಪಿ ಕಾರ್ಯಾಲಯದ ಒಂದು ರೂಮ್ ತುಂಬಿದೆ. ಇದೊಂದು ದೂರು ಕೊಟ್ಟಲ್ಲಿ ಅದು ಹೋಗಿ ಬೀಳುತ್ತೆ. ಈಗಾಗಲೇ ನೋಟೀಸ್ ಗೆ ಉತ್ತರ ಕೊಟ್ಟಿದ್ದೇನೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಡಾ ಹಗರಣದಲ್ಲಿ ಯಾರು ಸಾಚಾಯಿಲ್ಲ, ಸಿದ್ದರಾಮಯ್ಯ ಅವರು ಅಪರಾಧಿ ಇದ್ದಾರೆ. ವಿಜಯೇಂದ್ರ, ಜಿ.ಟಿ.ದೇವೆಗೌಡರ ಪಾಲು ಕೂಡಾ ಇದೆ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು