LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

`ಮಾನ್ಯ ಶಾಸಕ-ಸಂಸದರೇ ನಮ್ಮ ಗ್ರಾಮಕ್ಕೆ ಒಮ್ಮೆ ದಯಮಾಡಿ: ಇಲ್ಲಿಯ ಸಮಸ್ಯೆಗಳ ಆಗರ ಕೇಳಿಸಿಕೊಳ್ಳಿ' ರಸ್ತೆ ಅವ್ಯವಸ್ಥೆಗೆ ರೋಸಿಹೋದ ಬಕ್ಕರವಳ್ಳಿ ಗ್ರಾಮಸ್ಥರು

ಅರೇಹಳ್ಳಿ: ಮಾನ್ಯ ಶಾಸಕರೇ ಸಂಸದರೇ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಬಕ್ಕರವಳ್ಳಿ ಗ್ರಾಮಕ್ಕೆ ಒಂದು ಬಾರಿ ದಯಪಾಲಿಸಿ ,ಆಗ ಮಾತ್ರ ತಮಗೆ ತಿಳಿಯಲು ಸಾಧ್ಯ ನಮ್ಮ ಗ್ರಾಮಕ್ಕೆ ಕಲ್ಪಿಸುವ ರಸ್ತೆಯು ಎಂತಹ ದುಸ್ಥಿತಿಯಲ್ಲಿದೆ ಒಮ್ಮೆಯಾದರೂ ನೋಡಿ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಹೆಚ್ ಇಸ್ಮಾಯಿಲ್ ತಮ್ಮ ಅಳಲನ್ನು ತೋಡಿಕೊಂಡರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಗ್ರಾಮದ ಮುಖ್ಯವಾಗಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ವಿದ್ಯಾಭ್ಯಾಸಕ್ಕಾಗಿ ಹಾಗು ಗ್ರಾಮಸ್ಥರ ತುರ್ತು ಅನಾರೋಗ್ಯ ಸಂಬಂಧ ಆಸ್ಪತ್ರೆಗಾಗಿ ಪಟ್ಟಣಕ್ಕೆ ತೆರಳಲು ಇರುವುದೊಂದೇ ರಸ್ತೆ ಅದುವೇ ಇದೀಗ ಉದ್ದಗಲಕ್ಕೂ ಗುಂಡಿ ಬಿದ್ದು ಸಂಚಾರಕ್ಕೆ ಸಂಚಕಾರ ತರುವಂತಿದೆ.

ಕಳೆದ ಬಾರಿ ಸುರಿದ ವಿಪರೀತ ಮಳೆಗೆ ರಸ್ತೆಯ ಉದ್ದಕ್ಕೂ ಗುಂಡಿ ಬಿದ್ದುದ್ದು ತೀವ್ರ ಹದಗೆಟ್ಟ ರಸ್ತೆಯಲ್ಲಿ ಆಗಬಹುದಾದ ಹೆಚ್ಚಿನ ಅಪಾಯಗಳನ್ನು ತಡೆಗಟ್ಟುವ ಸದುದ್ದೇಶದಿಂದ ಸ್ವತಃ ಗ್ರಾಮಸ್ಥರೆ ಚಂದಾ ಹಣ ಹೊಂದಿಸಿ ತಾತ್ಕಾಲಿಕವಾಗಿ ಗುಂಡಿಗಳಿಗೆ ಮಣ್ಣು ತುಂಬಿಸಿ ಜೆಸಿಬಿಯಿಂದ ಸಮತಟ್ಟು ಮಾಡಿವ ದುಸ್ಥಿತಿ ನಮ್ಮದಾಗಿದ್ದು ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಸಹಾ ಇಲ್ಲದೆ ಖಾಸಗಿ ವಾಹನಗಳಿಗೆ ದುಬಾರಿ ವೆಚ್ಚ ಬರಿಸಿ ಪಟ್ಟಣಕ್ಕೆ ತೆರಳುವ ಕೂಲಿ ಕಾರ್ಮಿಕರ, ಕೃಷಿ ಕಾರ್ಮಿಕರ ಹಾಗು ಸಾರ್ವಜನಿಕರ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದರು.

ನಂತರ ಜಮೀರ್ ಸಿ.ಎಸ್.ಸಿ ಹಾಸನ ಇವರು ಮಾತನಾಡಿನಾನು ಗ್ರಾಮೀಣ ಭಾಗದ ಹಲವು ಸ್ನೇಹಿತರ ಊರುಗಳಿಗೆ ಹೋಗಿದ್ದೇನೆ ಆದರೆ ಇಂತಹ ರಸ್ತೆ ಎಲ್ಲಿಯು ನೋಡಿಲ್ಲಾ ಇಂತಹ ಹದಗೆಟ್ಟ ರಸ್ತೆಯಿಂದ ವಾಹನಕ್ಕೆ ಹಾನಿಯಾಗುವುದಲ್ಲದೆ ,ಇಲ್ಲಿ ಪ್ರತಿನಿತ್ಯ ತಿರುಗಾಡುವವಾಹನ ಸವಾರರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ, ಅದಲ್ಲದೆ ರಸ್ತೆ ಉತ್ತಮವಾಗಿದ್ದರೆ 1ಕಿಮೀ ಪ್ರಯಾಣಿಸಲು ಅಂದಾಜು ಒಂದು ನಿಮಿಷ ಬೇಕಾಗಬಹುದು ಆದರೆ ಇಂತಹ ರಸ್ತೆಯಲ್ಲಿ 10 ನಿಮಿಷ ಸಾಕಾಗುವುದಿಲ್ಲಾ ಎಂದ ಅವರು ನನ್ನ ಹೆಂಡತಿಯ ತವರೂರು ಇದಾಗಿದ್ದು ವರ್ಷದ ಹಿಂದೆ ಗರ್ಭಿಣಿಯಾಗಿದ್ದ ಸಂದರ್ಭ ತಿಂಗಳಿಗೊಮ್ಮೆ ತಪಾಸಣೆ ಹಾಗೂ ಹೆರಿಗೆಗಾಗಿ ಪಟ್ಟಣದ ಆಸ್ಪತ್ರೆಗೆ ಹೋಗಿ ಬರಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಈ ರಸ್ತೆ ಸರಿ ಇಲ್ಲದಿರುವುದರಿಂದ ಆಂಬುಲೆನ್ಸ್ ಚಾಲಕರು ಹಾಗೂ ಆಟೋದವರು ಕೂಡ ಬರಲು ಹಿಂದೇಟು ಹಾಕುತ್ತಾರೆ.

ಸುಮಾರು ಇಪ್ಪತ್ತು ವರ್ಷಗಳಿಂದ ರಾಜಕಾರಣಿಗಳು ಚುನಾವಣೆ ಹತ್ತಿರ ಬಂದಾಗ ಹುಡುಕಿಕೊಂಡು ಬರುವ ಅವರು ಗೆದ್ದ ನಂತರ ಸುಳಿವು ಕೂಡ ಇರೋಲ್ಲ ಹಾಗಾಗಿ ನಮ್ಮ ಹಾಗಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆಯನ್ನು ಡಾಂಬರೀಕರಣ ಮಾಡಿಕೊಡುವ ಮೂಲಕ ತಮ್ಮ ಸೇವೆಯನ್ನ ಗ್ರಾಮದ 160ಕ್ಕು ಹೆಚ್ಚಿನ ಮನೆಗಳಲ್ಲಿ ವಾಸಿಸುವ ಸಾವಿರಾರು ಬಡ ವರ್ಗದ ಕೂಲಿ ಕಾರ್ಮಿಕರು ಹಾಗು ಕೃಷಿ ಕಾರ್ಮಿಕರು ಗುರುತಿಸಿಕೊಳ್ಳುವ ಹಾಗೆ ಮಾಡಿಕೊಡಿ ಎಂದು ಮಾದ್ಯಮದ ಮೂಲಕ ಶಾಸಕ ಸಂಸದರಿಗೆ ಮನವಿ ಮಾಡಿದ್ದಾರೆ.ಈ ವೇಳೆ ಗ್ರಾಮದ ಮುಖಂಡರಾದ ರಜಾಕ್,ಇಸ್ಮಾಯಿಲ್, ನಾಜಿಮ್,ಲತೀಫ್,ಅನಿಲ್,ಶಂಕರ,ಸುರೇಶ್ ಹಾಗೂ ಇತರರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು