LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಮೈಸೂರಿನ ದಕ್ಷ ಕಾಲೇಜಿನಲ್ಲಿ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ

ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನ ಹೂಟಗಳ್ಳಿಯಲ್ಲಿರುವ ದಕ್ಷ ಪಿಯುಸಿ ಮತ್ತು ಡಿಗ್ರಿ ಕಾಲೇಜಿನಲ್ಲಿ "ಶೈಕ್ಷಣಿಕ ಮೌಲ್ಯಗಳು ಮತ್ತು ವಿದ್ಯಾರ್ಥಿಗಳ ಮುಂದಿನ ಪ್ರಗತಿಯ ಹಾದಿಗೆ ಅಡಿಪಾಯ" ವಿಚಾರ ಸಂಕಿರಣ ಮತ್ತು ರಾಜ್ಯದ ವಿವಿಧ ಕಾಲೇಜುಗಳ ಪ್ರಾಂಶುಪಾಲರಿಗೆ ಹಾಗೂ ಅಧ್ಯಾಪಕರಿಗೆ ರಾಜ್ಯ ಮಟ್ಟದ "ಶಿಕ್ಷಣ ರತ್ನ" ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ರಾಂತ ಉಪ ಕುಲಪತಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಹಾಗೂ ಬಹುಶ್ರುತ ವಿದ್ವಾಂಸರಾದ  ಪ್ರೊ . ಮಲ್ಲೇಪುರಂ ಜಿ. ವೆಂಕಟೇಶ್ ಅವರು ನೆರವೇರಿಸಿದರು.

ಇದೇ ವೇಳೆ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಡಾ. ಬಿ.ಆರ್ ಹಿರೇಮಠ ರವರ "ಬುದ್ಧ ಬಸವ ಅಂಬೇಡ್ಕರ್" ಕೃತಿ ಲೋಕಾರ್ಪಣೆ ಗೊಳಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ದಕ್ಷ ಕಾಲೇಜಿನ ಅಧ್ಯಕ್ಷರಾದ ಶ್ ಡಾ.ಜಯಚಂದ್ರ ರಾಜು. ಪಿ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾನ್ಯ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಆಪ್ತ ಕಾರ್ಯದರ್ಶಿ ಶೈಲಾ ಕೆ.ಡಿ ಹಾಗೂ ಸಾಹಿತಿ ಮತ್ತು ಚಲನ ಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಪ್ರೊ. ಮಲ್ಲೆಪುರಂ ಜಿ ವೆಂಕಟೇಶ್ ಅವರಿಗೆ "ಸರ್ವೋತ್ತಮ ಶಿಕ್ಷಣ ರತ್ನ" ಪ್ರಶಸ್ತಿ ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು.ಡಾ.ಬಿ.ಆರ್.ಹಿರೇಮಠ ರವರಿಗೆ "ಸರ್ವೋತ್ತಮ ಆಡಳಿತ ರತ್ನ" ಹಾಗೂ ಸಾಹಿತಿ ಡಾ.ಗುಣವಂತ ಮಂಜು ರವರಿಗೆ "ಸರ್ವೋತ್ತಮ ಸಾಂಸ್ಕೃತಿಕ ರತ್ನ" ಪ್ರಶಸ್ತಿ, ಶೈಲಾ ಕೆ.ಡಿ ಅವರಿಗೆ "ಆಡಳಿತ ರತ್ನ" ಡಾಜಯಚಂದ್ರ ರಾಜು ಪಿ ಅವರಿಗೆ " ವಿದ್ಯಾರತ್ನ" ಪ್ರಶಸ್ತಿ.

ಲಭ್ಯವಾಯಿತು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ರವರು ಶೈಕ್ಷಣಿಕ ಮೌಲ್ಯಗಳೇ ಇಂದಿನ ಜಗತ್ತಿಗೆ ಮತ್ತು ಎಲ್ಲಾ ಕಾಲಕ್ಕೂ ಅನ್ವಯಿಸುವ ಮೂಲ ಮಂತ್ರಗಳು. ಶಿಕ್ಷಣದಿಂದಲೇ ಸರ್ವತೋಮುಖ ಅಭಿವೃದ್ಧಿ ಮತ್ತು ಶಿಕ್ಷಣದ ಅಡಿಪಾಯವೇ ಬದುಕನ್ನು ರೂಪಿಸುವ ದೊಡ್ಡ ಮಾನದಂಡ, ಹಾಗೂ ಇಂದು ಮುಂದುವರೆಯುತ್ತಿರುವ ಜಗತ್ತಿಗೆ ಅನೇಕ ರೀತಿಯ ಕೊಡುಗೆಗಳನ್ನು ನೀಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಹಿರಿದಾಗಿದೆ. ವಿದ್ಯಾರ್ಥಿ ಸಮುದಾಯವನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಎಲ್ಲ ಕಾಲಕ್ಕೂ ಅತ್ಯಂತ ಗೌರವ ಪೂರ್ವಕವಾದ ಸ್ಥಾನ ಶಿಕ್ಷಕರದ್ದು ಎಂದು ಬಣ್ಣಿಸಿದರು.

ಬುದ್ಧ ಬಸವ ಅಂಬೇಡ್ಕರ್ ಕೃತಿಯ ಕುರಿತು ಮಾತನಾಡಿದ ಡಾ.ಗುಣವಂತ ಮಂಜು ರವರು ಓದುವ ಪುಸ್ತಕಗಳ ಜೊತೆಗೆ ಬದುಕಿಗೆ ಆದರ್ಶ ಮತ್ತು ಮಾರ್ಗದರ್ಶನ ನೀಡುವ ಬುದ್ಧ ಬಸವ ಅಂಬೇಡ್ಕರ್ ರವರ ಜೀವನ ಸಾಧನೆ ಮತ್ತು ಜಗತ್ತಿಗೆ ನೀಡಿದ ಶಾಂತಿಯ ಬೆಳಕು, ಕ್ರಾಂತಿಯ ಕಹಳೆ ಮತ್ತು ಸಮ ಸಮಾಜದ ಕಲ್ಪನೆ ಇವುಗಳನ್ನು ತಿಳಿದು ನಾವು ನಮ್ಮ ಸ್ಥಾನವನ್ನು ಪಡೆದು ಆ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕಾಗಿದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಗೌತಮ ರಾಜು, ಅನಿತಾ ಉಮಾ ಶಂಕರ್ ರಾಜು,ಸೋನಿಯಾ ರಾಜು, ಡಾ. ಮಹೇಶ್ ಎಂ. ಬಿ, ಅಭಿಷೇಕ್ ಎಂ, ಹರೀಶ್ ಪಿ ಮುಂತಾದ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಭಾಗಿಯಾಗಿದ್ದರು. ರಾಜ್ಯ ವ್ಯಾಪಿ ಆಗಮಿಸಿದ್ದ ನೂರು ವಿವಿಧ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ಮುಖ್ಯಸ್ಥರಿಗೆ ಗೌರವ ಸನ್ಮಾನ ನೀಡಲಾಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು