LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

`ರಾಮರಾಜ್ಯ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಸಂತ ವಾಲ್ಮೀಕಿ'

ತಿ.ನರಸೀಪುರ: ಮಹರ್ಷಿ ವಾಲ್ಮೀಕಿಯವರು ರಾಮರಾಜ್ಯ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಸಂತ. ಪಿತೃವಾಕ್ಯ ಪರಿಪಾಲನೆ, ಭಾತೃತ್ವ, ಸಮಾನತೆ, ಮಹಿಳೆಯರಿಗೆ ಗೌರವ ನೀಡುವುದು ಸೇರಿದಂತೆ ಅನೇಕ ಸಂದೇಶಗಳನ್ನು ರಾಮಾಯಣ ಮಹಾಕಾವ್ಯದ ಮೂಲಕ ನಮಗೆ ನೀಡಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಬಿ.ವಸಂತ ಶ್ರೀಕಂಠ ತಿಳಿಸಿದರು.

ಪಟ್ಟಣದ ಪುರಸಭಾ ಕಛೇರಿ ಆವರಣದಲ್ಲಿ ನೆಡದ ಶ್ರೀ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಸಂತ ಶ್ರೀಕಂಠ ಜಗತ್ತಿಗೆ ರಾಮಾಯಣದಂತ ಶ್ರೇಷ್ಠ ಮಹಾ ಕಾವ್ಯವೊಂದನ್ನು ನೀಡಿ ಮಹರ್ಷಿ ವಾಲ್ಮೀಕಿ ಎಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ ಎಂದರು.ಸದಸ್ಯ ತುಂಬಲ ಪ್ರಕಾಶ್ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಕುಟುಂಬ ಧರ್ಮಕ್ಕಿಂತ ರಾಜ ಧರ್ಮ ಪಾಲನೆಯು ಶ್ರೇಷ್ಠವಾದದ್ದು ಎಂದು ಜಗತ್ತಿಗೆ ಸಾರಿದ್ದಾರೆ. ನಾವು ದುಡಿದು ತಿನ್ನುವ ಅನ್ನವು ಯಾರದ್ದೋ ಕಣ್ಣೀರಿನ ಫಲವಾಗಿರಬಾರದು ಎಂಬ ಮಹತ್ವದ ಸಂದೇಶವನ್ನು ಹಾಗೂ ಕ್ರೌರ್ಯಕ್ಕಿಂತ ಕಾರುಣ್ಯವೇ ಶ್ರೇಷ್ಠ ಎಂಬಂತಹ ಸಾರ್ವಕಾಲಿಕ ಸತ್ಯವನ್ನು ಜಗತ್ತಿಗೆ ನೀಡಿದ್ದಾರೆ.

ಭಾರತೀಯ ಜೀವನ ಪರಂಪರೆಯಲ್ಲಿ ನಮ್ಮ ಸಂಸ್ಕೃತಿಯ ನಿರ್ಮಾತೃರು ನಾವೇ ಆಗಿದ್ದೇವೆ ಎಂಬ ತತ್ವವನ್ನು ಸಾರಿದ ವಾಲ್ಮೀಕಿ ಮಹರ್ಷಿಗಳು ಜಗತ್ತಿನ ಆದಿ ಗುರುವಾಗಿದ್ದಾರೆ ಎಂದರು.ನಿಕಟ ಪೂರ್ವ ಅಧ್ಯಕ್ಷ ಟಿ.ಎಂ.ನಂಜುಂಡ ಸ್ವಾಮಿ ಮಾತನಾಡಿ ರಾಮಾಯಣವೆಂಬ ಮಹಾಗ್ರಂಥದ ಚರಿತ್ರೆಯನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಪರಿವರ್ತನಾ ಜೀವನ ನಡೆಸುವ ಮೂಲಕ ಗುರಿ ಸಾಧನೆಗೆ ಮುಂದಾಗಬೇಕು. ಅವರು ರಚಿಸಿರುವ ಗ್ರಂಥ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಹಿನ್ನೆಲೆಯಲ್ಲಿ ಮಹರ್ಷಿ ವಾಲ್ಮೀಕಿ ಮಹಾಪುರಷ ಎನಿಸಿಕೊಂಡಿದ್ದಾರೆ. ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರಾಜೇಶ್ವರಿ ರಾಘವೇಂದ್ರ, ಎಸ್.ಕೆ.ಕಿರಣ್.ಮೇಡಿಕಲ್ ನಾಗರಾಜು,ಮಂಜುನಾಥ್, ರೂಪಶ್ರೀ ಪರಮೇಶ್,ತೇಜಸ್ವಿನಿ ರಾಜು,ಸಿಸ್ಟಮ್ ಸಿದ್ದು, ಮುಖಂಡರಾದ ಬಿ.ಮರಯ್ಯ, ರಾಘವೇಂದ್ರ, ಶ್ರೀಕಂಠ,ಮಾದೇಶ್ ಇಂಜಿನಿಯರ್ ನಾಗರಾಜು, ಸಮುದಾಯ ಸಂಘಟಕ ಅಧಿಕಾರಿ ಮಹದೇವನಾಯಕ, ಮಹೇಂದ್ರ, ಆಶಾ, ರಾಜೇಂದ್ರ. ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು