LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

`ರೈತರ ಬೆನ್ನೆಲುಬಾಗಿ ನಿಂತ ಸಂಘಗಳು’

ಬಂಗಾರಪೇಟೆ: ಪ್ರತಿಯೊಬ್ಬ ಷೇರುದಾರರಿಗೂ ಸಹಕಾರ ಸಂಘದಿಂದ ಸಿಗಬೇಕಾದ ಸೌಲಭ್ಯವನ್ನು ಪ್ರಾಮಾಣಿಕವಾಗಿ ನೀಡುವ ಮೂಲಕ ರೈತರನ್ನು ಆರ್ಥಿಕ ಸಬಲರನ್ನಾಗಿ ಮಾಡಲಾಗುತ್ತದೆ ಎಂದು ಹುದುಕುಳ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾದ ಅ.ನಾ. ಹರೀಶ್ ಅವರು ತಿಳಿಸಿದ್ದಾರೆ.

ಹುದುಕುಳ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡ 2023-24ನೇ ಸಂಘದ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಹುದುಕುಳ ವಿವಿಧೋದ್ದೇಶ ಗ್ರಾಮೀಣ ಪ್ರಾರ್ಥಮಿಕ ಮತ್ತು ಕೃಷಿ  ಸಹಕಾರ ಸಂಘವು ಈಗಾಗಲೇ ಡಿಸಿಸಿ ಬ್ಯಾಂಕ್ ಕೋಲಾರ ಇವರ ಸಹಕಾರ ದಿಂದ ಸುಮಾರು ಕೋಟ್ಯಾಂತರ ರೂಪಾಯಿ ಹಣವನ್ನು ಮಹಿಳಾ ಸ್ವ-ಸಹಾಯ ಸಂಘಗಳಿಗೆ, ರೈತರಿಗೆ ಕೃಷಿ ಸಾಲ,  ವ್ಯಾಪಾರ ಸಾಲ,  ಪುರುಷರ ಸಂಘಗಳಿಗೆ ಸಾಲ, ವೈಯಕ್ತಿಕ ಸಾಲಗಳಾಗಿ ನೀಡುವ ಮೂಲಕ ರೈತರ ಬೆನ್ನೆಲುಬಾಗಿ ಸಂಘವು ಕಾರ್ಯನಿರ್ವಹಿಸುತ್ತಿದೆ ಎಂದರು.

ಮುಂದಿನ 2024-25 ನೇ ವರ್ಷದಲ್ಲಿ ರೈತರಿಗೆ ಮತ್ತು  ಮಹಿಳಾ ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.ಸರ್ವ ಸದಸ್ಯರ ಸಭೆಯಲ್ಲಿ ಆಗಮಿಸಿದ ವಿವಿಧ ಗ್ರಾಮಗಳ ಷೇರುದಾರರಿಗೆ,  ತಮ್ಮ ಉಳಿತಾಯ ಖಾತೆಗಳನ್ನು ಮತ್ತು ಠೇವಣಿಗಳನ್ನ ಇಡುವಂತೆ ಕೋರಿ ಸಂಘವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಸಲಹೆಯನ್ನ ಕೋರಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ನಟರಾಜ್ ನಿರ್ದೇಶಕರಾದ ಬುಲ್ಲೆಟ್ ನಾಗರಾಜ್, ಮುನಿಸ್ವಾಮಿ ಗೌಡ, ಎಲ್ ಐಸಿ ವೆಂಕಟೇಶ್ , ವಟ್ರಕುಂಟೆ ಶ್ರೀನಿವಾಸ್, ಎಂ.ಶ್ರೀನಿವಾಸ್, ರತ್ನಮ್ಮ ಮುನಿರಾಜ್,  ರಾಮಕೃಷ್ಣಪ್ಪ, ಕೆ.ಪಿಳ್ಳಪ್ಪ, ಗ್ರಾಮ ಪಂಚಾಯಿತಿ  ಮಾಜಿ ಅಧ್ಯಕ್ಷರಾದ ಹೆಚ್‍ಎಮ್ ರವಿ ಸದಸ್ಯರಾದ ನಯಾಜ್ , ಹನುಮಪ್ಪ, ಮೂರ್ತಿ, ಸುರೇಶ್, ಮುಖಂಡರಾದ ಪಾಕರಹಳ್ಳಿ ಚಂದ್ರಣ್ಣ , ವೆಂಕಟಾಚಲಪತಿ, ಪ್ರಕಾಶ್,  ಮಂಜುನಾಥ್, ಮುಖ್ಯನಿವರ್ಹಕಾಧಿಕಾರಿ ವೆಂಕಟೇಶ್, ಸುನೀಲ್ ಕುಮಾರ್, ರಾಜೇಶ್ವರಿ ಮೊದಲಾದವತು ಪಾಲ್ಗೊಂಡಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು