LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ವಿಷ ಲಡ್ಡು ಪ್ರಕರಣದ ಸ್ಫೋಟಕ ಸತ್ಯ ಬಯಲು: ಲವ್ ಬ್ರೇಕಪ್ ಆಗಿದ್ದಕ್ಕೆ ವಿಷ ಗಿಫ್ಟ್!

ಶಿವಮೊಗ್ಗ: ಹೊಸ ವರ್ಷಕ್ಕೆಂದು ಶಿವಮೊಗ್ಗದ ಎನ್ ಇಎಸ್ ಶಿಕ್ಷಣ ಸಂಸ್ಥೆಯ ನಾಗರಾಜ್ ಮತ್ತು ಮನರೋಗ ತಜ್ಷ ಡಾ. ಪವಿತ್ರ ಮತ್ತು ಡಾ. ಅರವಿಂದ ಈ ಮೂವರಿಗೆ ಸ್ವೀಟ್ ಬಾಕ್ಸ್ ಕೊರಿಯರ್ ಮೂಲಕ ಬಂದಿತ್ತು. ಬಿಜೆಪಿ ಎಂಎಲ್ ಸಿ ಡಾ. ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ಈ ಸ್ವೀಟ್ ಬಾಕ್ಸ್ ಗಳು ಬಂದಿದ್ದವು. ಈ ಸ್ವೀಟ್ ಬಾಕ್ಸ್ ನಲ್ಲಿರುವ ಲಡ್ಡು ತಿಂದ ನಾಗರಾಜ್ ಗೆ ದೊಡ್ಡ ಶಾಕ್ ಆಗಿತ್ತು. ಸ್ವೀಟ್ ಸಿಹಿ ಆಗಿರದೇ ಕಹಿ ಆಗಿತ್ತು. ಅದರಲ್ಲಿ ಯಾರೋ ವಿಷ ಬೆರಸಿ ಸ್ವೀಟ್ ಬಾಕ್ಸ್ ಕೋರಿಯರ್ ಮಾಡಿದ್ದಾರೆ ಎನ್ನುವ ಅನುಮಾನ ನಾಗರಾಜ್​ಗೆ ಬಂದಿತ್ತು. ಇನ್ನೂ ಇಬ್ಬರು ವೈದ್ಯರಿಗೂ ಸ್ವೀಟ್ ಬಾಕ್ಸ್ ಬಂದಿತ್ತು. ಆದ್ರೆ ಅವರು ಅದನ್ನು ಓಪನ್ ಮಾಡಿರಲಿಲ್ಲ. ಈ ಸ್ವೀಟ್ ಬಾಕ್ಸ್ ವಿಷ ಇದೆ. ಇದು ಡಾ. ಸರ್ಜಿ ಹೆಸರಿನಲ್ಲಿ ಬಂದಿದೆ ಎನ್ನುವ ಸುದ್ದಿಯು ಇಡೀ ರಾಜ್ಯತುಂಬೆಲ್ಲ ಹರಡಿತ್ತು. ಕೋಟೆ ಪೊಲೀಸ್ ಠಾಣೆಯಲ್ಲಿ ಈ ವಿಷ ಲಡ್ಡು ಪ್ರಕರಣ ದಾಖಲು ಆಗಿತ್ತು. ಕೋಟೆ ಪೊಲೀಸರು ಪ್ರಕರಣದ ತನಿಖೆ ಮಾಡಿ ಈಗ ವಿಷ ಲಡ್ಡು ಪ್ರಕರಣವನ್ನು ಬಯಲು ಮಾಡಿದ್ದಾರೆ.

ಇದನ್ನು ಕೋರಿಯರ್ ಮಾಡಿದ್ದು ಓರ್ವ ಭಗ್ನ ಪ್ರೇಮಿ. ಆತನ ಹೆಸರುಸೌಹಾರ್ದ ಪಟೇಲ್ (26) ಭದ್ರಾವತಿ ‌ಮೂಲದವನು. ಈತ ಕೆಲವು ವರ್ಷಗಳ ಹಿಂದೆ ಎನ್ ಇಎಸ್ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ. ಈ ಸಂದರ್ಭದಲ್ಲಿ ವೈದ್ಯ ಮಗಳ ಮೇಲೆ ಈತನಿಗೆ ಲವ್ ಆಗಿತ್ತು. ಈ ಲವ್ ಸೆಕ್ಸಸ್ ಆಗಲಿಲ್ಲ. ಇದರಿಂದ ಯುವಕ ಮಾನಸಿಕ ಖಿನ್ನತೆಗೊಳಗಾಗಿದ್ದ. ತನ್ನ ಲವ್ ಬ್ರೇಕ್ ಮಾಡಿದರ ವಿರುದ್ದ ಸೇಡು ತೀರಿಸಲು ಮಾನಸಿಕ ಖಿನ್ನತೆಗೊಳಗಾಗಿದ್ದ ಯುವಕ ಸೇಡಿಗಾಗಿ ತಾನು ನಿತ್ಯ ಸೇವಿಸುತ್ತಿದ್ದ ಮಾತ್ರೆ ಮತ್ತು ಬೇವಿನ ರಸವನ್ನು ಲಡ್ಡುವಿನಲ್ಲಿ ಮಿಶ್ರಣ ಮಾಡಿದ್ದ. ಬಳಿಕ ಇದೇ ಲಡ್ಡುವಿನ ಬಾಕ್ಸ್ ನನ್ನು ಕಾಲೇಜ್ ನಲ್ಲಿ ಲವ್ ಬ್ರೇಕ್ ಗೆ ಕಾರಣವಾದ ನಾಗರಾಜ್ ಮತ್ತು ಮನೋವೈದ್ಯರಿಬ್ಬರಿಗೆ ಲಡ್ಡು ಕಳುಹಿಸಿರುವುದು ತನಿಖೆಯಿದ ಬೆಳಕಿಗೆ ಬಂದಿದೆ.

ಎನ್ ಇಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸ್ವೀಟ್ ಬಾಕ್ಸ್ ಓಪನ್ ಮಾಡಿದ ನಂತರ ಅಸಲಿ ಅಂಶ ಪತ್ತೆಯಾಗಿದೆ. ಆದರೆ ಉಳಿದ ಇಬ್ಬರು ವೈದ್ಯರು ಓಪನ್ ಮಾಡಿರಲಿಲ್ಲ. ಯಾವಾಗ ವಿಷಪೂರಿತ ಸ್ವೀಟ್ ಅಂತಾ ಗೊತ್ತಾಯ್ತೋ ಇದರ ಉದ್ದೇಶ ಏನು..? ಇದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗ ಆಗಲಿ ಎಂಬ ಉದ್ದೇಶದಿಂದ ಸರ್ಜಿ ಅವರು ತಮ್ಮ ಆಪ್ತ ಕಾರ್ಯದರ್ಶಿ ಅವರಿಂದ ಕೋಟೆ ಠಾಣೆಗೆ ದೂರು ನೀಡಿದರು. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಬೆನ್ನು ಬಿದ್ದರು. ಕೊನೆಗೂ ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಭದ್ರಾವತಿ ‌ಮೂಲದ ಸೌಹಾರ್ದ ಪಟೇಲ್ (26) ಎಂದು ಗುರುತಿಸಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು