LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಸಂಘದ ಸದಸ್ಯರು ಹೆಚ್ಚು ಹೆಚ್ಚು ಷೇರುಗಳನ್ನು ಮಾಡಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು: ರಾಮಕೃಷ್ಣೇಗೌಡ

ಪಾಂಡವಪುರ : ಸಂಘದ ಸದಸ್ಯರು ಹೆಚ್ಚು ಹೆಚ್ಚು ಷೇರುಗಳನ್ನು ಮಾಡಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೆಂಪೇಗೌಡ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಜನತಾಭಂಡಾರ ರಾಮಕೃಷ್ಣೇಗೌಡ ಹೇಳಿದರು.ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಯಾದ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಂಘವನ್ನು ಕೆಂಪೇಗೌಡರ ಹೆಸರಿಗೆ ಸೀಮಿತಗೊಳಿಸದೆ ಹತ್ತು-ಹಲವು ಕಾರ್ಯಕ್ರಮಗಳ ಮೂಲಕ ಸಂಘದ ಉನ್ನತ್ತಿಗೆ ಶ್ರಮಿಸಲಾಗುವುದು ಎಂದರು.

ಮಂಡ್ಯ ಜಿಲ್ಲೆಯಲ್ಲಿಯೇ ಪಾಂಡವಪುರ ತಾಲೂಕಿನಲ್ಲಿ ಪ್ರಪ್ರಥಮವಾಗಿ ಕೆಂಪೇಗೌಡ ಸಹಕಾರ ಸಂಘವನ್ನು ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿಸಂಘದ ಮೂಲಕ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಹಾಗೂ ಸರಳ ವಿವಾಹಕ್ಕೆ  ಪ್ರೋತ್ಸಾಹಿಸುವುದಾಗಿ ಅವರು ತಿಳಿಸಿದರು.ಸಂಘದ ಮಾರ್ಗದರ್ಶಕರಾದ ನಿವೃತ್ತ ಉಪನ್ಯಾಸಕ ಎನ್.ಚಲುವೇಗೌಡ ಮಾತನಾಡಿ, ಸಂಘಟನೆ ಮಾಡುವುದು ಬಹಳ ಕಷ್ಟದ ಕೆಲಸ. ಯಾವುದೇ ಸಂಘಟನೆ ಮಾಡಬೇಕಾದರೆ ಪರಿಶ್ರಮ ಅತಿ ಮುಖ್ಯವಾಗಿ ಬೇಕು ಎಂದರು.

ಪಾಂಡವಪುರದಲ್ಲಿ ನೂರಾರು ಸಂಘಗಳಿವೆ. ಆದರೆ ಅವುಗಳಲ್ಲಿ ಕೆಲವೇ ಕೆಲವು ಸಂಘಗಳು ಉಸಿರಾಡುತ್ತಿವೆ. ಅದರಲ್ಲಿ ಕೆಂಪೇಗೌಡ ಪತ್ತಿನ ಸಹಕಾರ ಸಂಘವು ಕೂಡ ಪ್ರಮುಖವಾಗಿ ಉಸಿರಾಡಬೇಕು. ಸಂಘ ಬೆಳೆದರೆ ಮಾತ್ರ ಹಲವರಿಗೆ ಸಹಾಯ ಮಾಡಲು ಸಾಧ್ಯವಾಗಲಿದೆ. ಜತೆಗೆ ನಮ್ಮಲ್ಲೂ ಕೂಡ ಬಹಳಷ್ಟು ದಾನಿಗಳಿದ್ದಾರೆ. ಅವರನ್ನು ಬೆನ್ನತ್ತಿ ಸಂಪರ್ಕಿಸಿದರೆ ಅವರಿಂದಲೂ ಹೆಚ್ಚಿನ ಸಹಕಾರ ಪಡೆಯಬಹುದು ಎಂದರು.

ಒಕ್ಕಲಿಗರ ವಿಕಾಸ ವೇದಿಕೆ ರಾಜ್ಯಾಧ್ಯಕ್ಷೆ ಯಮುನಾಮಾತನಾಡಿ, ಕಳೆದ ನಾಲ್ಕು ವರ್ಷಗಳ ಹಿಂದೆ ಸಹಕಾರಸಂಘ ಸ್ಥಾಪನೆಗೆ ಪಾಂಡವಪುರ ಸದಸ್ಯರೊಂದಿಗೆ ಚರ್ಚಿಸಲಾಗಿತ್ತು. ಎಲ್ಲರ ನಿರಂತರ ಶ್ರಮದಿಂದಾಗಿ ಪಾಂಡವಪುರದಲ್ಲಿ ಪ್ರಪ್ರಥಮ ಕೆಂಪೇಗೌಡರ ಪತ್ತಿನಸಹಕಾರ ಸಂಘದ ಸ್ಥಾಪನೆಗೆ ನಾಂದಿಹಾಡಲಾಯಿತು ಎಂದರು. ಮುಂದಿನ ದಿನಗಳಲ್ಲಿ ಮಹಿಳಾ ಸಹಕಾರ
ಸಂಘವನ್ನೂ ರಚಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಕೆಂಪೇಗೌಡರ ಪತ್ತಿನ ಸಹಕಾರ ಸಂಘವು ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.ಈ ವೇಳೆ ಸಂಘದ ನೂತನ ಉಪಾಧ್ಯಕ್ಷ ನೀಲನಹಳ್ಳಿ ಬಾಜೇಗೌಡ, ನಿರ್ದೇಶಕರಾದ ಶಂಕನಹಳ್ಳಿ ಕುಮಾರ್, ಡಾಮಡಹಳ್ಳಿ ಸೌಭಾಗ್ಯ, ಪಾಂಡವಪುರ ಬಿ.ಕೆ.ರೂಪಾ, ಚಿನಕುರಳಿ ನರಸಿಂಹೇಗೌಡ, ತಾಳಶಾಸನ ವೀರಭದ್ರಸ್ವಾಮಿ, ಕೆನ್ನಾಳು ಮಹೇಶ್, ಅರಳಕುಪ್ಪೆ ಇಂದಿರೇಶ್, ಕನಗನಮರಡಿ ಎ.ನಾಗರಾಜು, ಕೋಡಾಲ ಕೆ.ಎಚ್.ರಾಜೇಗೌಡ, ಶ್ಯಾದನಹಳ್ಳಿ ವಿಶ್ವೇಶ್ವರ ಇತರರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು