LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಸ್ಮಶಾನದ ರಸ್ತೆಗಾಗಿ ಬನ್ನೂರು ಪಟ್ಟಣದ ಕಾವೇರಿ ಸರ್ಕಲ್‍ನಲ್ಲಿ ಶವವಿಟ್ಟು ರಸ್ತೆ ತಡೆದು ಗ್ರಾಮಸ್ಥರಿಂದ ಪ್ರತಿಭಟನೆ

ತಿ.ನರಸೀಪುರ: ಸ್ಮಶಾನದ ರಸ್ತೆಗಾಗಿ ಮೈಸೂರು ಮಳವಳ್ಳಿ ಮುಖ್ಯರಸ್ತೆ ತಾಲೂಕಿನ ಬನ್ನೂರು ಪಟ್ಟಣದ ಕಾವೇರಿ ಸರ್ಕಲ್‍ನಲ್ಲಿ ಶವವಿಟ್ಟು ರಸ್ತೆ ತಡೆದು ಪ್ರತಿಭಟನೆ ಮಾಡಿದ ಘಟನೆ ನಡೆಯಿತು.

ಪರಿಶಿಷ್ಟ ಸಮುದಾಯಕ್ಕೆ ಮೂಲಭೂತ ಸೌಕರ್ಯಗಳಲ್ಲೊಂದಾದ ಸ್ಮಶಾನಕ್ಕೆ ಶವ ಸಾಗಿಸಲು ರಸ್ತೆ ಕಲ್ಪಿಸದ ಜಿಲ್ಲಾಡಳಿತ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲೇ ರಸ್ತೆ ಬನ್ನೂರು ಪಟ್ಟಣದ ಕಾವೇರಿ ಸರ್ಕಲ್ ನಲ್ಲಿ ಶವ ಹೂಳುತ್ತೇವೆ ಎಂದು ಶವ ಸಂಸ್ಕಾರಕ್ಕೆ ಪ್ರತಿಭಟನೆಕಾರರು ಮುಂದಾದ ಘಟನೆ ಜರುಗಿತು.

ಪ್ರತಿಭಟನೆ ಕುರಿತು ಪುರಸಭಾ ಸದಸ್ಯ ಶಿವಣ್ಣ ಮಾತನಾಡಿ 40 ವರ್ಷದಿಂದ ಸ್ಮಶಾನ ರಸ್ತೆಗಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ನಾವು ಶವ ಹೊಂದಿಕೊಂಡು ಖಾಸಗಿಯವರ ಜಮೀನಿನ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಎಷ್ಟೋ ಬಾರಿ ಜಮೀನು ಮಾಲೀಕರಿಗೂ ನಮಗೂ ಗಲಾಟೆಯಾಗಿದೆ. ನಾವು ಸತ್ತವರನ್ನು ಹೂಳಲು ತುಂಬಾ ಅಮಾನವೀಯ ಪರಿಸ್ಥಿತಿ ಎದುರಾಗಿದೆ.

ಇದರ ಬಗ್ಗೆ ಬಿಜೆಪಿ ಸರಕಾರದ ಎಲ್ಲ ಮಂತ್ರಿಗಳಿಗೂ ಸಹ ಮನವಿ ಮಾಡಿದವು. ಪ್ರಯೋಜನವಾಗಲಿಲ್ಲ. ಸಚಿವ ಮಹದೇವಪ್ಪ ನವರಿಗೆ ಮನವಿ ಪತ್ರ ನೀಡಿದ ಮೇಲೆ. 20 ಲಕ್ಷ ಹಣವನ್ನು ಬಿಡುಗಡೆ ಮಾಡಿದ್ದಾರೆ. ಅಧಿಕಾರಿಗಳು. ಜಮೀನ್ದಾರರಿಗೆ ನೋಟಿಸ್ ಕೊಟ್ಟು. ಅವರಿಗೆ ಹಣ ಬಿಡುಗಡೆ ಮಾಡಿ ಜಮೀನನ್ನು ವಶಕ್ಕೆ ಪಡೆದು ಜಮೀನನ್ನು ರಸ್ತೆ ನಿರ್ಮಾಣ ಮಾಡದೆ ದಲಿತ ರಂಬ ಕಾರಣಕ್ಕಾಗಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.ಪ್ರತಿಭಟನೆಯಿಂದ ಸುಮಾರು 2 ಗಂಟೆಗೋ ಹೆಚ್ಚು ಕಾಲ ರಸ್ತೆಯಲ್ಲಿ ಕಿಲೋಮೀಟರು ಗಟ್ಟಲೆ ನಿಂತ ವಾಹನಗಳು ಸಂಚಾರ ಅಸ್ತವ್ಯಸ್ತವಾದ ಪ್ರಸಂಗ ಜರಗಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು