LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

`ಹೈನುಗಾರಿಕೆ ರೈತರಿಗೆ ಸರ್ಕಾರದಿಂದ ಹಲವಾರು ಸೌಲಭ್ಯ’

ಮಾಲೂರು: ಹಾಲು ಉತ್ಪಾದಕ  ಸಹಕಾರ ಸಂಘಗಳು  ಹೈನುಗಾರರ ರೈತರ ಜೀವನಾಡಿ ಯಾಗಿದೆ ಎಂದು ಶಾಸಕ ಕೆ ವೈ  ನಂಜೇಗೌಡ ತಿಳಿಸಿದರು.  
ತಾಲ್ಲೂಕಿನ ಕಸಬಾ ಹೋಬಳಿ ಚಿಕ್ಕಕೊಂತೂರು ಹಾಲು ಉತ್ಪಾದಕ ಸಹಕಾರ ಸಂಘದ 2023- 24ನೇ ಸಾಲಿನ ವಾರ್ಷಿಕ ಮಹಾ ಸಾಮಾನ್ಯ ಸಭೆಯನ್ನು ದೀಪ ಬೆಳಗು ಮೂಲಕ ಉದ್ಘಾಟಸಿ ಮಾತನಾಡಿದರು.

ಚಿಕ್ಕ ಕುಂತೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಒಂದು ವಿಶೇಷವಾದ ಇತಿಹಾಸವಿದ್ದು ಅದರಂತೆ ಉಳಿತಾಯವು ಹೆಚ್ಚಾಗಿದ್ದು, ಒಳ್ಳೆಯ ರೀತಿಯಲ್ಲಿ ಸಂಘವನ್ನು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಒಕ್ಕೂಟ ಹಾಗೂ ಸರ್ಕಾರದಿಂದ ಹೈನುಗಾರಿಕೆ ರೈತರಿಗೆ ಹಲವಾರು ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡುತಿದ್ದು ಹಾಲು ಉತ್ಪಾದಕ ರೈತರ ಹಸು ಮರಣ ಹೊಂದಿದರೆ  ಎಪ್ಪತ್ತು ಸಾವಿರ ವಿಮೆ ನೀಡಲಾಗುತ್ತದೆ,

ಹಸಿರು ಮೇವಿನ ಬಿತ್ತನೆ ಬೀಜಗಳ ವಿತರಣೆ ಹಸುಗಳಿಗೆ ಮ್ಯಾಟ್ ಶಾಪ್ ಕಟರ್  ಹಾಲು ಕರೆಯುವ  ಯಂತ್ರ, ಬಾಡಿಗೆಯಲ್ಲಿ ನಡೆಯುತ್ತಿರುವ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ  ನಿರ್ಮಾಣಗಳಿಗೆ ಸಹಕಾರ, ನಿವೃತ್ತಿ ಹೊಂದಿದ ಕಾರ್ಯದರ್ಶಿಗಳು ಮುತ್ತು ಸಿಬ್ಬಂದಿಗೆ ನಿವೃತ್ತಿ ವೇತನ, ಹೈನುಗಾರಿಕಾ ರೈತರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಪ್ರೋತ್ಸಾಹ ಧನ ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳಿಗೆ ವಿಶೇಷವಾಗಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದ್ದು 100% ಬಿ ಎಂ ಸಿ ಕೇಂದ್ರಗಳ ಸ್ಥಾಪನೆ,

ಐಸ್ ಕ್ರೀಮ್ ಪ್ಲಾಂಟ್, ಸೋಲಾರ್ ಪ್ಲಾಂಟ್ ಸ್ಥಾಪನೆ ಮಾಡಿ ಹಲವಾರು ರೀತಿಯಲ್ಲಿ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಯ ಪ್ರತ್ಯೇಕ ಕೇಂದ್ರವಾಗಲಿದ್ದು ಆಗಲೂ ಸಹ ಕೋಲಾರ ಜಿಲ್ಲೆಯಲ್ಲಿ ಅತ್ಯಧಿಕವಾದ ಹಾಲನ್ನು ಪೂರೈಸಿ ಜಿಲ್ಲೆಯನ್ನು ಮಾದರಿಯನ್ನಾಗಿಸಲಾಗುವುದು,ಎಲ್ಲಾ ಹಾಲು ಉತ್ಪಾದಕ ಸಹಕಾರಿ ಸಂಘಗಳಲ್ಲಿ ಕಾಮನ್ ಸಾಫ್ಟ್ ವೇರ್ ಅಳವಡಿಸಿದ್ರೆ ಹಾಕುವ ಹಾಲಿನ ಗುಣಮಟ್ಟವನ್ನು ಹೆಚ್ಚಿಸಬಹುದು ಪ್ರಸ್ತುತ ಕೆಲವರು ಹಾಕುವ ಹಾಲಿನಲ್ಲಿ ನೀರು ಬೆರಿಕಿ ಹಾಕುತ್ತಿರುವುದ ರಿಂದ ಗುಣಮಟ್ಟದ ಹಾಲು ಪೂರೈಕೆ ಮಾಡಲು ಆಗುತಿಲ್ಲ ಅದರಿಂದ ಒಕ್ಕೂಟ ಕಾಮನ್ ಸಾಫ್ಟ್ ವೇರ್ ಅಳವಡಿಸಲು ಮುಂದಾಗಿದೆ ಎಂದರು. ಶಿಬಿರ ಕಚೇರಿಯ ವಿಸ್ತರಣಾಧಿಕಾರಿ ಉಲ್ಲೂರಪ್ಪ ಸಭೆಯಲ್ಲಿ 2023 -24ನೆಯ ಸಾಲಿನ ವರದಿಯನ್ನು ಓದಿ ಸಭೆಯಲ್ಲಿ ಮಂಡಿಸಿದರು.

ಈ ಸಂದರ್ಭದಲ್ಲಿ ಶಿಬಿರ   ಕಚೇರಿಯ ಉಪ ವ್ಯವಸ್ಥಾಪಕ ಲೋಹಿತ್, ವಿಸ್ತರಣಾಧಿಕಾರಿ ಗಂಗಾಧರ್ ಗ್ರಾ ಫಂ ಅಧ್ಯಕ್ಷೆ  ಸಾವಿತ್ರಮ್ಮ, ಮಾಜಿ ಜಿ.ಪo. ಸದಸ್ಯರಾದ ಗೋಪಾಲ್ ರೆಡ್ಡಿ, ಪಾನಿಪುರಿ ಹನುಮಂತಪ್ಪ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎ ವಿ ರೆಡ್ಡಿ, ಉಪಾಧ್ಯಕ್ಷ ಅಪ್ಪೋಜಪ್ಪ, ನಿರ್ದೇಶಕರಾದ ವಿ ವೆಂಕಟಸ್ವಾಮಿ, ಎಂ ವೆಂಕಟಸ್ವಾಮಿ  ಪಿ ಕೃಷ್ಣಪ್ಪ ಪಿ ನಾರಾಯಣಪ್ಪ ವೆಂಕಟೇಶಪ್ಪ ಆಂಜನಪ್ಪ ವೆಂಕಟಮ್ಮ   ಮುಖಂಡರಾದ ನಿದರ ಮಂಗಲ ವೆಂಕಟಸ್ವಾಮಿ, ಭುವನಹಳ್ಳಿ  ಅಬಯಪ್ಪ, ಸಿಬ್ಬಂದಿ ನಾಗರಾಜ್ ಸುಬ್ರಮಣಿ ಶ್ರೀಕಾಂತ್ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು