LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕೆರೆ ಮಣ್ಣಿನಿಂದ ಬಂದ ಹಣದಲ್ಲಿ ದಿನಸಿ ಕಿಟ್ ವಿತರಣೆ: ಎ.ಮಂಜುನಾಥ್

ಮಾಗಡಿ: ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಐತಿಹಾಸಿಕ ಗೌರಮ್ಮನಕೆರೆಯ ಮಣ್ಣಿನ್ನು ಬೇರೆಡೆಗೆ ರವಾನಿಸಿ ವಂತಿಕೆ ಪಡೆದು ಶಾಸಕ ಹೆಚ್.ಸಿ.ಬಾಲಕೃಷ್ಣರವರ ಅನುಯಾಯಿಗಳು ಈ ಹಣದಲ್ಲಿ ರಾಜಕೀಯ ದುರುದ್ದೇಶಕ್ಕಾಗಿ ಕಳೆದ ಯುಗಾದಿ ಹಬ್ಬದ ನಿಮಿತ್ತವಾಗಿ ಕೆಲವು ವಾರ್ಡುಗಳಲ್ಲಿ ಜನರಿಗೆ “ದಿನಸಿ ಕಿಟ್”ವಿತರಿಸಿದ್ದಾರೆ ಎಂದು ಮಾಜಿ ಶಾಸಕರಾದ ಬಿಡದಿ ಎ.ಮಂಜುನಾಥ್ ಗಂಭೀರ ಆರೋಪ ಮಾಡಿದರು.ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಎನ್.ಎಸ್.ಯು.ಐ ಮಾಜಿ ತಾಲ್ಲೂಕು ಅದ್ಯಕ್ಷ ವಸಂತ್ ಮತ್ತು ಸಂಗಡಿಗರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಿಸಿಕೊಂಡ ನಂತರ ಮಾತನಾಡಿದ ಅವರು ನಾನು 2008 ರಲ್ಲಿ ಮಾಗಡಿಗೆ ರಾಜಕೀಯ ಪಾದಾರ್ಪಣೆ ಮಾಡಿದಾಗಿನಿಂದ ಇಲ್ಲಿಯವರೆಗೆ ನನ್ನ ಪ್ರತಿಸ್ಪರ್ಧಿ ಶಾಸಕ ಹೆಚ್.ಸಿ.ಬಾಲಕೃಷ್ಣ. ಮತ್ತು ಅವರ ಸಹೋದರ ಹೆಚ್.ಎನ್.ಅಶೋಕ್ ಅವರ ಮೇಲೆ ಏನೆಲ್ಲಾ ಆರೋಪ,ಟೀಕೆ,ಟಿಪ್ಪಣಿ,ಹೋರಾಟಗಳನ್ನು ಮಾಡಿದ್ದೇನೋ ಅವುಗಳಿಗೆಲ್ಲವೂ ಸ್ಪಷ್ಟವಾದ ಮಾಹಿತಿ ದಾಖಲೆಯನ್ನಿಟ್ಟುಕೊಂಡೇ ಮಾತನಾಡಿರುವುದು.ಈ ಸಂಭಂದ ನಾನು “ಬಹಿರಂಗ”ಚರ್ಚೆಗೆ ಸಿದ್ದನಿದ್ದೇನೆ.ಅವರುಗಳು ಎಲ್ಲಿಗೇ ಕರೆಯಲಿ ಅಲ್ಲಿಗೆ ನಾನು ಹೋಗಲು ಸಿದ್ದನಿದ್ದೇನೆ. ಪಟ್ಟಣದ ಗೌರಮ್ಮನಕೆರೆ ನವೀಕರಣದ ಹೆಸರಿನಲ್ಲಿ ಶಾಸಕರ ಪಟಾಲಂಗಳು ತಲಾ 5 ಸಾವಿರದಂತೆ ವಸೂಲಿ ಮಾಡಿ ಬಂದಿರುವ ಹಣದಿಂದ ದಿನಸಿ ಕಿಟ್ ವಿತರಿಸಿರುವುದು ದುರಂತವಾಗಿದೆ ಎಂದು ಮಂಜುನಾಥ್ ಹರಿಹಾಯ್ದರು.ಚಕ್ರಬಾವಿ ಮತ್ತು ಆಗಲಕೋಟೆ ವಿಎಸ್‌ಎಸ್‌ಎನ್ ಗಳಲ್ಲಿ ಹೆಚ್.ಎನ್.ಅಶೋಕ್ ಅವರ ಕುಮ್ಮಕ್ಕಿನಿಂದ ಹಣ ದುರುಪಯೋಗವಾಗಿದೆ ಎಂದು ಹಿಂದೆಯೂ ಆರೋಪಿಸಿದ್ದೆ ಈಗಲೂ ಅದಕ್ಕೆ ಬದ್ದವಾಗಿದ್ದೇನೆ. ಕುದೂರು ಬಿಡಿಸಿಸಿ ಬ್ಯಾಂಕಿನಲ್ಲಿ ನಕಲಿ ಚಿನ್ನ ಅಡವಿಟ್ಟು 10 ಕೋಟಿ ಹಗರಣ ನಡೆಸಿಲ್ಲ ಎಂದು ಹೇಳುತ್ತಾರಲ್ಲಾ ಮತ್ತೆ ಇವರೇ ಏಕೆ ಮರುಪಾವತಿ ಮಾಡಿದರು.ಕೆಂಪೇಗೌಡರ ಕೋಟೆ ಅಭಿವೃದ್ಧಿಗೆ 103 ಕೋಟಿ ಯಾವ ಪುರುಷಾರ್ಥಕ್ಕೆ ಎಂದು ತಿಳಿಯುತ್ತಿಲ್ಲ.ಇದು ಹಣ ಹೊಡೆಯುವ ತಂತ್ರವಾಗಿದೆ ಎಂದ ಅವರು ಎನ್.ಎಸ್.ಯು.ಐ ಮಾಜಿ ತಾಲ್ಲೂಕು ಅದ್ಯಕ್ಷ ವಕೀಲರಾದ ವಸಂತ್ ಮತ್ತು ಸಂಗಡಿಗರು ನಮ್ಮ ಜೆಡಿಎಸ್ ಪಕ್ಷದ ತತ್ವಸಿದ್ದಾಂತವನ್ನು ಒಪ್ಪಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.ಇವರುಗಳನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು.ಮುಂದೆ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಲಾಗುವುದು ಎಂದು ಮಂಜುನಾಥ್ ಸ್ಪಷ್ಟಪಡಿಸಿದರು.ಎನ್.ಎಸ್.ಯು.ಐ ಮಾಜಿ ಅದ್ಯಕ್ಷ ಯುವ ವಕೀಲ ವಸಂತ್ ಮಾತನಾಡಿ ನಾನು ಈ ಹಿಂದೆ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ್ದೆ.ಆ ಪಕ್ಷದ ಏಳಿಗೆಗಾಗಿ ಹಗಲಿರುಳು ಹತ್ತು ಹಲವಾರು ಹೋರಾಟಗಳ ಮೂಲಕ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ಬರಲು ಶ್ರಮಿಸಿದ್ದೆ.ಆದರೆ ನಮ್ಮ ಶ್ರಮ,ಹೋರಾಟ,ನಿಷ್ಟೆ,ಪ್ರಾಮಾಣಿಕತೆ ಮನ್ನಣೆ ಸಿಗಲಿಲ್ಲ.ಆದಕಾರಣವಾಗಿ ಮಾಜಿ ಶಾಸಕರಾದ ಎ.ಮಂಜುನಾಥ್ ಅವರ ನಾಯಕತ್ವ ಪಕ್ಷದ ತತ್ವಸಿದ್ದಾಂತವನ್ನು ಮೆಚ್ಚಿ ಇಂದು ಜೆಡಿಎಸ್ ಸೇರ್ಪಡೆಯಾಗಿದ್ದೇವೆ.ತಾಲ್ಲೂಕಿನ ಪ್ರತಿ ಬೂತಿನಲ್ಲಿ ಯುವಕರನ್ನು ಸಂಘಟಿಸಿ ಮುಂದೆ ಈ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಗೆಲುವು ಸಾಧಿಸಲು ಶ್ರಮಿಸಲಾಗುವುದು ಎಂದು ವಸಂತ್ ತಿಳಿಸಿದರು.ಅರುಣ್, ಚಂದ್ರಶೇಖರ್, ಕೆಂಪರಾಜು, ಚಂದ್ರು, ಕಿರಣ್, ತಿರುಮಲೆ ಅಭಿ ಜಯರಾಮ್, ಮಧುಸೂದನ್. ಶಿವಸ್ವಾಮಿ, ತಿಲಕ್, ಶಿವಪ್ಪ, ಹರ್ಷಿತ್, ಕಾರ್ತಿಕ್, ರಂಗನಾಥ್, ರಂಗಸ್ವಾಮಿ, ರಘುನಾಥ್, ಚಂದ್ರಶೇಖರ್, ಶಿವಕುಮಾರ್, ಮನು ಸೇರ್ಪಡೆಯಾದರು. ಯೂತ್ ಜೆಡಿಎಸ್ ತಾಲ್ಲೂಕು ಅದ್ಯಕ್ಷ ವಿಜಯಕುಮಾರ್, ಬೆಳಗುಂಬ ವಿಎಸ್‌ಎಸ್‌ಎನ್ ಅದ್ಯಕ್ಷ ಹೊಸಹಳ್ಳಿ ರಂಗನಾಥ್, ಪುರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಕೆ.ವಿ.ಬಾಲರಘು, ಮರೂರು ಸಾಗರಗೌಡ ಸೇರಿದಂತೆ ಮತ್ತಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು