LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

`ಸಾಧನೆಯನ್ನು ಗುರುತಿಸಿ ಗೌರವ ಸಲ್ಲಿಸುವುದು ಎಲ್ಲರಿಗೂ ದೊರೆಯುವುದಿಲ್ಲ'

ಕನಕಪುರ: ಒಬ್ಬ ಶಿಕ್ಷಕ ತನ್ನ ಕ್ಷೇತ್ರದಲ್ಲಿ ಮಾಡಿದ ಸೇವೆ, ಸಾಧನೆಗಳನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಸುಸಮಯ ಎಲ್ಲರಿಗೂ ದೊರೆಯುವುದಿಲ್ಲ ಎಂದು ರಾಜ್ಯ ಎಸ್ ಸಿ /ಎಸ್ ಟಿ ಸರ್ಕಾರಿನೌಕರ ಸಂಘದ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಶಿವಶಂಕರ್ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ನಡೆದ ಶಿಕ್ಷಕ ರಾಜೇಶ್ ಎನ್ ರವರ ಬೀಳ್ಕೊಡುಗೆ ಸಮಾರಂಭದಲ್ಲಿ ಗಣ್ಯರ ಜೊತೆಗೂಡಿ ಬೋಧಿ ವೃಕ್ಷಕ್ಕೆ ನೀರುಎರೆದು ಮಾತನಾಡಿದಅವರು ಒಬ್ಬ ಸರ್ಕಾರಿ ಶಾಲಾ ಸಾಮಾನ್ಯ ಶಿಕ್ಷಕನಿಗೆ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಬಹಳ ಅರ್ಥಪೂರ್ಣವಾಗಿ ಅವರ ಒಡನಾಡಿಗಳು ಬೀಳ್ಕೊಡುಗೆ ಹಾಗೂ ಗೌರವ ಸಲ್ಲಿಸುತ್ತಿರುವುದು ಬಹಳ ಸಂತಸದ ವಿಷಯ, ಜ್ಯೋತಿ ಭಾಪುಲೆ, ಅಂಬೇಡ್ಕರ್ ಸೇರಿದಂತೆ ಮಹಾನ್ ಪುರುಷರ ಸಾಧನೆಯ ಹಿಂದೆ ಅವರು ಪತ್ನಿಯರ ಸಹಕಾರ ಎಷ್ಟು ಪ್ರಮುಖ ಪಾತ್ರ ವಹಿಸಿದಂತೆ ರಾಜೇಶ್ ರವರ ಸಾಧನೆಗೆ ಅವರ ಪತ್ನಿಯ ಪಾತ್ರ ಬಹಳ ದೊಡ್ಡದಾಗಿದ್ದು ಮಾನವ ಜೀವನ ಪರೋಪಕಾರಿ ಜೀವನ ಆಗಿದ್ದು ಈ ನಿಟ್ಟಿನಲ್ಲಿ ರಾಜೇಶ್ ರವರು ತಮ್ಮ ಸೇವಾ ಸ್ಥಳದಲ್ಲಿ ಉತ್ತಮ ಶಿಕ್ಷಕ
ರಾಗಿ ಸೇವೆ ಸಲ್ಲಿಸಿದ ಜೊತೆಗೆ ಶಾಲಾ ಮಕ್ಕಳಿಗೆ ಅಗತ್ಯ ವಾದ ಪಠ್ಯ ಪರಿಕರಗಳ ಜೊತೆಗೆ ಶಾಲೆಯ ಉನ್ನತಿಗಾಗಿ ಹಲವು ದಾನಿಗಳ ಸಹಕಾರದಿಂದ ಅಭಿವೃದ್ಧಿ ಪಡಿಸಿ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಶಾಲೆಗೆ ತಂದು ಕೊಟ್ಟಿರುವುದು ಹೆಮ್ಮೆಯ ವಿಷಯ ಎಂದರು. ರಾಜೇಶ್ ರವರ ಕುಟುಂಬದ ಹಿನ್ನೆಲೆಯೇ ಅತ್ಯಂತ ಸರಳ ಜೀವನ ಇಂದು ಅವರ ಸಮಾಜಮುಖಿ ವ್ಯಕ್ತಿತ್ವ ವನ್ನು ರೂಪಿಸಲು ಸಹಕಾರಿಯಾಗಿದ್ದು ಅವರು ಮುಂದೆ ಹೋಗಲಿರುವ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ಉತ್ತಮ ವಿದ್ಯಾರ್ಥಿಗಳನ್ನು ನಾಡಿಗೆ ಕೊಡುಗೆಯಾಗಿ ನೀಡುವುದರ ಜೊತೆಗೆ ಅವರ ಸಮಾಜಮುಖಿ ಕೆಲಸಗಳನ್ನು ಮುಂದು ವಹಿಸಿಕೊಂಡು ಹೋಗಲಿ ಎಂದು ಶುಭ ಹಾರೈಸಿದರು.ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿ ಎಲ್ ಓ ರಾಜು ಮಾತನಾಡಿ ಒಂದು ಶಾಲೆಯಲ್ಲಿ ಸುಮಾರು 14 ವರ್ಷಗಳ ನಿರಂತರ ಸೇವೆ ಸಲ್ಲಿಸಿ ಒಬ್ಬ ಉತ್ತಮ ಶಿಕ್ಷಕನಾಗಿ ಸೇವೆಯನ್ನು ಸಲ್ಲಿಸುವುದು ತುಂಬಾ ಸುಲಭದ ಕೆಲಸವಲ್ಲ,ನನ್ನ ಶಾಲೆ ನನ್ನ ಜವಬ್ದಾರಿ ಎಂಬ ವಾಕ್ಯದೊಂದಿಗೆ ಕರ್ತವ್ಯಕ್ಕೆ ಚುತಿಬಾರದಂತೆ ವಿದ್ಯಾರ್ಥಿ ಗಳಿಗೆ ಉತ್ತಮ ವಾತವರಣ ಕಲ್ಲಿಸಿ ಅವರ ಆಸಕ್ತಿಗೆ ಅನುಗುಣವಾಗಿ ಕಲಿಕೆಗೆ ಅನುವು ಮಾಡಿಕೊಟ್ಟು ಶಾಲೆ ಯಲ್ಲಿ ಉತ್ತಮ ಫಲಿತಾಂಶ ತಂದು ಕೊಡುವ ಮೂಲಕ ಸಮಾಜದ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ
ಯಾಗಿ ಹೋಗುತ್ತಿರುವ ಶೈಕ್ಷಣಿಕ ಹಾಗೂ ಸಮಾಜಸೇವೆ ಈಗೆಯೇ ಮುಂದುವರಿಯಲಿ ಎಂದು ಹಾರೈಸಿದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಕ ರಾಜೇಶ್ ಭಾವುಕರಾಗಿ ಮಾತನಾಡಿ ನಾನು ಇಂದು ಏನೇ ಸಾಧನೆ ಮಾಡಿದ್ದರು ಅದಕ್ಕೆ ನನ್ನ ಅಣ್ಣ ಶಿವಕುಮಾರ್ ರವರ ಪ್ರೀತಿ ,ಸಹಕಾರ ಆಶೀರ್ವಾರವರವೇ ಕಾರಣವಾಗಿದ್ದು ನಾನು ಏನೇ ಸೇವೆ, ಸಾಧನೆ, ಪ್ರೀತಿ ಗಳಿಸಿದ್ದರೂ ಅದಕ್ಕೆ ಅವರೇ ಕಾರಣ ಎಂದು ಭಾವುಕರಾಗಿ ನುಡಿದರು,ನನ್ನ ತಂದೆ ತಾಯಿಗಳ ಸರಳ ಹಾಗೂ ಸೇವಾ ಮನೋಭಾವ ನನಗೆ ಪ್ರೇರಣಿಯಾಗಿದ್ದು ಇದರ ಜೊತೆಗೆ ನನ್ನ ಧರ್ಮ ಪತ್ನಿಯ ಸಹಕಾರ, ಸಲಹೆ ನನಗೆ ಶಕ್ತಿಯಾಗಿ ನನ್ನ ಕೈ ಯಿಂದ ಶಿಕ್ಷಣ ಹಾಗೂ ಸಮಾಜಕ್ಕೆ ಅಲ್ಪ ಪ್ರಮಾಣದ ಸೇವೆಯನ್ನು ಮಾಡಲು ಸಾಧ್ಯವಾಗಿದೆ,ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಬನವಾಸಿ ಶಾಲೆಗೆ ರಾಜ್ಯ ಮಟ್ಟದ ಉತ್ತಮ ಶಾಲಾ ಪ್ರಶಸ್ತಿ ತಂದು ಕೊಡುವಲ್ಲಿ ನನ್ನ ಪಾತ್ರ ಚಿಕ್ಕದಾಗಿದ್ದು ವಿದ್ಯಾರ್ಥಿಗಳ, ಸಹ ಶಿಕ್ಷಕರ ಸಹಕಾರ ಬಹಳ ದೊಡ್ಡದು, ನನ್ನ ವೃತ್ತಿ ಜೀವನದಲ್ಲಿ ನನ್ನ ಕೈಲಾದ ಮಟ್ಟಿಗೆ ಹಲವು ಶಾಲೆಗಳಿಗೆ ಅಗತ್ಯವಾದ ಪರಿಕರಗಳನ್ನುದಾನಿಗಳ ಮೂಲಕ ಕೊಡಿಸಿದ್ದು ನನಗೆ ತೃಪ್ತಿ ತಂದಿದೆ, ನಾನೊಬ್ಬ ನಿಂದ ಏನು ಸೇವೆ ಮಾಡಲು ಸಾಧ್ಯವಾಗಿಲ್ಲ ನನ್ನ ಜೊತೆ ಜೊತೆಗೆ ನಿಂತು ನನ್ನ ಎಲ್ಲಾ ಕೆಲಸ ಕಾರ್ಯ ಗಳಿಗೆ ಸಹಕಾರಿಸಿದ ನನ್ನೆಲ್ಲಾ ಆತ್ಮೀಯ ಸಹೋದ್ಯೋಗಿ ಗಳು,ಒಡನಾಡಿಗಳು, ದಾನಿಗಳ ಸಹಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ ನಾನು ಎಲ್ಲಿಗೆ ಹೋದರೂ ನಾನು ಇದೇ ತಾಲ್ಲೂಕಿನ ಮಗನಾಗಿದ್ದು ಮುಂದೆಯೂ ಸಮಾಜದ, ಶಿಕ್ಷಣ ಕ್ಷೇತ್ರದ ಸೇವೆ ಮಾಡುವುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕಿ ಜಯಲಕ್ಷಿ÷್ಮ,ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಅಧಿಕ್ಷಕ ಎಂ.ಸಿ.ನಾಗರಾಜು ಜಿಲ್ಲಾ ಕೆಡಿಪಿ ಸದಸ್ಯ ಗುರುಮೂರ್ತಿ,ನಿವೃತ್ತ ಶಿಕ್ಷಕ ಆರ್. ವಿ. ನಾರಾಯಣ್, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸತೀಶ್,ರೋಟರಿ ಅಧ್ಯಕ್ಷ ಸಿದ್ಧರಾಜು ಶಿಕ್ಷಕ ರಾಜೇಶ್ ರವರ ಕರ್ತವ್ಯ ನಿಷ್ಟೆ, ಸ್ನೇಹ ಮನೋಭಾವ ಸಮಾಜ ಸೇವೆಯ ಬಗ್ಗೆ ಮಾತನಾಡಿ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಸಮಾಜ ಸೇವಕ ಹೆಚ್. ಕೆ. ರವಿ ಸೇರಿದಂತೆ ತಾಲ್ಲೂಕಿನ ಶಿಕ್ಷಕ ಬಂಧುಗಳು,ಪೋಷಕರು, ವಿದ್ಯಾರ್ಥಿ ಗಳು ಈ ವೇಳೆ ಉಪಸ್ಥಿತರಿದ್ದು ಅಭಿನಂದನೆ ಸಲ್ಲಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು