LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ವೀರಶೈವ ಲಿಂಗಾಯತ ಸಮುದಾಯದ ರುದ್ರಭೂಮಿಗಾಗಿ ತಹಶೀಲ್ದಾರರಿಗೆ ಮನವಿ

ದೇವನಹಳ್ಳಿ : ತಾಲೂಕಿನ ಅರದೇಶನಹಳ್ಳಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯದ ನಾಗರಾಜ್ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಹಾಗೂ ಅರದೇಶನಹಳ್ಳಿ ಗ್ರಾಮದ ಸರ್ವೆ.ನಂ-58 ರ 22 ಗುಂಟೆ ಸರಕಾರಿ ಜಾಗವನ್ನು ವೀರಶೈವ ಲಿಂಗಾಯತ ಸಮುದಾಯದ ಸ್ಮಶಾನಕ್ಕೆ ತ್ವರಿತವಾಗಿ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಸಮಾಜದ ಜಿಲ್ಲಾ ಹಾಗೂ ತಾಲೂಕು ಘಟಕಗಳ ಮುಖಂಡರು ತಹಶೀಲ್ದಾರ್ ಅನಿಲ್ ಎಂ ರವರನ್ನು ತಾಲೂಕು ಕಚೇರಿಯಲ್ಲಿ ಬೇಟಿಯಾಗಿ ಲಿಖಿತ ಮನವಿ ಸಲ್ಲಿಸಿದರು.
ನಂತರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್. ರಮೇಶ್ ಮಾತನಾಡಿ ಅರದೇಶಹಳ್ಳಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ನೂರಾರು ವರ್ಷಗಳಿಂದ ಮೂಲನಿವಾಸಿಗಳಾಗಿದ್ದು ಅನೇಕ ಕುಟುಂಬಗಳು ಅಲ್ಲಿ ವಾಸವಾಗಿದ್ದು ಸಮುದಾಯವರು ಮೃತಪಟ್ಟರೆ ಅದೇ ಗ್ರಾಮದ ಸರ್ವೆನಂ-58ರ ಸರ್ಕಾರಿ ಜಾಗವಿದ್ದು ಅದೇ ಜಾಗದಲ್ಲಿ ಅಂತ್ಯಸAಸ್ಕಾರವನ್ನು ಮಾಡುತ್ತಾ ಬಂದಿದ್ದಾರೆ ಜಾಲಿಗೆ ಗ್ರಾಮಪಂಚಾಯತಿ ಸರ್ವಸದಸ್ಯರ ಸಭೆಯಲ್ಲಿ ಸದರಿ ಜಾಗವನ್ನು ವೀರಶೈವ ಲಿಂಗಾಯ ಸಮುದಾಯಕ್ಕೆ ಮೀಸಲಿಡುವಂತೆ ಅನುಮೋದನೆ ನೀಡಿರುತ್ತಾರೆ ಹಾಗೂ ಆ 22 ಗುಂಟೆ ಜಾಗವನ್ನು ವೀರಶೈವ ಲಿಂಗಾಯತ ಸಮುದಾಯದ ಸ್ಮಶಾನಕ್ಕೆ ಮೀಸಲಿಡುವಂತೆ ಹಿಂದಿನ ತಹಶಿಲ್ದಾರ್ ರವರು ಭೂಮಾಪಕರಿಗೆ 2025 ರಲ್ಲೇ ರಂದು ಆದೇಶಿಸಿದ್ದರೂ ಸಹ ಇದುವರೆಗೆ ಭೂಮಾಪಕರು ಸರ್ವೆ ಮಾಡಿ ಸ್ಕೆಚ್ ಮಾಡಿರುವುದಿಲ್ಲ. ಆ ಜಾಗವನ್ನು ತ್ವರಿತವಾಗಿ ಸ್ಮಶಾನಕ್ಕೆ ಮಂಜೂರು ಮಾಡಬೇಕು. ಇದರ ವಿಳಂಬದಿAದಾಗಿ ನಿನ್ನೆಯ ದಿನ ಅರದೇಶನಹಳ್ಳಿ ಗ್ರಾಮದ ನಾಗರಾಜ್ ಮೃತಪಟ್ಟಿದ್ದು ಅವರ ಅಂತ್ಯ ಸಂಸ್ಕಾರ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಏಕಾಏಕಿ ಯಾರು ದೂರು ನೀಡದಿದ್ದರು ಸಹ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸರ್ವೆ ನಂ-58ರದಲ್ಲಿ ಯಾವುದೇ ಕಾರಣಕ್ಕೂ ಅಂತ್ಯಕ್ರಿಯೆ ಮಾಡಬಾರದು ಎಂದು ತಡೆದು ತೊಂದರೆ ನೀಡಿದ್ದಲ್ಲದೆ ಸ್ಥಳಕ್ಕೆ ಪೊಲೀಸರನ್ನು ಕರೆಸಿ ಅಂತ್ಯಸAಸ್ಕಾರದ ವೇಳೆ ರಸ್ತೆಯಲ್ಲೇ ಶವ ನಿಲ್ಲಿಸಿ ಅಂತ್ಯಸಂಸ್ಕಾರದ ವಿಧಿವಿಧಾನಗಳಿಗೆ ತೊಂದರೆ ಮಾಡಿ ಮೃತಪಟ್ಟ ಕುಟುಂಬದವರಿಗೆ ನೋವು ನೀಡಿದ್ದಲ್ಲದೆ ಇಡೀ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಅಂತ್ಯಸAಸ್ಕಾರಕ್ಕೆ ಅನುವುಮಾಡಿಕೊಡುವಂತೆ ಪರಿಪರಿಯಾಗಿ ಕೇಳಿಕೊಂಡರು ಸಹ ಅನುಮತಿ ನೀಡದೇ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಸ್ಮಶಾನ ಜಾಗವನ್ನು ತ್ವರಿತವಾಗಿ ವೀರಶೈವ ಲಿಂಗಾಯತ ಸಮುದಾಯದ ಸ್ಮಶಾನಕ್ಕೆ ಮೀಸಲಿಡಬೇಕೆಂದು ಒತ್ತಾಯಿಸುತ್ತೇವೆ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಹಾಗೂ ತ್ವರಿತವಾಗಿ ಸ್ಮಶಾನಕ್ಕೆ ಜಾಗ ಮಂಜೂರು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಅನಿಲ್ ಮಾತನಾಡಿ ನಮ್ಮ ದಾಖಲೆಗಳ ಪ್ರಕಾರ ಅದು ಕುಂಟೆ ಜಾಗ ಎಂದು ಇದೇ ಕೆರೆ ಕುಂಟೆ ಮುಚ್ಚಿ ಇತರೆ ಉದ್ದೇಶಕ್ಕೆ ಭೂಮಿ ನೀಡುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಒಂದು ವೇಳೆ ಕುಂಟೆ ಮುಚ್ಚದೇ ಅದರ ಪಕ್ಕದ ಸರ್ಕಾರಿ ಜಾಗದಲ್ಲಿ ಸ್ಮಶಾನ ಮಾಡಿಕೊಂಡಿದ್ದರೆ ಅದನ್ನು ನಾನು ಒಮ್ಮೆ ಖುದ್ದು ಬೇಟಿ ನೀಡಿ ಪರಿಶೀಲಿಸಿ ನಿಮಗೆ ಸ್ಮಶಾನಕ್ಕೆ ಭೂಮಿ ನೀಡಲು ಅವಕಾಶ ವಿದ್ದರೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್. ರಮೇಶ್, ತಾಲುಕು ಖಜಾಂಚಿ ಎಸ್. ನಾಗೇಶ್, ಜಿಲ್ಲಾ ಕಾರ್ಯದರ್ಶಿ ಶಾಂತಮೂರ್ತಿ, ಮಾಜಿ ಜಿಲ್ಲಾ ಅಧ್ಯಕ್ಷ ವಿರುಪಾಕ್ಷ ಶಾಸ್ತ್ರೀ ತಾಲೂಕು ಕಾರ್ಯದರ್ಶಿ ಮಲ್ಲಿಕಾರ್ಜುನ, ಇತರೇ ಪದಾದಿಕಾರಿಗಳಾ ಅರದೇಶನಹಳ್ಳಿ ಎ.ಪಿ.ನಾಗೇಶ್, ಎಸ್, ಮಹೇಶ್, ಆನಂದ, ಚನ್ನಪ್ಪ, ಮುನಿರಾಜು, ರವಿಕುಮಾರ್, ನಾಗರಾಜ್, ಬಸವರಾಜು, ಮನೋಜಕುಮಾರ್, ರುದ್ರಮುನಿಯಪ್ಪ, ಬಸವರಾಜ್, ಚಿಕ್ಕಸಿದ್ದಪ್ಪ, ಲಾಯರ್ ಕೆಂಪರಾಜ್ ಮುಂತಾದವರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು