ಕನಕಪುರ: ಕಳೆದ ಸಾಲಿಗಿಂತ ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಆರ್ ಇ ಎಸ್ ಸಂಸ್ಥೆ ಅಧ್ಯಕ್ಷ ಎಚ್ ಕೆ ಶ್ರೀಕಂಠ ತಿಳಿಸಿದರು.
ನಗರದ ರೂರಲ್ ಕಾಲೇಜಿನ ದುಂತೂರು ಮಾರೇಗೌಡ ಸಭಾಂಗಣದಲ್ಲಿ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಪೂಜ್ಯ ಕರಿಯಪ್ಪ ನವರ ಕೂಸಾದ ಈ ಶಿಕ್ಷಣ ಸಂಸ್ಥೆಯಲ್ಲಿ ನಾನಾ ಕಾರಣ ಗಳಿಂದ ಕಳೆದ ಹಲವು ವರ್ಷ ಗಳಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧಾರಣ ಫಲಿತಾಂಶವನ್ನು ಪಡೆದು ಕೊಳ್ಳುತ್ತಾ ಬರುತ್ತಿದ್ದು ನನಗೆ ಹಾಗೂ ನಮ್ಮ ಶಿಕ್ಷಣ ಸಂಸ್ಥೆಗೆ ಕೊಂಚ ಬೇಸರ ತರಿಸಿತ್ತು ಆದರೆ ಈ ಬಾರಿ ನಮ್ಮ ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಶಿಕ್ಷಕರ ಕಾಳಜಿಯಿಂದ ಈ ಸಾಲಿನಲ್ಲಿ ಸಾತನೂರು ಹಾಗೂ ಕನಕಪುರ ಶಾಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಶೇ. 93 ರಷ್ಟು ಫಲಿತಾಂಶ ತಂದಿರುವುದು ಸಂತಸ ತಂದಿದೆ ಎಂದರು.
ಪೂಜ್ಯ ಕರಿಯಪ್ಪ ನವರ ಮೂಲ ಉದ್ದೇಶ ಗ್ರಾಮೀಣ ಭಾಗದ ಮಕ್ಕಳು ಉನ್ನತ ವ್ಯಾಸಂಗ ಇಲ್ಲಿಯೇ ಪಡೆಯ ಬೇಕೆಂಬ ಕನಸನ್ನು ಈಡೇರಿಸುವ ಸಲುವಾಗಿ ನಮ್ಮ ಆಡಳಿತ ಮಂಡಳಿ ಹಲವು ಹೊಸ ಹೊಸ ತರಗತಿಗಳನ್ನು ಆರಂಭಿಸಲಾಗಿದ್ದು ಪಿಯುಸಿ ನಂತರದ ಸಿ ಇ ಟಿ, ನೀಟ್ ಪರೀಕ್ಷೆಗೆ ತಯಾರಿ ನಡೆಸುವ ಸಲುವಾಗಿ ಬೇಸ್ ಶಿಕ್ಷಣ ವನ್ನು ಆರಂಭಿಸಲಾಗಿದೆ, ತಾಲ್ಲೂಕಿನ ಜನರ ಹಿತದೃಷ್ಟಿ ಯಿಂದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕೋರ್ಸ ಅನ್ನು ಈ ಸಾಲಿನಿಂದ ಆರಂಭಿಸಲಾಗಿದ್ದು ವಿದ್ಯೆಯಿಂದ ವಂಚಿತರಾದ ಹಾಗೂ ಪದವಿ ಪಡೆಯುವ ಆಸಕ್ತಿ ಇರುವ ತಾಲ್ಲೂಕಿನ ಜನತೆ ಇದರ ಸದುಪಯೋಗವನ್ನು ಪಡಿಸಿ ಕೊಳ್ಳುವಂತೆ ತಿಳಿಸಿದರು.
ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ನಾಗರಾಜು, ಮಂಜುನಾಥ್, ಪುಟ್ಟಸ್ವಾಮಿ ಹಾಗೂ ಶಿಕ್ಷಕರಾದ ಟಿ ವಿ ಎನ್ ಪ್ರಸಾದ್, ಗುರುಮೂರ್ತಿ, ಕಾಲೇಜು ಪ್ರಾಂಶುಪಾಲ ಕೆಂಪೇಗೌಡ, ಉಪನ್ಯಾಸಕರಾದ ಮಧು ಮೋಹನ್, ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಪೋಷಕರು ಈ ವೇಳೆ ಉಪಸ್ಥಿತರಿದ್ದರು.