LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ ಇಂದಿಗೂ ಪ್ರಸ್ತುತ

ಕೆಂಗೇರಿ: ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರು ದೇಶಕ್ಕೆ ಮತ್ತು ರಾಜ್ಯಕ್ಕೆ ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ ಎಂ ಮರೇಗೌಡರು ತಿಳಿಸಿದ್ದಾರೆ.ನಂತರ ಮಾತನಾಡಿದ ಅವರು ನಾಡಪ್ರಭು ಕೆಂಪೇಗೌಡರು (1510-1569) ಪ್ರಸಿದ್ಧ ಬೆಂಗಳೂರು ನಗರದ ನಿರ್ಮಾತೃ ಹಾಗೂ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಯಲಹಂಕ ನಾಡಪ್ರಭು. ಇವರು ತಮ್ಮ ದೂರದೃಷ್ಟಿಯಿಂದ ನಗರದಲ್ಲಿ ಕೆರೆಗಳನ್ನು ನಿರ್ಮಿಸಿ, ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿ ಇಂದಿನ ಮಹಾನಗರಕ್ಕೆ ಭದ್ರಬುನಾದಿ ಹಾಕಿದ್ದಾರೆಕೆಂಪೇಗೌಡರು ವಿಜಯನಗರದ ಅರಸರಾದ ಅಚ್ಯುತ ದೇವರಾಯನಿಂದ ಅನುಮತಿ ಪಡೆದು, ಪ್ರಸ್ತುತ ಬೆಂಗಳೂರು ಇರುವ ಜಾಗದಲ್ಲಿ ಕೋಟೆ ನಿರ್ಮಿಸಿದರು.ಪೇಟೆಗಳು: ನಗರವನ್ನು ವ್ಯವಸ್ಥಿತವಾಗಿ ವಿಂಗಡಿಸಿ ಚಿಕ್ಕಪೇಟೆ, ದೊಡ್ಡಪೇಟೆ, ಅಕ್ಕಿಪೇಟೆ ಮತ್ತು ಕುಂಬಾರಪೇಟೆಯAತಹ ವಿವಿಧ ವಾಣಿಜ್ಯ ಪೇಟೆಗಳನ್ನು ನಿರ್ಮಿಸಿದರು.ಪ್ರಸ್ತುತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಇವರ ಹೆಸರನ್ನಿಟ್ಟು ಗೌರವಿಸಲಾಗಿದೆ. ಇವರು ಕೃಷಿ ಮತ್ತು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬೆಂಗಳೂರಿನ ಸುತ್ತಮುತ್ತ ನೂರಾರು ಕೆರೆ-ಕಟ್ಟೆಗಳನ್ನು (ಉದಾಹರಣೆಗೆ: ಧರ್ಮಾಂಬುಧಿ ಕೆರೆ, ಸಂಪAಗಿ ಕೆರೆ) ನಿರ್ಮಿಸಿದರು. ಇವರ ಕಾಲದ ಈ ದೂರದೃಷ್ಟಿಯ ಜಲ ನಿರ್ವಹಣೆಯಿಂದಾಗಿ ಬೆಂಗಳೂರು ‘ಕೆರೆಗಳ ನಗರಿ’ ಎಂದು ಪ್ರಸಿದ್ಧಿ ಪಡೆಯಿತು. ಆಡಳಿತ ಮತ್ತು ಕೊಡುಗೆಗಳುಕೆಂಪೇಗೌಡರು ಧರ್ಮಸಹಿಷ್ಣುಗಳಾಗಿದ್ದು, ಶಿವ ದೇವಾಲಯಗಳನ್ನು ನಿರ್ಮಿಸಿದರು ಮತ್ತು ಪ್ರಸಿದ್ಧ ಬಸವನಗುಡಿಯ ದೊಡ್ಡ ಗವಿಗಂಗಾಧರೇಶ್ವರ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರು.ಇವರು “ವೃಷಭಾವತಿ” ನದಿಯ ಉಗಮ ಸ್ಥಾನದಲ್ಲಿ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು.ಪ್ರಸ್ತುತ ಬೆಂಗಳೂರಿನ ಹೃದಯಭಾಗದಲ್ಲಿರುವ ಕೆಂಪೇಗೌಡರ ಗೋಪುರಗಳು ಇವರು ನಿರ್ಮಿಸಿದ ನಗರದ ನಾಲ್ಕು ದಿಕ್ಕುಗಳ ಗಡಿಗಳನ್ನು ಸೂಚಿಸುತ್ತವೆ. ಇಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಇದೆ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನವನ್ನು ನೆರವೇಸಿದರು.ಕೆ ಆರ್ ಡಿ ಎಲ್ ನ ಮಾಜಿ ಅಧ್ಯಕ್ಷ ರುದ್ರೇಶ್ ಜಿ ಮುನಿರಾಜ್ ಒಕ್ಕಲಿಗರ ಸಂಘದ ಸಿ ಎಂ ಮಾರೇಗೌಡರು ಬಿ ಜೆ ಪಿ ನಗರ ಮಂಡಲ ಅಧ್ಯಕ್ಷ ಜಯರಾಮೇಗೌಡ ಹಿರಿಯ ಬಿ ಜೆ ಪಿ ಮುಖಂಡ ಗಿರಿಯಪ್ಪ ವೀಣಾನಾಗರಾಜ್ ಮೈಲಸಂದ್ರ ಮುನಿರಾಜ್ ಅನಿಲ್ ಚಳಗೇರಿ ಬಿ ಜೆ ಪಿ ಹಿರಿಯ ಮುಖಂಡ ಸಿ ಎಂ ಸಿ ಸತ್ಯನಾರಾಯಣ ಕೆ ಕೆ ಬಸವರಾಜ್ ಜೆ ಡಿ ಎಸ್ ಮುಖಂಡ ಕೇಶವಮೂರ್ತಿ ರ ಅಂಜಿನಪ್ಪ ಶಶಿಕುಮಾರ್ ಮಹದೇವ್ ಮುನಿಸ್ವಾಮಿ ಶಿವರಾಂ ರಾಮಣ್ಣ ಕೆ ಎಸ್ ಮಂಜುನಾಥಯ್ಯ ಜೆ ರಮೇಶ್ ಉಪೇಂದ್ರ ಧನಲಕ್ಷ÷್ಮಮ್ಮ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು ಈ ಕಾರ್ಯಕ್ರಮದ ನೇತೃತ್ವವನ್ನು ಎಸ್ ಆರ್ ಮೋಹನಕುಮಾರ್ ಮತ್ತು ನಾಗರಾಜ್ ವಹಿಸಿದ್ದರು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು