LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಸಮುದ್ರ ಮಂಥನ’  

ಆಡಿಯೋ ಹಕ್ಕು `ರಿಷಬ್ ಶೆಟ್ಟಿ ಮ್ಯೂಸಿಕ್' ತೆಕ್ಕೆಗೆ


`ಸಮುದ್ರ ಮಂಥನ’ ಚಿತ್ರದ ಆಡಿಯೋ ಹಕ್ಕುಗಳನ್ನು `ರಿಷಬ್ ಶೆಟ್ಟಿ ಮ್ಯೂಸಿಕ್’ ಸಂಸ್ಥೆ ಪ್ರತಿಷ್ಠಿತ ಮೊತ್ತಕ್ಕೆ ಖರೀದಿಸಿದೆ. ನಿಶಾಂತ್ ಮಧುಗಿರಿ ಮತ್ತು ಮನೋಜ್ ಚಂದ್ರಕಾಂತ್ ಜಂಟಿಯಾಗಿ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ಆಲ್ಬಮ್‌ನಲ್ಲಿ ಒಟ್ಟು ಐದು ವಿಭಿನ್ನ ಶೈಲಿಯ ಹಾಡುಗಳಿದ್ದು, ಈ ಎಲ್ಲಾ ಗೀತೆಗಳಿಗೆ ಖ್ಯಾತ ಗೀತರಚನೆಕಾರ ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯದ ಸ್ಪರ್ಶ ನೀಡಿದ್ದಾರೆ. ವಿಶೇಷವೆಂದರೆ, ಸಿದ್ದಾರ್ಥ್ ಬೆಳ್ಮಣ್ಣು, ಅನಿರುದ್ಧ್ ಶಾಸ್ತಿç, ಮೈಮ್ ರಾಮದಾಸ್, ಐರಾ ಉಡುಪಿ ಹಾಗೂ ಕರಿಬಸವ ತಡಕಲ್ ಅವರಂತಹ ಪ್ರತಿಭಾವಂತ ಗಾಯಕರು ಈ ಹಾಡುಗಳಿಗೆ ತಮ್ಮ ಕಂಠಸಿರಿ ನೀಡಿದ್ದಾರೆ.ಚಿತ್ರದ ತಾರಾಗಣದಲ್ಲಿ ಯುವ ನಟ ಯಶ್ವಂತ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ `ಬ್ಲಿಂಕ್’ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಮಂದಾರ ಬಟ್ಟಲಹಳ್ಳಿ ನಾಯಕಿಯಾಗಿ ಅಭಿನಯಿಸಿದ್ದಾರೆ. ರಫ್ ಕಟ್ ಪ್ರೊಡಕ್ಷನ್ಸ್, ಎಸ್ಕ್ವೇರ್ ಮತ್ತು ಆರುಷ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಈ ಸಿನಿಮಾ ಅದ್ದೂರಿಯಾಗಿ ನಿರ್ಮಾಣವಾಗಿದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುವ ಭರವಸೆ ಮೂಡಿಸಿದೆ. ಸದ್ಯ `ಸಮುದ್ರ ಮಂಥನ’ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ. ಅಷ್ಟೇ ಅಲ್ಲದೆ, ಸಿನಿಮಾ ಈಗಾಗಲೇ ಸೆನ್ಸಾರ್ ಮಂಡಳಿಯ ಅಂಗಳದಲ್ಲಿದ್ದು, ಪ್ರಮಾಣಪತ್ರ ಸಿಕ್ಕ ಕೂಡಲೇ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಲಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಈ ವಿಭಿನ್ನ ಪ್ರಯತ್ನದ ಸಿನಿಮಾ ಬೆಳ್ಳಿಪರದೆಯ ಮೇಲೆ ಮೂಡಿಬರಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST