ಧೀರೇನ್ ಹಾಗೂ ಅಮೃತಾ ಪ್ರೇಮ್ ನಟಿಸಿರುವ `ಪಬ್ಬಾರ್’ ಸಿನಿಮಾ ಡಿಸೆಂಬರ್ 11ರಂದು ತೆರೆಕಾಣಲಿದೆ ಸಿನಿಮಾದ ಮೂರನೇ ಗೀತೆ `ನಡೆಸು ಬೆಳಕೆ..’ ವಿಡಿಯೋ ಸಾಂಗ್ ಇದೀಗ ಹೊರ ಬಂದಿದೆ.ಗಾಯಕ ಸಿದ್ ಶ್ರೀರಾಮ್ ಧ್ವನಿ, ಮಯೂರ್ ಅಂಬೆಕಲ್ಲು ಸಂಗೀತ ವಿಶ್ವಜಿತ್ ರಾವ್ ಸಾಹಿತ್ಯ ಇದೆ. ಜೊತೆಗೆ ವಿಶ್ವಜಿತ್ ರಾವ್ ಅವರೇ ಚಿತ್ರದ ಛಾಯಾಗ್ರಾಹಕ ಕೂಡಾ. ಸಂದೀಪ್ ಸುಂಕದ್ ಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರದ ತಾರಾಗಣದಲ್ಲಿ ಧೀರೇನ್ ಮತ್ತು ಅಮೃತಾ ಪ್ರೇಮ್ ಜೊತೆಗೆ ಆರ್ಯನ್ ಗೌಡ, ಅಯ್ಯಪ್ಪ ಪಿ. ಶರ್ಮಾ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಭರತ್ ಜಿ.ಬಿ. ಅಭಿನಯಿಸಿದ್ದಾರೆ.