LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ನಗುವಿನ ಹಬ್ಬಕ್ಕೆ ಸಜ್ಜಾದ `ರಿಲ್ಯಾಕ್ಸ್': ಈ ವಾರ ಬಿಡುಗಡೆ 


ನಟ ಕೋಮಲ್ ಕುಮಾರ್  ನಟಿ ಸೋನಲ್ ಮೊಂತೆರೊ ಅವರೊಂದಿಗೆ `ರಿಲ್ಯಾಕ್ಸ್’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅಂಬಟಿ ಮಧುಮೋಹನ್ ಕೃಷ್ಣ ನಿರ್ಮಾಣದ, ಶ್ರೀನಿವಾಸ್ ಮಂಡ್ಯ ನಿರ್ದೇಶನದ ಈ ಚಿತ್ರಕ್ಕೆ ಮುರಳಿಕೃಷ್ಣ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು ಈ ವಾರ ಬಿಡುಗಡೆಯಾಗಲಿದೆ.ಚಿತ್ರದ  ಟ್ರೆöÊಲರ್ ಕೂಡಾ ಇತ್ತೀಚೆಗೆ  ಬಿಡುಗಡೆಯಾಯಿತು.  ಹರೀಶ್ ಹಾಗೂ ಚಿಂಗಾರಿ ಮಹದೇವ್ ಟ್ರೈಲರ್ ಬಿಡುಗಡೆ ಮಾಡಿದರು. ನಿರ್ಮಾಪಕ ಅಂಬಟಿ ಮಧುಮೋಹನ್ ಕೃಷ್ಣ  ನಿರ್ಮಾಣದ ಅನುಭವವನ್ನು ಹಂಚಿಕೊಂಡರು. ಚಿತ್ರದ ಶೇಕಡಾ 25ರಷ್ಟು ಚಿತ್ರೀಕರಣ ಮುಗಿದ ಬಳಿಕ ನಾನು ಸಿನಿಮಾ ನೋಡಿದೆ. ನಟ ಕೋಮಲ್ ಅವರ ಪಾತ್ರ ನನಗೆ ತುಂಬಾ ಇಷ್ಟವಾಯಿತು. ಹಾಗಾಗಿ ಸಿನಿಮಾವನ್ನು ಟೇಕ್ ಓವರ್ ಮಾಡಲು ನಿರ್ಧರಿಸಿದೆ. ಬಡ ಕುಟುಂಬದ ನಾಯಕ ಹಾಗೂ ಶ್ರೀಮಂತ ಮನೆತನದ ನಾಯಕಿಯ ನಡುವಿನ ಕಥೆ ಇದಾಗಿದೆ ಎಂದರು.ನಿರ್ದೇಶಕ ಶ್ರೀನಿವಾಸ್ ಮಂಡ್ಯ ಮಾತನಾಡಿ ಇದು ಪ್ರೇಕ್ಷಕರಿಗಾಗಿ ಮಾಡಿರುವ ಸಿನಿಮಾ ಎಂದರು. ನಟ ಕೋಮಲ್ ಕುಮಾರ್ ತಮ್ಮ ಎಂದಿನ ಹಾಸ್ಯಮಯ ಮಾತುಗಳ ಮೂಲಕ ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.ನಾಯಕಿ ಸೋನಲ್ ಮೊಂತೆರೊ ಚಿತ್ರದ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST