LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಡಾಂಬರು ತಯಾರಿಕಾ ಘಟಕ ತೆರವಿಗೆ ಸಿ.ಎನ್.ಹೊಸೂರು ಗ್ರಾಮಸ್ಥರ ಒತ್ತಾಯ

ಶಿಡ್ಲಘಟ್ಟ ಗ್ರಾಮಾಂತರ: ತಾಲೂಕಿನ ಮುತ್ತೂರು ಗ್ರಾಮದಲ್ಲಿ ನಿರ್ಮಾಣ ಮಾಡಿರುವ, ಡಾಂಬರು ಮಿಶ್ರಣ ಮಾಡುವ ಪ್ಲಾಂಟ್ ನಿಂದ ಹೊರಬರುತ್ತಿರುವ ವಿಷಾನಿಲಸಹಿತವಾದ ಹೊಗೆಯಿಂದ ಗ್ರಾಮಸ್ಥರ ಆರೋಗ್ಯ ಹದಗೆಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು, ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಿ.ಎನ್.ಹೊಸೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹೋಬಳಿಯ ಗಡಿಭಾಗದಲ್ಲಿರುವ, ಸಿ.ಎನ್.ಹೊಸೂರು ಗ್ರಾಮದ ಗಡಿಯಲ್ಲಿ, 8 ತಿಂಗಳ ಹಿಂದೆ ಹಾಟ್ ಮಿಕ್ಸ್ ಪ್ಲಾಂಟ್ (ರಸ್ತೆಗೆ ಹಾಕುವ ಡಾಂಬರು ತಯಾರಿಸುವ ಕಾರ್ಖಾನೆ) ನಿರ್ಮಾಣ ಮಾಡಿದ್ದಾರೆ. ಕಾರ್ಖಾನೆ ತೆರೆಯುವಾಗಲೇ, ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಘಟಕದಿಂದ ಈಶಾನ್ಯ ದಿಕ್ಕಿಗೆ 392 ಮೀಟರ್ ಅಂತರದಲ್ಲಿ ವಸತಿ ನಿವೇಶನಗಳು ಇವೆ. ಪಶ್ಚಿಮ ದಿಕ್ಕಿಗೆ 402 ಮೀಟರ್ ಅಂತರದಲ್ಲಿ, ಸಿ.ಎನ್.ಹೊಸೂರು ಗ್ರಾಮವಿರುತ್ತದೆ. 671 ಮೀಟರ್ ಅಂತರದಲ್ಲಿ ಸರ್ಕಾರಿ ಶಾಲೆ ಇದೆ. 722 ಮೀಟರ್ ಅಂತರದಲ್ಲಿ ಮುತ್ತೂರು ಗ್ರಾಮವಿದೆ, ಆದರೂ ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ, ಆರಂಭ ಮಾಡಿದ್ದಾರೆ. ಡಾಂಬರಿನ ವಾಸನೆ, ಹಾಗೂ ಧೂಳಿನಿಂದಾಗಿ ಗ್ರಾಮದಲ್ಲಿ, ಮಕ್ಕಳು, ವೃದ್ಧರು, ಮಹಿಳೆಯರು, ರೋಗಗಳಿಗೆ ಒಳಗಾಗುತ್ತಿದ್ದಾರೆ. ಯಾವುದೇ ಕ್ರಮ ಕೈಗೊಂಡಿಲ್ಲವೆAದು ಕರ್ನಾಟಕ ದಲಿತ ಜನಸೇನೆ ರಾಜ್ಯಾಧ್ಯಕ್ಷ ಟಿ.ಭರತ್ ಆರೋಪಿಸಿದರು.
ಗ್ರಾಮದ ಮುಖಂಡ ಪುನೀತ್ ಮಾತನಾಡಿ, ಈ ಘಟಕದಿಂದ ಹೊರಬರುತ್ತಿರುವ ರಾಸಾಯನಿಕ ವಿಷಾನಿಲ ಸಹಿತವಾದ ಹೊಗೆಯಿಂದ, ನಮ್ಮ ಗ್ರಾಮದಲ್ಲಿನ ಜನರಿಗೆ ಕೆಮ್ಮು, ಕಫ, ಮುಂತಾದ ಕಾಯಿಲೆಗಳು ಆವರಿಸಿಕೊಳ್ಳುತ್ತಿವೆ. ಡಯಾಲಿಸಿಸ್ ರೋಗಿಗಳು ಕೂಡಾ, ತುಂಬಾ ಸಂಕಷ್ಟಕ್ಕೆ ಒಳಗಾಗುತ್ತಿದ್ದರೂ, ಅಧಿಕಾರಿಗಳು ಯಾಕೆ ಕಣ್ಣು ಮುಚ್ಚಿ ಕುಳಿತಿದ್ದಾರೆಂಬುದು ಅರ್ಥವಾಗ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡ ವೇಣು ಮಾತನಾಡಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಘಟಕಕ್ಕೆ ಹೊಂದಿಕೊAಡAತೆ ಕೃಷಿ ಜಮೀನುಗಳು ಇವೆ. ಘಟಕದಿಂದ ಹೊರಸೂಸುವ, ಅನಿಲ ರೂಪದ ಎಸ್‌ಓಟೂ, ಎನ್‌ಓಎಕ್ಸ್, ಸಿಓ, ಸಿಓಟೂ, ವಿಓಸಿ ಮುಂತಾದ ಮಾಲಿನ್ಯಕಾರಗಳು ಬಿಡುಗಡೆಯಾಗುವುದರಿಂದ ಕೃಷಿ ಜಮೀನುಗಳಿಗೆ, ಗ್ರಾಮದ ನಿವಾಸಿಗಳಿಗೆ ತೊಂದರೆಯಾಗಬಹುದು, ಸದರಿ ಘಟಕದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕಚೇರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ, ಇದುವರೆಗೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಸಿ.ಎನ್.ಹೊಸೂರು ಗ್ರಾಮದ ಮುಖಂಡರಾದ ವೇಣು, ಪುನೀತ್, ಮುನಿಕೃಷ್ಣಪ್ಪ, ಮಧು, ರವಿ, ರಮೇಶ್, ವೆಂಕಟೇಶ್, ಶಿವಕುಮಾರ್, ಗಜೇಂದ್ರ, ರಾಮಾಂಜಿ, ಅರವಿಂದ್ ರೆಡ್ಡಿ, ಬಾಲಕೃಷ್ಣ, ಮಹೇಶ್, ಡಿ.ಮುನಿ ಕೃಷ್ಣಪ್ಪ, ಮಂಜುನಾಥ್, ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು