ಸಾಮಾನ್ಯವಾಗಿ ಎಲ್ಲಾದರೂ ಪ್ರತಿಭಟನೆ ಅಂದರೆ ಅದರಿಂದ ಅಂತರ ಕಾಯುವವರೇ ಹೆಚ್ಚು. ಆದರೆ ಪ್ರತಿಭಟನೆ ನಡೆಯುತ್ತಿರುವ ದೇಶಕ್ಕೆ ಅದೇ ಸಮಯದಲ್ಲೇ ಪ್ರವಾಸಕ್ಕೆ ಹೋದರೆ ಪರಿಸ್ಥಿತಿ ಹೇಗಿರಬಹುದು?, ಅಂಥ ಅನುಭವ ಆಗಿರುವುದು ಕನ್ನಡದ ಯುವ ನಟ ದುಷ್ಯಂತ್ ಅವರಿಗೆ. ಅದು ಕೂಡ ಹನಿಮೂನ್ ಗೆಂದು ಪ್ಯಾರಿಸ್ ಗೆ ಹೋದ ಸಂದರ್ಭ ಇಂಥ ಘಟನೆ ನಡೆದಿದೆ.ಗತ ವೈಭವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದವರು ದುಷ್ಯಂತ್. ಸಿಂಪಲ್ ಸುನಿ ನಿರ್ದೇಶನದ ಚಿತ್ರದಲ್ಲಿ ನಾಯಕನಾಗಿ ನಾಲ್ಕು ಗೆಟಪ್ ಗಳಲ್ಲಿ ಕಾಣಿಸಿಕೊಂಡು ಅಚ್ಚರಿಯ ಅಭಿನಯ ನೀಡಿದ್ದರು. ವಿಮರ್ಶಕರ ಮೆಚ್ಚುಗೆ, ಪ್ರಶಸ್ತಿ ಪಡೆದ ದುಷ್ಯಂತ್ ಅಭಿನಯಕ್ಕೆ ಒಟಿಟಿ ಮೂಲಕ ಇಂದಿಗೂ ಪ್ರಶಂಸೆ ಪಡೆಯುತ್ತಲೇ ಇದ್ದಾರೆ.ಎರಡನೇ ಸಿನೆಮಾಗೂ ಮೊದಲು ಏಳು ಹೆಜ್ಜೆ ಇಟ್ಟು ಬರಲು ತೀರ್ಮಾನಿಸಿದ ದುಷ್ಯಂತ್ ಅದ್ಧೂರಿಯಾಗಿಯೇ ವಿವಾಹವಾದರು. ನವ ಜೀವನಕ್ಕೆ ಒಂದಷ್ಟು ಕಾಲಾವಕಾಶ ನೀಡಿ ಮತ್ತೊಂದು ಹೊಸ ಚಿತ್ರದೊಂದಿಗೆ ಮರಳುವ ಸಿದ್ಧತೆ ನಡೆಸಿದ್ದಾರೆ. ಆದರೆ ಹನಿಮೂನ್ ಸಮಯದಲ್ಲೇ ಸಿನಿಮೀಯ ಘಟನೆಗಳಿಗೆ ಸಾಕ್ಷಿಯಾಗಿದ್ದಾರೆ.
ದುಷ್ಯಂತ್ ಮಧುಚಂದ್ರಕ್ಕೆAದು ತೆರಳಿದ್ದು ಪ್ಯಾರಿಸ್ ಗೆ. ಆದರೆ ಇವರು ಅಲ್ಲಿರುವಾಗಲೇ ಒಂದು ಅನಿರೀಕ್ಷಿತ ಘಟನೆ ನಡೆದಿದೆ. ಬೆಲೆ ಏರಿಕೆ ಮತ್ತಿತರ ಕಾರಣಗಳಿಗಾಗಿ ಪ್ಯಾರಿಸ್ ನಲ್ಲಿ ಬೃಹತ್ ಪ್ರತಿಭಟನೆ ಆರಂಭಗೊAಡಿದೆ.ನವಜೋಡಿ ಪ್ಯಾರಿಸ್ ಸೇರಿ ಮೂರು ದಿನಗಳಷ್ಟೇ ಆಗಿತ್ತು. ಆಗಲೇ ಮೊಬೈಲ್ ಮೂಲಕ ಪ್ಯಾರಿಸ್‌ನಲ್ಲಿ ಈ ತರಹ ಪ್ರೊಟೆಸ್ಟ್ ಆಗ್ತಿರುವ ಸುದ್ದಿ ದುಷ್ಯಂತ್ ಅವರನ್ನು ತಲುಪಿತ್ತು. ಆದರೆ ನಾವು ಅದಾಗಲೇ ಡಿಸ್ನಿ ಲ್ಯಾಂಡ್ ನಲ್ಲಿದ್ದೆವು. ಅದು ಬೇರೆಯೇ ಒಂದು ಲೋಕದ ಹಾಗೆ ಇತ್ತು. ನಾವು ಮೊದಲೇ ಯೋಜನೆ ಹಾಕಿಕೊಂಡಿದ್ದ ಹಾಗೆಯೇ ಸ್ವಿಟ್ಜರ್‌ಲ್ಯಾಂಡ್, ಇಟಲಿ ಎಂದು ಎಲ್ಲೆಡೆ ಆರಾಮವಾಗಿಯೇ ಸುತ್ತಾಡಿಕೊಂಡು ಬಂದಿದ್ದಾರೆ. ದುಷ್ಯಂತ್ ಮಾತಿನಲ್ಲೇ ಹೇಳಬೇಕಾದರೆ, “ನಾವು ಅಕ್ಟೋಬರ್15 ಮತ್ತು16ಕ್ಕೆಲ್ಲ ಸಿಟಿಸೆಂಟರ್ ಹತ್ತಿರವೇ ರಾತ್ರಿ ತುಂಬಾ ಹೊತ್ತಿನ ತನಕ ಓಡಾಡಿದ್ದೇವೆ.16ರ ಸಂಜೆ ವಿಮಾನವೇರಿ 17ರಂದು ಲ್ಯಾಂಡ್ ಆದ್ವಿ. ಆಮೇಲೆ ಗೊತ್ತಾಯಿತು, ನಾವು ಎಲ್ಲೆಲ್ಲ ಓಡಾಡಿದ್ದೆವೋ ಅಲ್ಲೆಲ್ಲ ದೊಡ್ಡ ಗಲಾಟೆ, ಪ್ರತಿಭಟನೆ ಆಗಿತ್ತು. ದೇವರ ದಯೆ ಅಥವಾ ಅದೃಷ್ಟ ಅಂತಾನೇ ಹೇಳಬಹುದು. ನಾವು ಸೇಫ್ ಆಗಿ ಮರಳಿದ್ದೆವು.”