ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ರಮೇಶ್ ರೆಡ್ಡಿ ಮತ್ತೊಂದು ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ನೂತನ ಚಿತ್ರ `ಪ್ರೊಡಕ್ಷನ್ ನಂಬರ್ 9’ 2027ರ ಜನವರಿಯಲ್ಲಿ ಆರಂಭವಾಗಲಿದೆ.
ನಿರ್ಮಾಪಕ ರಮೇಶ್ ರೆಡ್ಡಿ ಅವರ ಹುಟ್ಟುಹಬ್ಬ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸುದ್ದಿ ಅಧಿಕೃತವಾಗಿ ಪ್ರಕಟವಾಗಿದೆ.`ಪ್ರೊಡಕ್ಷನ್ ನಂಬರ್ 9’ ಕುರಿತಾದ ವಿಶೇಷ ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಘೋಷಣೆಯ ಜೊತೆಗೆ ಹೊರಬಂದಿರುವ ಈ ಟೀಸರ್ ನಿರೀಕ್ಷೆಯನ್ನು ಹೆಚ್ಚಿಸಿದೆ.ರಾಷ್ಟ್ರ ಪ್ರಶಸ್ತಿ ವಿಜೇತ `ನಾತಿಚರಾಮಿ’,`ಗಾಳಿಪಟ 2’ `45’ ಚಿತ್ರವನ್ನು ನಿರ್ಮಿಸಿರುವುದು ಇವರೇ...ಚಿತ್ರದ ನಿರ್ದೇಶಕರ ಹಾಗೂ ನಾಯಕ-ನಾಯಕಿ ಸೇರಿದಂತೆ ತಾರಾಬಳಗದ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.