LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಜಾನಪದ ಕಲೆಗಳು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಜೀವಂತ: ಡಿಂಡಿಮ ಶಂಕರ್

ಕೆ.ಆರ್.ನಗರ: ಗ್ರಾಮೀಣ ಜಾನಪದ ಕಲೆಗಳು ಇಂದಿಗೂ ಜೀವಂತ ನಮ್ಮ ಹಿರಿಯರು ಗ್ರಾಮದಲ್ಲಿ ಆಚರಿಸುತ್ತಿದ್ದ ಗ್ರಾಮೀಣ ತಗಲುಗೊಂಬೆ ಪ್ರದರ್ಶನ ಇಂದಿಗೂ ಜೀವಂತವಾಗಿದ್ದು ಜಾನಪದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರ ಮತ್ತು ಕನ್ನಡ ಸಾಹಿತ್ಯಾಭಿಮಾನಿಗಳು ಮಾಡಬೇಕು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿಂಡಿಮ ಶಂಕರ್ ಹೇಳಿದರು.
ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ 115ನೇ ಸಂಸ್ಥಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮತನಾಡಿದ್ದ ಅವರು ಕನ್ನಡ ನಾಡು-ನುಡಿಯ ಸಂಸ್ಕೃತಿಯನ್ನು ಇಡೀ ವಿಶ್ವವೇ ಗೌರವಿಸುತ್ತಿರುವುದು ಬಹಳ ಸಂತೋಷ ಆದರೆ ಗ್ರಾಮೀಣ ಭಾಗದ ಜಾನಪದ ಕಲೆಗಳಲ್ಲಿ ತೊಗಲು ಗೊಂಬೆ ಪ್ರದರ್ಶನ ನಸಿಸುತ್ತಿರುವುದು ತುಂಬಾ ಬೇಸರವಾಗಿದ್ದು ಕಲೆಯನ್ನೆ ನಂಬಿರುವ ಕುಟುಂಬಗಳ ಬಗ್ಗೆ ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಆಸಕ್ತಿವಹಿಸುವಲ್ಲಿ ನಿರ್ಲಕ್ಷ್ಯದಿಂದಾಗಿ ಆ ಕಲೆಯನ್ನೇ ನಂಬಿರುವ ಕಲಾವಿಧರ ಬದುಕು ಕೇಳುವವರು ಯಾರು ಇಲ್ಲದಂತಾಗಿದೆ ಎಂದರು ವಿಷಾದ ವ್ಯಕ್ತಪಡಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯುರ ಹೆಸರಿನಲ್ಲಿ ನಿರ್ಮಾಣಗೊಂಡ ಕೃಷ್ಣರಾಜನಗರ ತಾಲೂಕಿನ ಸಾತಿಗ್ರಾಮದ ಸಂಜೀವಯ್ಯನವರ ಕುಟುಂಬ ಅಂದಿನಿAದ ಇಂದಿನವರೆಗೆ ಸುಮಾರು 80 ವರ್ಷಗಳಿಂದ ಗ್ರಾಮೀಣ ಭಾಗದ ಜಾನಪದ ಕಲೆಯಾದ ತೊಗಲುಗೊಂಬೆ ಪರಂಪರೆಯನ್ನು ನಡೆಸಿಕೊಂಡು ಬರುತ್ತಿರುವ ಪುತ್ರ ನಾಗೇಂದ್ರ ಪತ್ನಿ ಕಾಮಕ್ಷಿ ಸೇವೆ ಇಂದಿಗೂ ನಡೆಸಿಕೊಂಡು ಬರುತ್ತಿರುವುದು ನಮ್ಮ ಮೈಸೂರು ಸಾಂಸ್ಕೃತಿಕ ನಗರಿಗೆ ಹೆಸರಿಗೆ ಸಾಕ್ಷಿಯಾಗಿದೆ ಎಂದರು. ಶಾಸಕ ಡಿ.ರವಿಶಂಕರ್ ಕಾರ್ಯಕ್ರಮದಲ್ಲಿ ಆಗಮಿಸಿ ನಾಲ್ವಡಿ ಕೃಷ್ಣರಾಜ ಒಡೆಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಇಂತಹ ಗ್ರಾಮೀಣ ಭಾಗದ ಜಾನಪದ ಕಲಾವಿದರ ಪ್ರೋತ್ಸಾಹಕ್ಕೆ ಮಾಸಹಾಸನ ಮತ್ತು ಅವರ ಬೇಡಿಕೆಗಳನ್ನು ಪರಿಹರಿಸುವಲ್ಲಿ ಪ್ರಮಾಣಿಕವಾಗಿ ಸಹಕರಿಸುತ್ತೇನೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆ ಮತ್ತು ಕಲೆಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ತಾಲೂಕಿನಲ್ಲಿ ಆಯೋಜನೆ ಮಾಡುತ್ತೇನೆ ಎಂದರು. ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ತಂತ್ರಜ್ಞಾನದಲ್ಲಿ ಮೊಬೈಲ್ ಜಗತ್ತಿನಲ್ಲಿ ಮುಳುಗಿದ್ದು, ಗ್ರಾಮೀಣ ಜಾನಪದ ಕಲೆಗಳನ್ನು ಮರೆತ್ತಿರುವ ಮುಂದಿನ ಪೀಳಿಗೆಗೆ ನಮ್ಮ ಪೂರ್ವಿಕರ ಗ್ರಾಮೀಣ ಸೊಗಡಿನ ಕ್ರೀಡೆ, ಗೀತಗಾಯನ, ಕಲೆ ಮತ್ತು ಸಂಸ್ಕೃತಿಯನ್ನು ತೊರಿಸಲು ಮತ್ತೆ ಸಾಧ್ಯವಾಗಲಿದೆಯೇ ಎಂಬ ಪ್ರಶ್ನೆಮಾಡುವ ಈ ಯುಗದಲ್ಲಿ ಮರಳಿ ಮನೆಗೆ ಎಂಬಂತೆ ಇಂದಿನ ಪೀಳಿಗೆಗೆ ಇದರ ಅವಶ್ಯಕತೆ ಇದೆ ಎಂದರು. ಇಂತಹ ಗ್ರಾಮೀಣಾ ಜಾನಪದ ನಾಟಕ, ಕ್ರೀಡೆ ಮತ್ತು ಕಲೆಗಳನ್ನು ಪ್ರೋತ್ಸಾಹಿಸುವಂತಹ ಕೆಲಸ ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದ್ದು ಇದಕ್ಕೆ ನಮಗೆ ಸಹಕಾರ ನೀಡುತ್ತಿರುವ ಜನಪ್ರತಿನಿಧಿಗಳು ಮತ್ತು ಸಮಾಜ ಸೇವಕರ ಸಹಕಾರ ಅಗತ್ಯವಾಗಿದ್ದು, ನಮ್ಮ ತಾಲೂಕಿನ ಸಾತಿಗ್ರಾಮದ ಶ್ರೀ ಮಧುಗಿರಿ ಮಾರಮ್ಮ ತೊಗಲು ಗೊಂಬೆ ನಾಟಕ ಮಂಡಳಿ, ಸಾತಿಗ್ರಾಮದ ಸಂಜೀವಯ್ಯನವರ ಕುಟುಂಬ ಪ್ರಚೀನ ಕಲೆಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವುದು ತುಂಬಾ ಶ್ಲಾಘನೀಯವಾಗಿದೆ ಎಂದು ಮಾಜಿ ಪುರಸಭಾ ಸದಸ್ಯ ಹಾಗೂ ಸಮಾಜ ಸೇವಕರಾದ ಜಿ.ಜಿ.ಪಾಲೇಸಿನ ಮಾಲೀಕರಾದ ಜಿ.ಶೇಷಾದ್ರಿ ಹೇಳಿದರಲ್ಲದೆ ಗ್ರಾಮೀಣ ಜಾನಪದ ಕಲೆಯಾದ ತೊಗಲುಗೊಂಬೆ ಪ್ರದರ್ಶನವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಪ್ರದರ್ಶನ ಮಾಡಿರುವ ನಮ್ಮೂರಿನ ಜಾನಪದ ಕಲೆಯನ್ನು ಪ್ರೋತ್ಸಾಹಿಸುವ ಕೆಲಸ ಎಲ್ಲರೂ ಮಾಡಬೇಕಾಗಿ ಕೋರಿದರು. ಕಲೆ ಮತ್ತು ಸಾಹಿತ್ಯ : ಜನತೆಗೆ ಮನರಂಜನೆ ಮುಖ್ಯ ಜೊತೆಗೆ ಆರೋಗ್ಯ ರಕ್ಷಣೆಗೆ ಗ್ರಾಮೀಣ ಭಾಗದ ಜಾನಪದ ತೊಗಲುಗೊಂಬೆ ಪ್ರದರ್ಶನದಿಂದ ನಮ್ಮ ಜೀವನದ ಮೌಲ್ಯವನ್ನು ಆಡಿಸುವ ಕೈಚಳಕ ಆ ಕಲಾವಿದರ ಕೈಯಲ್ಲಿದೆ ಇದು ಇಂದಿನ ಮಕ್ಕಳಿಗೆ ತಿಳಿಸುವ ಕೆಲಸ ನಮ್ಮಂತಹ ಹಿರಿಯರು ಮಾರ್ಗದರ್ಶನ ನೀಡಬೇಕೆಂದು ವೈದ್ಯಾಧಿಕಾರಿ ಡಾ. ಡಿ.ನಟರಾಜು ಹೇಳಿದರು.
ಇಡೀ ವಿಶ್ವವೇ ಮೆಚ್ಚುವಂತಹ ನಮ್ಮ ಗ್ರಾಮೀಣ ಜಾನಪದ ಕಲೆ ಮತ್ತು ಸಾಹಿತ್ಯ ಇಂದಿಗೂ ನಮ್ಮ ಮೈಸೂರಿನ ಸಾಂಸ್ಕೃತಿಕ ಹಿರಿಮೆಯ ಗರಿಯಾಗಿದ್ದು ಇಡಿ ವಿಶ್ವಮಟ್ಟದಲ್ಲಿ ನಮ್ಮ ಮೈಸೂರು “ದಸರಾ ವೈಭವ ಜಾನಪದ ಕಲೆಗಳ ತವರಾಗಿದೆ” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಘಟಕದ ಅಧ್ಯಕ್ಷರಾದ ದಯಾನಂದ, ನಗರ ಘಟಕದ ಅದ್ಯಕ್ಷರಾದ ಮೋಹನ್ ಕುಮಾರ್, ಕನ್ನಡ ಜಾನಪದ ಪರಿಷತ್‌ನ ತಿಮ್ಮಶೆಟ್ಟಿ, ಸಾಹಿತ್ಯ ಪರಿಷತ್‌ಸ ಸಮಿತಿಯ ಉದಯಕುಮಾರ್, ಭಾಸ್ಕರ್, ನಿವೃತ್ತ ಉಪನ್ಯಾಸಕ ಕೃಷ್ಣ, ರಾಮಕೃಷ್ಣ, ಮಹದೇವ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕೆ.ಎನ್.ಪ್ರಸನ್ನಕುಮಾರ್, ಸಂಪತ್ತುಕುಮಾರ್, ಶಿಕ್ಷಕಿ ಭಾರತಿ, ನಾಗರತ್ನ ಮತ್ತು ಕನ್ನಡ ಸಾಹಿತ್ಯಾಭಿಮಾನಿಗಳು ಮತ್ತು ಸಾರ್ವಜನಿಕರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು