LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಬಿಜೆಪಿಯವರ ಮೇಲೆ ಎಚ್ಡಿಕೆ ಒತ್ತಡ?

ಬೆಂಗಳೂರು: ಪ್ರಜ್ವಲ್ ರೇವಣ್ಣರ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಬಿಜೆಪಿ ನಾಯಕರ ಮೇಲೆ ಹೆಚ್.ಡಿ.ಕುಮಾರಸ್ವಾಮಿ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಮೊದಲು ಪ್ರೀತಂಗೌಡ ಹಾಗೂ ದೇವರಾಜೇಗೌಡರನ್ನು ಕರೆಸಿ ವಿಚಾರಣೆ ಮಾಡಿರಿ ಎಂದು ಕೇಳಿರುವ ಅವರು ವಿಡಿಯೋ ವೈರಲ್ ಆಗಿದ್ಹೇಗೆ? ಎಂಬುದನ್ನು ಅರಿತು ಮಾಹಿತಿ ಪಡೆಯುವಂತೆ ಕೋರಿದ್ದಾರೆ ಎನ್ನಲಾಗಿದೆ.

ಹಾಸನದಲ್ಲಿ ತೀವ್ರ ಸಂಚಲನ ಸೃಷ್ಠಿಸಿರುವ ಸಂಸದ ಪ್ರಜ್ವಲ್ ರೇವಣ್ಣರ ವಿಡಿಯೋ ಪ್ರಕರಣ ಇಡೀ ರಾಜ್ಯಕ್ಕೆ ರಾಜ್ಯವೇ ವಿಡಿಯೋ ವಿಚಾರದಲ್ಲಿ ಚರ್ಚೆ ನಡೆಸುತ್ತಿದೆ. ಕಾಂಗ್ರೆಸ್‍ನ ನಾಯಕರಿಗೆ ಈ ವಿಡಿಯೋ ಅಸ್ತ್ರವಾಗಿದೆ. ಮೊದಲು ಈ ವಿಡಿಯೋ ಬಿಡುಗಡೆಯಾಗಿದ್ದು ಹೇಗೆ? ಅದನ್ನು ತಿಳಿಯಬೇಕು. ಡಿಸೆಂಬರ್ ತಿಂಗಳಲ್ಲಿಯೇ ದೇವರಾಜೇಗೌಡ ಪತ್ರ ಬರೆದಿದ್ದು ನಿಜವೇ? ಪತ್ರ ಬಂದಿದ್ರೆ, ನಮ್ಮ ಗಮನಕ್ಕೆ ಅದನ್ನು ಏಕೆ ತಂದಿರಲಿಲ್ಲ. ಪತ್ರಗಳು ಮಾಧ್ಯಮಗಳ ಕೈ ಸೇರಿದೆ. ಪತ್ರದಲ್ಲಿರುವ ಇಂಚಿಂಚೂ ಮಾಹಿತಿಯೂ ಸತ್ಯಕ್ಕೆ ಹತ್ತಿರವಾಗಿದೆ.

ಖುದ್ದು ಪತ್ರದಲ್ಲಿ ನನ್ನ ಬಳಿ ದಾಖಲಾತಿಗಳು ಇದೆ ಎಂದು ದೇವರಾಜೇಗೌಡ ತಿಳಿಸಿದ್ದಾರೆ. ಹೀಗಾದ್ದಗಲೂ ನೀವು ಅದನ್ನು ಪರಾಮರ್ಶೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.ಕಾರ್ತಿಕ್ ಎಂಬ ಚಾಲಕ ನಾನು ಪೆನ್‍ಡ್ರೈವ್ ಒಂದು ಕಾಪಿಯನ್ನ ದೇವರಾಜೇಗೌಡರಿಗೆ ನೀಡಿದ್ದೇನೆ ಅಂತಾನೆ. ಅವನ ಮಾಧ್ಯಮ ಹೇಳಿಕೆಯನ್ನು ಗಮನಿಸಿದ್ದೇನೆ. ಆತನನ್ನು ಬೇರೆಡೆಗೆ ಕಾಂಗ್ರೆಸ್ ನಾಯಕರೇ ಶಿಫ್ಟ್ ಮಾಡಿದ್ದಾರೆ.

ಮೊದಲು ನೀವು ಪ್ರೀತಂಗೌಡ ಹಾಗೂ ದೇವರಾಜೇಗೌಡರನ್ನು ಕರೆಸಿ ವಿಚಾರಣೆ ಮಾಡಿ. ಬಳಿಕ ಈ ಪ್ರಕರಣದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.ಪೆನ್‍ಡ್ರೈವ್ ವಿಚಾರದಲ್ಲಿ ಖಡಕ್ ಆಗಿ ಬಿಜೆಪಿ ನಾಯಕರನ್ನು ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು