LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಲಕ್ಷಾಂತರ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶ

ದೊಡ್ಡಬಳ್ಳಾಪುರ: ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾ ಚರಣೆ,ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಿಯದರ್ಶಿನಿ ಬಡಾವಣೆಯ ತೂಬಗೆರೆ ಹರೀಶ್ ಎಂಬುವವರ ಗೋಡೌನ್ ಒಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಬರೋಬ್ಬರಿ 21.5 ಟನ್ ಅಕ್ರಮ ಪಡಿತರ ಅಕ್ಕಿ ವಶಪಡೆಸಿ ಕೊಂಡು, ಆರೋಪಿ ಹರೀಶ್ ಎಂಬುವವರನ್ನು ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.
ಇತ್ತೀಚೆಗೆ ರಾಜ್ಯಾದ್ಯಂತ ಪಡಿತರ ಅಕ್ಕಿ ಸಾಗಟ,ಮತ್ತು ದಾಸ್ತಾನು ಮಾಡಿ ರಾಜ್ಯ ಸರ್ಕಾರದ ಅನ್ನ ಭಾಗ್ಯ ಅಕ್ಕಿ ಕನ್ನಹಾಕುತಿದ್ದ ಅನೇಕಪ್ರಕರಣಗಳು ದಿನ ನಿತ್ಯ ಸುದ್ದಿ ಯಾಗುತ್ತಿರುವ ಹಿನ್ನಲೆ ಜನಸಾಮಾನ್ಯರು ಜಾಗೃತರಾಗಿ ಅಕ್ರಮ ಅಕ್ಕಿದಂದೆಗಳನ್ನು ಸೂಕ್ಷ÷್ಮವಾಗಿ ಗಮನಿಸುವುದರೊಂದಿಗೆ ಅವರಿಗೆ ಹತ್ತಿರ ಮತ್ತು ನಂಬಿಕೆಯಿರುವ ಅಧಿಕಾರಿ ಅಥವಾ ಸುದ್ದಿ ಮಾದ್ಯಮ ಸ್ನೇಹಿತರ ಗಮನೆತರುವಂತಹ ಕಾರ್ಯಕ್ಕೆ ಕೈಹಾಕುತ್ತಿರುವುದು ಶ್ಲಾಗನೀಯ.
ಅದರಂತೆ ನೆನ್ನೆ ನಗರ ಹೊರವಲಯದ ಪ್ರಿಯದರ್ಶಿನಿ ಬಡಾವಣೆಯಲ್ಲಿ ಅಕ್ರಮ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿರುವ ಮಾಹಿತಿ ಪಡೆದ ತಹಶಿಲ್ದಾರ್ ಮಲ್ಲಪ್ಪ ನವರು ಮತ್ತು ಪೊಲೀಸ್ ಇನ್ಸಪೆಕ್ಟರ್ ಸಾದಿಕ್ ಪಾಷರವರು ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಆದೇಶ ಪಡೆದ ತಂಡ ಕಾರ್ಯಾಚರಣೆಗೆ ಮುಂದಾದಾಗ ನಿರೀಕ್ಷೆಗೂ ಮೀರಿ ಮೂರು ಕಡೆ ದಸ್ತಾನುಮಾಡಲಾಗಿದ್ದ ಬರೋಬ್ಬರಿ 21.5. ಟನ್ ಅಕ್ಕಿ ಮತ್ತು ಸ್ವಲ್ಪ ಪ್ರಮಾಣದ ರಾಗಿಯನ್ನು ವಶಕ್ಕೆ ಪಡೆಯುದರಲ್ಲಿ ಅಧಿಕಾರಿಗಳು ಯಶಸ್ವಿ ಯಾಗಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದಹಿನ್ನಲೆಯಲ್ಲಿ ಆಹಾರ ಸಚಿವರ ಉಸ್ತುವಾರಿ ಕ್ಷೇತ್ರದಲ್ಲೇ ಈರೀತಿ ಪಡಿತರ ಅಕ್ರಮವಾಗಿ ಅಡ್ಡದಾರಿ ಹಿಡಿದರೇ ರಾಜ್ಯಾದ್ಯಂತ ನಡೆಯುತ್ತಿರುವ ಅಕ್ರಮಗಳ ಬಗ್ಗೆ ದೇವರೇ ಬಲ್ಲ ಎಂದು ತಮ್ಮ ಆಶ್ಚರ್ಯ ವ್ಯಕ್ತಪಡೆಸಿದ್ದಾರೆ.
ಕಾರ್ಯಾಚರಣೆಯ ತಂಡದಲ್ಲಿ ತಾಲ್ಲೂಕು ಆಹಾರ ನಿರೀಕ್ಷಕ ಅನಂತ ಕುಮಾರ್,ಸಹಾಯಕ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೆöÊ ಚಂದ್ರಕಲಾ, ಎಎಸ್ಸೆöÊ ರಂಗಸ್ವಾಮಿ ಸಿಬ್ಬಂದಿ ಶ್ರೀನಿವಾಸ ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು