LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕರ್ನಾಟಕ ರಾಜ್ಯ ರೈತ ಸಂಘ ಮಂಡ್ಯ ಜಿಲ್ಲೆಯಲ್ಲಿ ಪ್ರಬಲವಾಗಿದೆ: ನಂದಿನಿ ಜಯರಾಂ

ಮೇಲುಕೋಟೆ: ಕರ್ನಾಟಕ ರಾಜ್ಯರೈತಸಂಘ ಮಂಡ್ಯ ಜಿಲ್ಲೆಯಲ್ಲಿ ಪ್ರಬಲವಾದ ಸಂಘಟನೆ ಯಾಗಿದ್ದು ಹಲವು ದಶಕಗಳಿಂದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಮುಖಂಡರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ರೈತನಾಯಕಿ ನಂದಿನಿ ಜಯರಾಂ ತಿಳಿಸಿದರು.
ಅವರು ಮೇಲುಕೋಟೆಯ ಸಂಸ್ಕೃತ ಸಂಶೋಧನಾ ಕೇಂದ್ರದಲ್ಲಿ ಶನಿವಾರ ಕರ್ನಾಟಕರಾಜ್ಯರೈತ ಸಂಘ ಹಮ್ಮಿಕೊಂಡಿದ್ದ ರೈತ ಹೋರಾಟಗಾರರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ರೈತ ಚಳುವಳಿಯ ಪ್ರಖ್ಯಾತ ಹೋರಾಟಗಾರರು ಮರೆಯಾಗಿದ್ದಾರೆ. ಬೃಹತ್ ರೈತಚಳುವಳಿಗಳು ಇತಿಹಾಸದ ಪುಟ ಸೇರಿಯಾಗಿದೆ. ಅಂದಿನ ಹಸಿರುಶಾಲುಗಳ ಗತವೈಭವ ಮತ್ತೆ ಮರುಕಳಿಸಬೇಕು ಅನ್ನದಾತನ ಭವಣೆ ಸರ್ಕಾರಕ್ಕೆ ತಲುಪಬೇಕು ಹತ್ತು ಹಲವು ರೈತಸ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕು ಈ ನಿಟ್ಟಿನಲ್ಲಿ ರೈತಸಂಘದ ಮುಖಂಡರು ಕಾರ್ಯಕರ್ತರು ನಿರಂತರವಾಗಿ ಮುಂದಾಗಬೇಕು ಎಂದರು ಶಕ್ತಿಕೇಂದ್ರ ಅನಿಸಿಕೊಂಡಿರುವ ವಿಧಾನ ಸೌಧದಲ್ಲೇ ರೈತರಿಗೆಅನ್ಯಾಯವಾಗುತ್ತಿದೆ ಎಂದು ವಿಷಾಧವ್ಯಕ್ತಪಡಿಸಿದ ನಂದಿನಿಜಯರಾಂ ಇಂದಿಗೂ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ ರೈತರ ಹಲವಾರು ಜ್ವಲಂತ ಸಮಸ್ಯೆಗಳು ಪರಿಹಾರಕಾಣದೆ ಉಳಿದಿವೆ ಯಾವ ಸರ್ಕಾರವೂ ಅನ್ನದಾತನ ಸಮಸ್ಯೆ ಪರಿಹರಿಸಲು ಸಮರ್ಪಕವಾದ ಯೋಜನೆ ರೂಪಿಸಿಲ್ಲ ಇಂದಿನ ಯುವಕರು ಚಿನ್ನದಂತಾ ಗತಕಾಲದ ಚಳುವಳಿಗಳ ಮಾಹಿತಿ ಪಡೆದು ಜಾಗೃತರಾಗಬೇಕು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ರೈತಚಳುವಳಿ ನಿರಂತರವಾಗಿ ನಡೆಯಬೇಕು ರೈತರ ಮನೆಯ ಜೀವಗಳು ಉಳಿಯುವಂತಾಗಬೇಕು ಅವರ ಮನೆಯ ದೀಪ ಆರಬಾರದು ಎಂಬುದು ರೈತಸಂಘದ ಆಶಯವಾಗಿದೆ ಎಂದರು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಮಾತನಾಡಿ, ಜಿಲ್ಲೆಯಹಲವಾರು ಮುಖಂಡರು ಮನೆಯಹಿತವನ್ನು ಬದಿಗಿಟ್ಟು ದಶಕಗಳಕಾಲದಿಂದ ರೈತಪರ ಹೋರಾಟದಲ್ಲಿ ಭಾಗಿಯಾಗಿದ್ದೀರಿ ನಾನು ತಂದೆಯವರ ಕಾಲದಲ್ಲಿ ಹೋರಾಟವನ್ನು ನೋಡಿದ್ದೆ ಯಾವುದೇ ಚಳುವಳಿಯಲ್ಲಿ ಭಾಗವಹಿಸಿಲ್ಲ ಆದರೆ ಹೋರಾಟಗಾರರ ಬದಕು ಬವಣೆಯನ್ನು ತಿಳಿದಿದ್ದೇನೆ ಈ ಕಾರಣ ಮಂಡ್ಯಜಿಲ್ಲೆಯ ಎಲ್ಲಾ ತಾಲ್ಲೂಕುಗಳ 100ಕ್ಕೂಹೆಚ್ಚು ರೈತಹೋರಾಟಗಾರರನ್ನು ಗುರುತಿಸಿ ಗೌರವಿಸುವ ಕಾರ್ಯಮಾಡಲಾಗುತ್ತಿದೆ. ರೈತಸಂಘ ಸಕ್ರಿಯವಾಗಿ, ಹೋರಾಟಗಳು ನಿರಂತರವಾಗಿದ್ದರೆ ರೈತನಿಗೆ ಸರ್ಕಾರದ ಸೌಲಭ್ಯಗಳು ತಲುಪುತ್ತವೆ ಹೋರಾಟದ ಜೊತೆಗೆ ರೈತಸಂಘ ರೈತರಲ್ಲಿ ಅರಿವುಮೂಡಿಸುವ ಕಾರ್ಯ ಕ್ರಮಗಳನ್ನುಹೆಚ್ಚಾಗಿ ಹಮ್ಮಿಕೊಳ್ಳಬೇಕಾಗಿದೆ ನಾನು ರೈತಸಂಘದ ಜೊತೆಗಿರುತ್ತೇನೆ ಎಲ್ಲಾ ರೀತಿಯ ಸಹಕಾರಗಳನ್ನೂ ನೀಡಲು ಸದಾಸಿದ್ಧವಾಗಿದ್ದೇನೆ ರೈತಸಂಘ ರೈತಪರ ಕೆಲಸವನ್ನು ಹೆಚ್ಚಾಗಿ ಮಾಡಬೇಕು ಎಂದರು ಸಮಾರಂಭದಲ್ಲಿ ರಾಜ್ಯರೈತಸಂಘದ ಅಧ್ಯಕ್ಷ ಬಡಗಲಪುರನಾಗೇಂದ್ರ ಮಂಡ್ಯಜಿಲ್ಲಾಧ್ಯಕ್ಷ ಎ.ಎಲ್ ಕೆಂಪೂಗೌಡ ಪಾಂಡವಪುರ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಹಿರಿಯ ರೈತಮುಖಂಡ ನಾಗಣ್ಣ, ರೈತಸಂಘದ ಮುಖಂಡರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು