LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

KSRTC ಬಸ್​ ಚಾಲನೆ ವೇಳೆ ಮೊಬೈಲ್​ ಬಳಕೆ: ಚಾಲಕ ಅರೆಸ್ಟ್​

ಕೊಡಗು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್​ಗಳಲ್ಲಿ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಚಾಕಲನ ಕರ್ತವ್ಯವಾಗಿದೆ. ಚಾಲನೆ ಸಮಯದಲ್ಲಿ ಚಾಲಕ ಮೊಬೈಲ್​ನಲ್ಲಿ ಮಾತನಾಡುವುದು, ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಆದರೂ ಕೂಡ ಪುತ್ತೂರು ಡಿಪೋ ಬಸ್​ ಚಾಲಕ ಮೊಬೈಲ್​ ಬಳಸುತ್ತಾ ಚಾಲನೆ ಮಾಡಿದ್ದಾರೆ.

ಚಾಲಕ ವೇಣುಗೋಪಾಲ್ ಬಸ್​ ಚಾಲನೆ ಮಾಡುತ್ತ ಮೊಬೈಲ್‌ ಬಳಕೆ ಮಾಡುತ್ತಿರುವ ವಿಡಿಯೋವನ್ನು ಪ್ರಯಾಣಿಕರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬಸ್​​​ ಮಡಿಕೇರಿಯಿಂದ ಬಿರುನಾಣಿಗೆ ಹೋಗುತ್ತಿತ್ತು. ಚಾಲಕ ಮೊಬೈಲ್​ ಬಳಕೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೊಬೈಲ್​ ಬಳಕೆ ಮಾಡುತ್ತಿರುವುದನ್ನು ವಿಡಿಯೋ ಮಾಡಿದ ವಿಚಾರಕ್ಕೆ ನಿರ್ವಾಹಕ ರೂಪೇಶ್ ಜೊತೆ ಚಾಲಕ ವೇಣುಗೋಪಾಲ್​​ ಗಲಾಟೆ ಮಾಡಿದ್ದಾನೆ. ಬಳಿಕ, ಚಾಲಕ ವೇಣುಗೋಪಾಲ್ ಡಿಪೋ ಬಳಿ ಕೋವಿ ತಂದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ರೂಪೇಶ್‌ನನ್ನು ಕೊಲೆ‌ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೂಡಲೆ ಸಾರಿಗೆ ಸಂಸ್ಥೆ ಚಾಲಕ ವೇಣುಗೋಪಾಲ್​​ನನ್ನು ಅಮಾನತು ಮಾಡಿದೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. ಪೊಲೀಸರು ಆರೋಪಿ ವೇಣುಗೋಪಾಲ್​ನನ್ನು ಬಂಧಿಸಿದ್ದಾರೆ. ಚಾಲಕ ವೇಣುಗೋಪಾಲ್ ವಿರುದ್ಧ ಈ ಹಿಂದೆಯೂ ಹಲವು ಬಾರಿ ಮೊಬೈಲ್‌ ಬಳಸಿದ್ದ ಆರೋಪ ಕೇಳಿಬಂದಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST