LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಮೇಲುಕೋಟೆಯಲ್ಲಿ ವೈಭವದ ಚಂದ್ರಪ್ರಭಾ ವಾಹನೋತ್ಸವ

ಮೇಲುಕೋಟೆ: ರಾಮಾನುಜರ ಕರ್ಮಭೂಮಿ ಕರ್ನಾಟಕದ ಮೇಲುಕೋಟೆ ಮತ್ತು ಅವತಾರ ಸ್ಥಳ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆಚಾರ್ಯರ 1009 ನೇ ಜಯಂತ್ಯತ್ಸವದ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ.
ತಿರುನಕ್ಷತ್ರಮಹೋತ್ಸವದ ಅಂಗವಾಗಿ ಗುರುವಾರ ಮೇಲುಕೋಟೆಯಲ್ಲಿ ರಾಮಾನು ಜರಿಗೆ ಬುಧವಾರ ಸೂರ್ಯಪ್ರಭಾ ವಾಹನ ಗುರುವಾರ ಚಂದ್ರಪ್ರಭಾವಾಹನೋತ್ಸವ ನಡೆದರೆ ಶ್ರೀಪೆರಂಬೂದರಿನ ಆದಿಕೇಶವಪೆರುಮಾಳ್ ಸನ್ನಿಧಿಯ ರಾಮಾನುಜರಿಗೆ ವ್ಯಾಳಿಯ ವಾಹನೋತ್ಸವ ನೆರವೇರಿತು. ಭಾರತದ ಎಲ್ಲಾ ಶ್ರೀವೈಷ್ಣವ ದೇವಾಲಯ ಗಳಲ್ಲಿ ರಾಮಾನುಜರ ಉತ್ಸವಗಳು ನಡೆದರೂ ಸಹ ಅವರ ಕರ್ಮಭೂಮಿಯಾದ ಮೇಲುಕೋಟೆ ಮತ್ತು ಅವತಾರ ಸ್ಥಳ ಶ್ರೀಪರಂಬೂದೂರಿನಲ್ಲಿ ನಡೆಯುವ ತಿರುನಕ್ಷತ್ರಮಹೋತ್ಸವಕ್ಕೆ ವಿಶೇಷ ಸ್ಥಾನವಿದೆ. ಕಳೆದ 13 ರಿಂದ ಆರಂಭವಾಗಿರುವ 10 ದಿನಗಳ ಕಾರ್ಯಕ್ರಮ 22ರಂದು ರಾಮಾನುಜಾಚಾರ್ಯರ ತಿರುನಕ್ಷತ್ರ ಮಹೋತ್ಸವದೊಂದಿಗೆ ಸಂಪನ್ನವಾಗಲಿದೆ. ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪೇಶುಮ್ ರಾಮಾನುಜರಿಗೆ ಶನಿವಾರ ಬೆಳಿಗ್ಗೆ ತಮಿಳುನಾಡಿನ ಶ್ರೀಪೆರಂಬದೂರಿನ ರಾಮಾನುಜರ ಸನ್ನಿಧಿಯ ಮಾಲೆ ಮರ್ಯಾದೆಗಳು ಸಮರ್ಪಣೆಯಾಗಲಿದೆ. ರಾತ್ರಿ ಗೋವಿಂದರಾಜಮುಡಿ ಕಿರೀಟಧಾರಣಮಹೋತ್ಸವ ವೈಭವದಿಂದ ನಡೆಯಲಿದೆ.
ಚೆಲುವನಾರಾಯಣಸ್ವಾಮಿಗೆ ಕಳೆದ 15 ದಿನಗಳಿಂದ ನಡೆಯುತ್ತಿರುವ ಕೊಡೈತಿರುನಾಳ್ ಉತ್ಸವ ಅಮಾವಾಸ್ಯೆಯ ದಿನವಾದ ಇಂದು ಏ.17ರ ಶುಕ್ರವಾರ ಮುಕ್ತಾಯವಾಗಲಿದ್ದು ರಾತ್ರಿ ವೈಮಾಳಿಗೆ ಕೊಡೈತಿರುನಾಳ್ ನಡೆಯಲಿದೆ. ಚೆಲುವನಾರಾಯಣಸ್ವಾಮಿ ದೇವಾಲಯದ ವೈಮಾಳಿಗೆ ಅಂದರೆ ಮಹಡಿಯಮೇಲೆ ಉತ್ಸವ ನಡೆಯಲಿದ್ದು ಆದಿಶೇಷನಲ್ಲಿ ಕುಳಿತ ಶೈಲಿಯಲ್ಲಿ ಚೆಲುವನಾರಾಯಣಸ್ವಾಮಿ ದರ್ಶನ ನೀಡಲಿದ್ದು ಸರ್ಪನಡಿಗೆಯಲ್ಲಿ ಪಡಿಯೇತ್ತ ನಡೆಯುವುದು ಉತ್ಸವದ ವಿಶೇಷವಾಗಿದೆ ರಾಮಾನುಜಾಚಾರ್ಯರಿಗೆ ಐದನೇ ಉತ್ಸವದ ಅಂಗವಾಗಿ ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿಯ ಉತ್ಸವ ಸಹ ನೆರವೇರಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು