LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಮೃತ ಶಿವಣ್ಣನ ಮನೆಗೆ ಸಚಿವ, ಸಂಸದ, ಶಾಸಕರ ಭೇಟಿ, ಕುಟುಂಬಕ್ಕೆ ಸಾಂತ್ವನ

ತಿ.ನರಸೀಪುರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆಯ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಸಂಸದ ಸುನೀಲ್ ಬೋಸ್ ಹಾಗೂ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಶಿವಣ್ಣರವರ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿ ಸಾಂತ್ವಾನ ಹೇಳಿದರು.ನಗರಾಭಿವೃದ್ಧಿ ಸಚಿವ ಸಚಿವ ಯತಿಂದ್ರ ಸಿದ್ದರಾಮಯ್ಯ ಮಾತನಾಡಿ, ಉಲ್ಲಾಸ್ ಗೌಡನ ತೇಜೊವಧೆಯಿಂದ ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಕಾರಣನಾದ ಉಲ್ಲಾಸ್ ಗೌಡನಿಗೆ ಕಾನೂನು ರೀತಿ ಕ್ರಮ ಜರುಗಿಸಿ ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ.ಶಿವಣ್ಣನವರ ಕುಟುಂಬವನ್ನು ಈ ಸ್ಥಿತಿಗೆ ತಂದ ಆರೋಪಿ ಉಲ್ಲಾಸ್ ಗೌಡನಿಗೆ ಸರಿಯಾಗಿ ರೀತಿ ಕಠಿಣ ಕಾನೂನು ಕ್ರಮ ತೆಗೆದುಕೊಂಡು ಸರಿಯಾದ ಸೆಕ್ಷನ್ ಗಳನ್ನಾಕಿ ನ್ಯಾಯಾಲಯದಲ್ಲಿ ಸರಿಯಾಗಿ ಶಿಕ್ಷೆ ಆಗಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೆ ಅದೇ ರೀತಿ ಪೋಲಿಸಿನವರು ಉಲ್ಲಾಸ್ ಗೌಡನನ್ನು ಬಂಧಿಸಿದ್ದಾರೆ.ಶಿವಣ್ಣನ ಕುಟುಂಬಕ್ಕೆ ಉಲ್ಲಾಸ್ ಗೌಡನ ಕಿರುಕುಳದ ಬಗ್ಗೆ ಪೊಲೀಸರಿಗೆ ಮಾಹಿತಿ ಬಗ್ಗೆ ಮಾಧ್ಯಮದರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಗ್ರಾಮದ ಯಜಮಾನರು ಮತ್ತು ಸಮುದಾಯದ ಯಜಮಾನರು ಕೂತು ಮಾತಾಡಿ ತೀರ್ಮಾನ ಮಾಡಿದ್ದಾರೆ. ಯಜಮಾನರ ಮುಂದೆ ಮತ್ತೆ ಹುಡುಗಿ ತಂಟೆಗೆ ಹೋಗಲ್ಲ, ಕಿರುಕುಳ ನೀಡಲ್ಲ ಎಂದು ಒಪ್ಪಿಗೆ ನೀಡಿ ಹೋಗಿ ಶಿವಣ್ಣನ ಕುಟುಂಬಕ್ಕೆ ತೇಜೊವಧೆ ಮಾಡಿ ಶಿವಣ್ಣನ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾಗಿದ್ದಾನೆ. ಆತ್ಮಹತ್ಯೆಗೆ ಸರ್ಕಾರದಿಂದ ಪರಿಹಾರ ನೀಡುವುದಕ್ಕೆ ಯಾವುದೇ ಪ್ರಾವಿಜನ್ ಇಲ್ಲ. ಕುಟುಂಬಕ್ಕೆ ನಾನು ನನ್ನ ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ ಎಂದು 5 ಲಕ್ಷ ರೂಗಳನ್ನು ನೀಡಿದ್ದಾರೆ.ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಗ್ರಾಮವೆಂದ ಮೇಲೆ ಯಾರು ಹೆಚ್ಚಲ್ಲ, ಮತ್ಯಾರೊ ಕಮ್ಮಿಯಲ್ಲ. ಎಲ್ಲರೂ ಅನ್ಯೂನತೆಯಿಂದ ಇರಬೇಕಿತ್ತು. ಯಾರೋ ಒಬ್ಬ ಕಿಡಿಗೇಡಿ ಮಾಡಿದ ತಪ್ಪಿಗೆ ಮೂವರು ಜೀವವನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಸಮುದಾಯದ ಬಣ್ಣವನ್ನು ಹಚ್ಚುವ ಅಗತ್ಯವಿಲ್ಲ. ಪೊಲೀಸರು ತನಿಕೆಯನ್ನ ಚುರುಕುಗೊಳಿಸಿ ಕಠಿಣ ಕಾನೂನು ಕ್ರಮವನ್ನ ತೆಗೆದುಕೊಳ್ಳಬೇಕು ಎಂದರು.ಸಂಸದ ಸುನೀಲ್ ಬೋಸ್ ಮಾತನಾಡಿ, ಮದುಮಗಳು ಸೇರಿದಂತೆ ಕುಟುಂಬದ ಮೂವರನ್ನ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಡೆದುಕೊಂಡ ಯುವಕನ ವರ್ತನೆ ನಡೆದುಕೊಂಡ ಯುವಕನ ವರ್ತನೆ ಅಕ್ಷಮ್ಯ. ಹಾಗಾಗಿ ಆತನ ಮೇಲೆ ಕಾನೂನು ಕ್ರಮ ಆಗಲೇಬೇಕು ಎಂದರು.ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಮಹದೇವಣ್ಣ, ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಅರುಣ್ ಕುಮಾರ್, ಜಿ.ಪಂ ಮಾಜಿ ಸದಸ್ಯ ಸ್ವಾಮಿ, ತಾ ಪಂ ಮಾಜಿ ಅಧ್ಯಕ್ಷ ತಗಡೂರು ಕೃಷ್ಣ, ಮುಖಂಡರಾದ ಆರ್.ಬಸವರಾಜು, ಬಾಲಕೃಷ್ಣ, ಶಿವಪ್ರಸಾದ್, ಅಭಿಷೇಕ್ ಮಣಿಗಾರ್, ಸಿ.ಟಿ. ಕುಮಾರ್, ಬಿ.ಮರಯ್ಯ ಹಾಗೂ ಇತರರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು