LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಹಾಲು ಡೈರಿಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಬಂಗಾರಪೇಟೆ: ತಾಲೂಕಿನ ಭುವನಹಳ್ಳಿ ಹಾಲು ಡೇರಿಯ ನೂತನ ಅಧ್ಯಕ್ಷರಾಗಿ ಮಾಜಿ ಶಾಸಕ ಸಿ.ವೆಂಕಟೇಶಪ್ಪ ಅವರ ಪುತ್ರ ಬಿ.ವಿ.ಕೃಷ್ಣ ಉಪಾಧ್ಯಕ್ಷರಾಗಿ ಸುಮಿತ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ತಾಲೂಕಿನ ಭುವನಹಳ್ಳಿ ಗ್ರಾಮದಲ್ಲಿ ಕೋಮುಲ್ ನ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪನೆ ಮಾಡಿದ್ದು, ಕಳೆದ 15 ದಿನಗಳ ಹಿಂದೆ ಡೇರಿಯ 12 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಎಲ್ಲಾ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಚುನಾವಣೆಯನ್ನು ನಿಗದಿಪಡಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿ.ವಿ.ಕೃಷ್ಣ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಸುಮಿತ್ರ ಎಂಬುವವರು ನಾಮಪತ್ರಗಳನ್ನು ಸಲ್ಲಿಸಿದ್ದರು. ಬೇರೆ ಯಾರೂ ಸಹ ಈ ಸ್ಥಾನಗಳಿಗೆ ನಾಮಪತ್ರಗಳನ್ನು ಸಲ್ಲಿಸದೇ ಇದ್ದುದರಿಂದ ಭುವನಹಳ್ಳಿ ಹಾಲು ಡೇರಿ ಪ್ರಥಮ ಅಧ್ಯಕ್ಷರಾಗಿ ಬಿ.ವಿ.ಕೃಷ್ಣ ಹಾಗೂ ಸುಮಿತ್ರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಬಾಲಕೃಷ್ಣಪ್ಪ ಘೋಷಣೆ ಮಾಡಿದರು. ಸಹಾಯಕರಾಗಿ ಕಾರಮಂಗಲ ವಿ.ಎಸ್.ಎಸ್.ಎನ್. ಸಿಇಒ ಪ್ರಕಾಶ್ ಕಾರ್ಯನಿರ್ವಹಿಸಿದರು.ಭುವನಹಳ್ಳಿ ಗ್ರಾಮದ ನೂತನ ಡೇರಿ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಬಿ.ವಿ.ಕೃಷ್ಣ ಮಾತನಾಡಿ, ತಾಲೂಕಿನ ಬೂದಿಕೋಟೆ ಹೋಬಳಿಯ ಭುವನಹಳ್ಳಿ ಗ್ರಾಮದಲ್ಲಿ ಇದುವರೆಗೂ ಹಾಲು ಡೇರಿಯು ಇರಲಿಲ್ಲ. ಭುವನಹಳ್ಳಿ ಗ್ರಾಮದಲ್ಲಿ ಹೈನೋದ್ಯಮವಿದ್ದರೂ ಸಹ ಹಾಲು ಡೇರಿ ಸ್ಥಾಪನೆ ಮಾಡಲು ಮುಂದಾಗಲಿಲ್ಲ. ಭುವನಹಳ್ಳಿ ಗ್ರಾಮದಲ್ಲಿ ಸಂಗ್ರಹವಾಗುತ್ತಿದ್ದ ಪಕ್ಕದ ಗ್ರಾಮದ ಹಾಲು ಡೇರಿಗೆ ರೈತರು ಸರಬರಾಜು ಮಾಡುತ್ತಿದ್ದರು. 25 ವರ್ಷಗಳ ಹಿಂದೆಯೇ ಕೋಮುಲ್ ಹಾಲು ಡೇರಿಯನ್ನು ಪ್ರಾರಂಭಿಸಿದ್ದರೇ ಈ ಗ್ರಾಮದ ರೈತರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಶಾಸಕ ಎಸ್.ಎನ್.ನಾರಾಯಣಸ್ವಾಮಿಯವರು ಕೋಮುಲ್ ನಿರ್ದೇಶಕರಾದ ಮೇಲೆ ರ್ಯತರ ಅನುಕೂಲಕ್ಕಾಗಿ ನೂತನವಾಗಿ ಹಾಲು ಡೇರಿಯನ್ನು ಸ್ಥಾಪಿಸಲು ಶ್ರಮಿಸಿದ್ದಾರೆಂದು ಹೇಳಿದರು.ಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳೆದಿರುವ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೇ ನಷ್ಠವಾಗುತ್ತಿರುವ ಹಿನ್ನಲೆಯಲ್ಲಿ ಕನಿಷ್ಠಪಕ್ಷ ಕುಟುಂಬ ಪೋಷಣೆಗೆ ಮುಖ್ಯವಾಗಿ ಹೈನೋಧ್ಯಮವು ಹೆಚ್ಚು ಅನುಕೂಲವಾಗಿದೆ. ಸ್ಥಳೀಯ ಶಾಸಕರೇ ಕೋಮುಲ್ ನಿರ್ದೇಶಕರಾಗಿರುವುದರಿಂದ ಕೋಮುಲ್ ನಿಂದ ರೈತರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮನವಿ ಮಾಡಲಾಗುವುದು. ನೂತನ ಹಾಲು ಡೇರಿಗೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಡೇರಿಗೂ, ಗ್ರಾಮಕ್ಕೂ ಹಾಗೂ ಕೋಮುಲ್ ನಿರ್ದೇಶಕರಿಗೂ ಹೆಸರು ಬರಲಿದೆ. ಈ ಹಿನ್ನಲೆಯಲ್ಲಿ ರೈತರು ಉತ್ತಮ ಗುಣಮಟ್ಟದ ಎಸ್.ಎನ್.ಎಫ್ ಬರುವ ರೀತಿಯಲ್ಲಿ ಹಾಲು ಸರಬರಾಜು ಮಾಡಬೇಕೆಂದು ಕರೆ ನೀಡಿದರು.ಉಪಾಧ್ಯಕ್ಷೆ ಸುಮಿತ್ರ, ನಿರ್ದೇಶಕರಾದ ಎಂ.ನಾರಾಯಣಮೂರ್ತಿ, ಶಂಕರಪ್ಪ, ಮುನಿರಾಜು, ಸೀನಪ್ಪ, ನಾರಾಯಣಪ್ಪ, ಸಿ.ಮುನಿರಾಜು, ಬಿ.ಎನ್.ನಾಗರಾಜ್, ರಾಜಪ್ಪ, ಸರಸ್ವತಮ್ಮ, ಅನುಸೂಯಮ್ಮ, ವಿಸ್ತರಣಾಧಿಕಾರಿ ಎನ್.ಎಸ್.ಭಾನುಪ್ರಕಾಶ್, ಡೇರಿಯ ಮುಖ್ಯಪ್ರವರ್ತಕ ಎ.ಗೋವಿಂದಪ್ಪ ಇತರರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು