ಚನ್ನಪಟ್ಟಣ: ತಾಲೂಕಿನ ಭಕ್ತರ ಮಹದಾಸೆಯನ್ನು ಪೂರೈಸುವ ಉದ್ದೇಶದಿಂದ ನಿರ್ಮಲಾನಂದನಾಥ ಮಹಾಸ್ವಾಮಿಜೀಯವರು ಮೇ 11 ರಿಂದ ನಿರಂತರ ಒಂದು ವಾರಗಳ ಕಾಲ ತಾಲೂಕಿನಲ್ಲಿ ಪ್ರವಾಸ ನಡೆಸಲಿದ್ದಾರೆ. ಧರ್ಮಜಾಗೃತಿ ಹಾಗೂ ಸಮಾಜದ ಸಂಘಟನೆಗಾಗಿ ಅವರು ನಡೆಸುತ್ತಿರುವ ಯಾತ್ರೆಯನ್ನು ತಾಲೂಕಿನ ಜನತೆ ಯಶಸ್ವಿಗೊಳಿಸಬೇಕು ಎಂದು ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಮನವಿ ಮಾಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ತಾಲೂಕಿನಲ್ಲಿ ನಡೆಸಲಿರುವ ಧರ್ಮಜಾಗೃತಿ ಪ್ರವಾಸದ ಹಿನ್ನೆಲೆಯಲ್ಲಿ ನಗರದ ಮಹದೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀಗಳು ಮಠದ ಪೀಠವನ್ನು ಅಲಂಕರಿಸಿದ ನಂತರ, ಇದುವರೆಗೂ ತಾಲೂಕಿಗೆ ಅಧಿಕೃತವಾದ ಪುರಪ್ರವೇಶವಾಗಿಲ್ಲ. ಈ ಹಿನ್ನೆಲೆಯಲ್ಲಿ ತಾಲೂಕಿನ ಭಕ್ತರು ಹಲವಾರು ವರ್ಷಗಳಿಂದ ಈ ಅಪೇಕ್ಷೆ ಹೊಂದಿದ್ದರು. ಇದೀಗ, ಆ ಕಾರ್ಯಕ್ಕೆ ಕಾಲಕೂಡಿ ಬಂದಿದ್ದು, ಶ್ರೀಗಳ ಪ್ರವಾಸ ಕಾರ್ಯಕ್ರಮವನ್ನು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.ಆದಿಚುಂಚನಗಿರಿ ಮಠ ಬೃಹತ್ ಆಲದಮರವಿದ್ದಂತೆ. ಹಿರಿಯ ಶ್ರೀಗಳ ದಾರಿಯಲ್ಲಿ ನಿರ್ಮಲಾನಂದನಾಥರು ಸಾಗುತ್ತಿದ್ದು, ಸಮಾಜ ಕಟ್ಟುವ ಕಾಯಕದಲ್ಲಿ ಬಿಡುವಿಲ್ಲದೇ ದುಡಿಯುತ್ತಿದ್ದಾರೆ. ಪ್ರಸುತ್ತ ನಮ್ಮ ಸಮಾಜದಲ್ಲಿ ಸಾಕಷ್ಟು ಅಂಕುಡೊAಕುಗಳಿವೆ, ಅವುಗಳನ್ನು ತಿದ್ದಲು ಗುರುವಿನ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಏಳು ಮಾರ್ಗದಲ್ಲಿ ಶ್ರೀಗಳು ಪ್ರವಾಸ ನಡೆಸಲಿದ್ದಾರೆ. ಗುರುಗಳು ತಮ್ಮ ಗ್ರಾಮ ಅಥವಾ ಬೀದಿಗೆ ಬಂದಾಗ ಎಲ್ಲರೂ ಒಂದಾಗಿ ಅವರನ್ನು ಸ್ವಾಗತಿಸಬೇಕು. ಇಡೀ ವ್ಯವಸ್ಥೆಯಲ್ಲಿ ಜಾತ್ಯಾತೀತ ಮಠ ಇದೆ ಎಂಬುದಾದರೆ ಅದು ಶ್ರೀ ಮಠ ಮಾತ್ರ ಎಂದರು.ನಗರ ಹೊರತುಪಡಿಸಿ, ತಾಲೂಕಿನ ಬಹುತೇಕ ಗ್ರಾಮಗಳಿಗೆ ಶ್ರೀಗಳು ಭೇಟಿ ನೀಡಲಿದ್ದಾರೆ. ಪಾದಪೂಜೆ ಸೇರಿದಂತೆ ನಿಮ್ಮ ಕೈಯಲ್ಲಿ ಆಗುವ ಸೇವೆಯನ್ನು ನಡೆಸಬಹುದು. ಪ್ರತಿದಿನ ಅಂತಿಮವಾಗಿ ಪ್ರಮುಖ ಕೇಂದ್ರಗಳಲ್ಲಿ ಸತ್ಸಂಗ ಕಾರ್ಯಕ್ರಮ ನಡೆಯಲಿದೆ. ಈ ಪೂರ್ವಭಾವಿ ಸಭೆಗೆ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಸೇರಿರುವುದು ಮಠದ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಮಠದ ಜೊತೆಗೆ ಪ್ರತಿಯೊಬ್ಬರೂ ಸಂಪರ್ಕ ಹಾಗೂ ಒಡನಾಟ ಇಟ್ಟುಕೊಳ್ಳಬೇಕು ಎಂದರು.ಮಾಜಿ ಶಾಸಕ ಎಂ.ಸಿ.ಅಶ್ವಥ್ ಮಾತನಾಡಿ, ನಮ್ಮ ಸಮಾಜದ ಗುರುಗಳು ಒಂದುವಾರಗಳ ಕಾಲ ನಮ್ಮ ತಾಲೂಕಿನ ಪ್ರವಾಸ ನಡೆಸುತ್ತಿರುವುದು ನಮ್ಮ ಸೌಭಾಗ್ಯ. ಈ ಕಾರ್ಯಕ್ರಮವನ್ನು ಯಾವುದೇ ರಾಗ ದ್ವೇಷ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಯಶಸ್ವಿಗೊಳಿಸೋಣ. ನಮ್ಮ ಸಮಾಜ ಒಗ್ಗೂಡುವ ಅವಶ್ಯಕತೆ ಅಪಾರವಾಗಿದೆ. ನಮ್ಮ ಸಮುದಾಯದ ನಾಯಕರಾದ ಎಚ್.ಡಿ.ದೇವೇಗೌಡರು ಸೇರಿದಂತೆ ಹಲವರ ರಾಜಕೀಯ ಅಭಿವೃದ್ಧಿಗೆ ಮಠದ ಕೊಡುಗೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಜನ ಎಚ್ಚೆತ್ತುಕೊಂಡು ಮಠ ಹಾಗೂ ಗುರುಗಳ ಜೊತೆ ಕೈಜೋಡಿಸೋಣ ಎಂದರು.ಕಣ್ವ ಡಯಾಗ್ನೋಷ್ಟಿಕ್ ನ ಡಾ. ವೆಂಕಟಪ್ಪ ಮಾತನಾಡಿ, ಶ್ರೀ ಮಠ ನಮ್ಮ ಸಮುದಾಯದ ದೊಡ್ಡ ಶಕ್ತಿ. ಪ್ರಸುತ್ತ ಕಾಲಘಟ್ಟದಲ್ಲಿ ನಮ್ಮ ಸಮುದಾಯ ಒಗ್ಗೂಡುವ ಅವಶ್ಯಕತೆ ಇದೆ. ಇದರ ನೇತೃತ್ವವನ್ನು ಮಠ ಹೊರಬೇಕು. ಶ್ರೀಗಳ ಪ್ರವಾಸ ನಮ್ಮ ಸೌಭಾಗ್ಯ. ಈ ಪ್ರವಾಸಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ರೈತಸಂಘದ ಹಿರಿಯ ಮುಖಂಡ ಸಿ.ಪುಟ್ಟಸ್ವಾಮಿ, ಜಗತ್ತಿನಲ್ಲಿ ತನ್ನದೇ ಆದ ಸ್ಥಾನಮಾನ ಹೊಂದಿರುವ ಶ್ರೀ ಮಠದ ಕೊಡುಗೆ ಸಮಾಜಕ್ಕೆ ಅಪಾರ. ಧರ್ಮ ಹಾಗೂ ವಿಜ್ಞಾನವನ್ನು ಅಳವಡಿಸಿಕೊಂಡು ಸಾಗುತ್ತಿರುವ ಶ್ರೀಗಳು ನಮ್ಮಗಳ ಅಮೂಲ್ಯವಾದ ಆಸ್ತಿ. ಈ ಹಿನ್ನೆಲೆಯಲ್ಲಿ ಅವರ ಪ್ರವಾಸ ಕಾರ್ಯವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರಿಗೂ ಪುಣ್ಯದ ಕೆಲಸ ಎಂದು ಅಭಿಪ್ರಾಯಪಟ್ಟರು.ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಸAಸ್ಥೆಗಳ ಪದಾಧಿಕಾರಿಗಳು ಹಾಗೂ ಮಠದ ಭಕ್ತರು ಮಾತನಾಡಿ ವಿವಿಧ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನAದಸ್ವಾಮಿ, ಸಾರ್ವಜನಿಕ ವಿದ್ಯಾಸಂಸ್ಥೆ ಅಧ್ಯಕ್ಷ ಟಿ.ಕೆ.ಯೋಗೀಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್, ಜೆಡಿಎಸ್ ತಾಲೂಕು ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ಬಿಜೆಪಿ ತಾಲೂಕು ಅಧ್ಯಕ್ಷ ಎಲೆಕೇರಿ ರವೀಶ್, ಕಾಂಗ್ರೆಸ್ ನಗರಾಧ್ಯಕ್ಷ ಸುನೀಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಚಕ್ಕೆರೆ ವೆಂಕಟರಾಮೇಗೌಡ, ಸಮಾಜದ ಮುಖಂಡರಾದ ರಾಂಪುರ ಧರಣೇಶ್, ಎಂ.ಎ.ಕರುಣ್ ಆನಂದ್, ಹೊ.ಪು.ಸಾಗರ್, ಸಿ.ಚನ್ನಪ್ಪ, ಎಸ್.ಟಿ.ನಾರಾಯಣಗೌಡ, ರಾಧಿಕಾ ರವಿಕುಮಾರ್ ಗೌಡ, ಕುಕ್ಕುರುದೊಡ್ಡಿ ಶಿವಣ್ಣ, ವಿ.ಬಿ.ಚಂದ್ರು, ಸಿ.ಚನ್ನಪ್ಪ, ಎಸ್.ಟಿ.ನಾರಾಯಣಗೌಡ, ಮಹೇಶ್ವರ, ಅನಂತಮೂರ್ತಿ, ನಾಗವಾರ ರಂಗಸ್ವಾಮಿ, ಬೇವೂರು ಯೋಗೀಶ್ ಗೌಡ, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ನಾಗವಾರ ಶಂಭೂಗೌಡ, ಹೊಡಿಕೆ ಹೊಸಹಳ್ಳಿ ಚಂದ್ರಣ್ಣ, ರೈತಸಂಘದ ಅಣಿಗೆರೆ ಕೆ.ಮಲ್ಲಯ್ಯ, ಕೃಷ್ಣಯ್ಯ, ಅಬ್ಬೂರು ವಿಜಿ, ತಿಮ್ಮೇಗೌಡ, ರಾಂಪುರ ಸ್ವಾಮಿ, ತಿಟ್ಟಮಾರನಹಳ್ಳಿ ಮುರುಳಿ,ಸ
ಮಹಿಳಾ ಮುಖಂಡರಾದ ಕೆ.ಟಿ.ಲಕ್ಷ÷್ಮಮ್ಮ, ಮಾಲಿನಿರಮೇಶ್, ಕೋಕಿಲರಾಣಿ, ರೇಖಾಉಮಾಶಂಕರ್, ರಮ್ಯಸ್ವಾಮಿಗೌಡ, ವೀಣಾ, ವಿಜಯಲಕ್ಷ್ಮೀ, ಯಶೋಧಾ, ಪಂಕಜ ಸೇರಿದಂತೆ ಹಲವರು ಇದ್ದರು.