LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಬೆಸ್ಕಾಂ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ದೊಡ್ಡಬಳ್ಳಾಪುರ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅನ್ನು ಖಾಸಗಿಕರಣದ ಹೆಸರಿನಲ್ಲಿ ಟಾಟಾ ಪವರ್ ಕಂಪನಿ ಪಡೆಯಲು ಮುಂದಾಗಿದ್ದು ಇದನ್ನು ದೊಡ್ಡಬಳ್ಳಾಪುರ ಬೆಸ್ಕಾಂ ಸಿಬ್ಬಂದಿ ವರ್ಗ ಖಂಡಿಸಿ ಇಂದು ಪ್ರತಿಭಟನಾ ಸಭೆ ಮಾಡುತ್ತಿದ್ದೇವೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್ ತಿಳಿಸಿದರು.ನಗರದ ಬೆಸ್ಕಾಂ ಕಚೇರಿ ಅವರದಲ್ಲಿ ಇಂದು(ಜೂ. 15)ಖಾಸಗಿಕಾರಣ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು ಬೆಸ್ಕಾಂಹಲವಾರು ವರ್ಷಗಳಿಂದ ಸಾರ್ವಜನಿಕರಿಗೆ ವಿದ್ಯುತ್ ಸರಬರಾಜು ಮಾಡುವ ಸೇವೆ ಮಾಡುತ್ತಿದೆ ಆದರೆ ಇಂದು ಏಕಾಏಕಿ ಖಾಸಗಿ ಕಂಪನಿಗಳು ನಮ್ಮ ವಿದ್ಯುತ್ ಸರಬರಾಜು ಕಂಪನಿಯನ್ನು ಕಸಿದುಕೊಂಡು ಸಂಪೂರ್ಣ ಬ್ಯುಸಿನೆಸ್ ಮಾಡಲು ಹೊರಟಿದ್ದಾರೆ ಸಾರ್ವಜನಿಕ ಸೇವೆಯಾಗಿದ್ದ ವಿದ್ಯುತ್ ಸರಬರಾಜು ಖಾಸಗಿ ಕಂಪನಿಗಳ ಪಾಲಾದರೆ ಸಂಪೂರ್ಣ ವ್ಯವಹಾರಿಕವಾಗಿ ರೈತರಿಗೆ,ಸಾರ್ವಜನಿಕರಿಗೆ ತೊಂದರೆ ಉಂಟಾಗುವುದು ಖಂಡಿತಾ ಎಂದರು.ಬೆಸ್ಕಾಂ ಸಿಬ್ಬಂದಿಗಳಾದ ನಾವು ಇಷ್ಟು ವರ್ಷ ಸಾರ್ವಜನಿಕ ಸೇವೆಯಲ್ಲಿ ಲಾಭ ನಷ್ಟಗಳನ್ನು ಲೆಕ್ಕಿಸದೆ ನಿರಂತರ ಸೇವೆ ಒದಗಿಸುತ್ತಾ ಬಂದಿದ್ದೇವೆ ಆದರೆ ಈ ವಲಯಕ್ಕೂ ಈಗ ಖಾಸಗಿ ಕಂಪನಿಗಳು ಲಗ್ಗೆ ಇಟ್ಟಿವೆ ಒಂದು ವೇಳೆ ನಮ್ಮ ಬೆಸ್ಕಾಂ ಖಾಸಗಿ ಕಂಪನಿಗಳ ಪಾಲಾದರೆ ಕೇವಲ ಹಣ ಗಳಿಸುವ ಉದ್ದೇಶದಿಂದ ಬರುವ ಕಂಪನಿಗಳು ಲಾಭಕ್ಕಾಗಿ ಸಾರ್ವಜನಿಕರನ್ನು ಇಲ್ಲಸಲ್ಲದ ನೆಪಹೇಳಿ ತೊಂದರೆ ಕೊಡುತ್ತವೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.ಸಾರ್ವಜನಿಕರಿಗೆ ಸದಾ ಸ್ನೇಹಿತನಾಗಿ ವಿದ್ಯುತ್ ಸರಬರಾಜು ನೀಡುತ್ತಿರುವ ಬೆಸ್ಕಾಂ ಕಂಪನಿಯು ಖಾಸಗಿಕರಣವಾದರೆ ರೈತರಿಗೆ, ಸಾರ್ವಜನಿಕರಿಗೆ ಉಂಟಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವಂತೆ ಸಿಬ್ಬಂದಿಗಳಿಗೆ ಮನವಿ ಮಾಡಿದರು ಕರುನಾಡು ರಾಷ್ಟ್ರೀಯ ಸೇನೆ ರಾಜ್ಯಾಧ್ಯಕ್ಷ ಬಿ ಶಿವ ಶಂಕರ್ ಮಾತನಾಡಿ ರಾಜಕೀಯ ನಾಯಕರು ವಿಮಾನ, ರಸ್ತೆ, ಆಸ್ಪತ್ರೆ, ಶಾಲೆಗಳು ಹೀಗೆ ಎಲ್ಲಾ ಸಾರ್ವಜನಿಕ ವಲಯಗಳನ್ನು ಖಾಸಗಿಕರಣ ಮಾಡಿ ಲೂಟಿ ಮಾಡಿದರು ಈಗ ಸಾರ್ವಜನಿಕರಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುವ ಮೂಲಕ ಸೇವೆ ಸಲ್ಲಿಸುತ್ತಿರುವ ಬೆಸ್ಕಾಂ ಅನ್ನು ಖಾಸಗಿಕರಣ ಮಾಡಲು ಹೊರಟಿದ್ದಾರೆ. ಜನ ಮನ್ನಣೆ ಪಡೆಡಿರುವ ಇಂತಹ ವಿದ್ಯುತ್ ಸರಬರಾಜು ಕಂಪನಿಯನ್ನು ಟಾಟಾ ಪವರ್ ಎಂಬ ಕಂಪನಿಯು ಪಡೆಯಲು ಮುಂದಾಗಿದ್ದು. ಬೆಸ್ಕಾಂ ನಂತಹ ಸಾರ್ವಜನಿಕ ಸೇವೆ ಒದಗಿ ಸುವ ಕಂಪನಿಗಳು ಖಾಸಗಿ ಕಂಪನಿಯವರ ಸ್ವತ್ತಾದರೆ ಸದಾ ಲಾಭಗಳಿಸುವ ಬಗ್ಗೆ ಚಿಂತನೆ ನಡೆಸುವ ಕಂಪನಿಗಳಿಂದ ಸೇವೆ ಒದಗಿಸುವ ಮಾತೇಲ್ಲಿ. ಹಾಗಾಗಿ ಯಾವುದೇ ಕಾರಣಕ್ಕೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ, ಖಾಸಗಿಕರಣವಾಗಲು ಬಿಡುವುದಿಲ್ಲ ಎಂದರು.ಪ್ರತಿಭಟನೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್, ಸಹಾಯಕ ಕಾರ್ಯನಿರ್ವಾ ಹಕ ಇಂಜಿನಿಯರ್ ಮಂಜುನಾಥ್ (ಗ್ರಾಮೀಣ), ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಯ ಕುಮಾರ್ (ನಗರ ಉಪ ವಿಭಾಗ ), ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ಆನಂದ್, ಸಂಘಟನಾ ಕಾರ್ಯದರ್ಶಿ ಲೋಕೇಶ್ ನಾಯಕ್, ಕೇಂದ್ರ ಕಾರ್ಯ ಸಮಿತಿ ಸದಸ್ಯ ಮುತ್ತುರಾಜ್, ಗುತ್ತಿಗೆದಾರ ಶಿವಶಂಕರ್ ಸೇರಿದಂತೆ ಹಲವು ಪ್ರಮುಖರು, ಬೆಸ್ಕಾಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು