LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಏ22ರಂದು ರಾಮಾನುಜಾಚಾರ್ಯರ 1009ನೇ ತಿರುನಕ್ಷತ್ರ ಮಹೋತ್ಸವ

ಮೇಲುಕೋಟೆ: ಸಮಾನತೆಯ ಹರಿಕಾರ ರಾಮಾನುಜಾಚಾರ್ಯರ 1009ನೇ ತಿರುನಕ್ಷತ್ರ ಮಹೋತ್ಸವ ಅವರದೇ ಕರ್ಮ ಭೂಮಿಯಾದ ಮೇಲುಕೋಟೆಯಲ್ಲಿ ಏಪ್ರಿಲ್ 22ರಂದು ವೈಭವದಿಂದ ನೆರವೇರಲಿದ್ದು ಮಹಾರಥೋತ್ಸವ 21ರಂದು ನಡೆಯಲಿದೆ. ತತ್ಸಂಬಂದದ ಧಾರ್ಮಿಕ ಕಾರ್ಯಕ್ರಮಗಳು ಏ.13ಸೋಮವಾರದಿಂದ ಆರಂಭವಾಗಲಿದೆ
ತಿರುನಕ್ಷತ್ರ ಮಹೋತ್ಸವದ 10 ದಿನಗಳ ಅವಧಿಯಲ್ಲಿ ರಾಮಾನುಜಾಚಾರ್ಯರಿಗೆ ವೈವಿಧ್ಯಮಯ ಅಲಂಕಾರ ನಡೆಯಲಿದ್ದು ಮೊದಲದಿನ ರಾಮಾನುಜಾಚಾರ್ಯರಿಗೆ ಪುಷ್ಪಾಲಂಕೃತ ಸಮರಭೂಪಾಲವಾಹನೋತ್ಸವದೊಂದಿಗೆ ಮಹೋತ್ಸವ ಆರಂಭವಾಗಲಿದೆ ಈ ನಿಮಿತ್ತ ಚೆಲುವ ನಾರಾಯಣಸ್ವಾಮಿ ದೇವಾಲಯದ ಪೂಜಾ ಕೈಂಕರ್ಯಗಳು ಹತ್ತುದಿನಗಳ ಕಾಲವೂ ಬೆಳಗಿನ 5-30ಕ್ಕೆ ಆರಂಭ ವಾಗಲಿದ್ದು ಪ್ರತಿದಿನ ಬೆಳಿಗ್ಗೆ 8ಗಂಟೆಗೆ ವಿವಿದ ವಾಹನೋತ್ಸವಗಳು ದಿವ್ಯಪ್ರಬಂಧ ಪಾರಾಯಣ ಮಂಗಳವಾದ್ಯದೊಡನೆ ಚತುರ್ವೀದಿಗಳಲ್ಲಿ ನಡೆಯಲಿದೆ. ನಂತರ ವಾಹನೋತ್ಸವ ಮಂಟಪದಲ್ಲಿ ತಿರುವಾ ರಾಧನೆ ಮತ್ತು ಗೋಷ್ಟಿನಡೆಯಲಿದೆ. ರಾಮಾನುಜಾಚಾರ್ಯರ ಜಯಂತ್ಯು ತ್ಸವದ ಪ್ರಮುಖ ಕಾರ್ಯಕ್ರಮವಾದ ಮಹಾರಥೋತ್ಸವ ಏ.21ರ ಮಂಗಳವಾರ ನಡೆಯಲಿದ್ದು ಏ.22ರ ಬುಧವಾರ ರಾಮಾನುಜಾರ್ಯರ ತಿರುನಕ್ಷತ್ರಮಹೋತ್ಸವ ನಡೆಯಲಿದೆ. ಹತ್ತು ದಿನಗಳ ತಿರುನಕ್ಷತ್ರಮಹೋತ್ಸವಲ್ಲಿ ಏ 14ರಂದು ಹಂಸವಾಹನ 15ರಂದು ಸೂರ್ಯಮಂಡಲವಾಹನೋತ್ಸವ 16ರಂದು ಚಂದ್ರಮAಡಲವಾಹನೋತ್ಸವ 17ರಂದು ಅಶ್ವವಾಹನೋತ್ಸವ ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ, 18ರ ಶನಿವಾರ ಶ್ರೀಪೆಂಬುದೂರಿನ ಮಾಲೆ ಮರ್ಯಾದೆ ಸಮರ್ಪಣೆ, ರಾತ್ರಿ ಗೋವಿಂದರಾಜಮುಡಿ ಉತ್ಸವ ನಡೆಯಲಿದೆ. ಏ.19ರಂದು ಅಶ್ವವಾಹನೋತ್ಸವ ಏ.20 ಗಜವಾಹನ 21 ರಂದು ಬೆಳಿಗ್ಗೆ ಮಹಾರಥೋತ್ಸವ ನಡೆಯಲಿದೆ 22 ರಂದು ರಾಮಾನುಜರ 1009ನೇ ತಿರುನಕ್ಷತ್ರಮಹೋತ್ಸವ ನಡೆಯಲಿದ್ದು ಮದ್ಯಾಹ್ನ 10ಗಂಟೆಗೆ ದ್ವಾದಶಾರಾಧನೆಯೊಂದಿಗೆ ರಾಮಾನು ಜಾಚಾರ್ಯರಿಗೆ ಅಭಿಷೇಕ ನಡೆಯಲಿದೆ. ಸಂಜೆ ಶ್ರೀಗಂದದ ಅಲಂಕಾರ ರಾತ್ರಿ ಚೆಲುವನಾರಾಯಣಸ್ವಾಮಿಗೆ ದಶಾವತಾರ ಮಹೋತ್ಸವ ವೈಭವದಿಂದ ನಡೆಯಲಿದೆ. ಆಚಾರ್ಯರ ಕರ್ಮಭೂಮಿಯಲ್ಲಿ ಏ. 22ರಂದು ಇಡೀ ದಿನ ರಾಮಾನುಜರ ಜಯಂತ್ಯುತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಮೇಲುಕೋಟೆಗೆ ಬರುವ ಭಕ್ತರು ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯಗಳನ್ನು ಅನುಸರಿಸಿ ದೇವರದರ್ಶನ ಪಡೆದು ಸಹಕರಿಸಬೇಕು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಆನಂದಾಳ್ವಾರ್ ಪರಿಚಾರಕ ಹಾಗೂ ಪಾರುಪತ್ತೇಗಾರ್ ಎಂ.ಎನ್‌ಪಾರ್ಥಸಾರಥಿ ಮನವಿ ಮಾಡಿದ್ದಾರೆ.ರಾಮಾನುಜರ ಉತ್ಸವ: ಸರ್ಕಾರದ ಅನುದಾನ ಇಲ್ಲ ದೇಗುಲದಲ್ಲಿ ಹೆಚ್ಚಿನ ಬಜೆಟ್ ಸಹ ಇಲ್ಲ..!ಭಾರತ ಕಂಡ ಶ್ರೇಷ್ಟ ಸಂತ ಹಾಗೂ ಮಾನವತಾವಾದಿ ರಾಮಾನುಜರ ಜಯಂತ್ಯುತ್ಸವಕ್ಕೆ ಯಾವುದೇ ಸರ್ಕಾರ ಈವರೆಗೆ ಯಾವ ವರ್ಷವೂ ಅನುದಾನ ಬಿಡುಗಡೆಮಾಡಿಲ್ಲ. ಕನಿಷ್ಠ ಆಚಾರ್ಯರ ಕೊಡುಗೆ ಸ್ಮರಿಸುವ ಕಾರ್ಯವನ್ನೂ ಸಹ ಮಾಡಿಲ್ಲ. ಸಮಾನತೆಯ ಹರಿಕಾರ ರಾಮಾನುಜರು ಕರ್ನಾಟಕದ ಮೇಲುಕೋಟೆಯನ್ನು ಕರ್ಮಭೂಮಿಯಾಗಿಸಿಕೊಂಡು, ಹೊಯ್ಸಳದೊರೆ ವಿಷ್ಣುವರ್ಧನನ ಮೂಲಕ ಪಂಚನಾರಾಯಣಸ್ವಾಮಿ ದೇಗುಲಗಳ ನಿರ್ಮಾಣಕ್ಕೆ ಕಾರಣಕರ್ತರಾಗಿ ಹಲವು ಶಿಲ್ಪಕಲಾ ವೈಭವದ ದೇಗುಲಗಳನ್ನು ನಿರ್ಮಿಸಿ ಕರುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಲು ಅಪಾರಕೊಡುಗೆ ನೀಡಿದ್ದಾರೆ. ಶತಶತಮಾನಗಳ ಹಿಂದೆಯೇ ಅಂದಿನ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ದಲಿತರಿಗೆ ಭಾರತದಲ್ಲೇ ಮೊದಲು ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಮುಕ್ತ ಪ್ರವೇಶ ಕಲ್ಪಿಸಿದ್ದರು. ಅವರದೇ ಕರ್ಮಭೂಮಿ ಮೇಲುಕೋಟೆಯಲ್ಲಿ ನಡೆಯುವ ರಾಮಾನುಜಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮಗಳಿಗೆ ಸರ್ಕಾರ ಅಥವ ದೇವಾಲಯದಿಂದ ವಿಶೇಷ ಅನುದಾನ ಇಲ್ಲದಿದ್ದರೂ ಮಹೋತ್ಸವಗಳು ಅರ್ಥಪೂರ್ಣವಾಗಿ ನಡೆಯುತ್ತಾ ಬಂದಿದೆ. ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ ಆನಂದಾಳ್ವಾರ್ ಮತ್ತು ಸಹೋದದರ ಪರಿಶ್ರಮದ ಪಲವಾಗಿ ಹತ್ತು ದಿನಗಳ ಮಹೋತ್ಸವದ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತಾ ಬಂದಿದ್ದು. ಇದರೊಟ್ಟಿಗೆ ವಿವಿಧ ನೇಮಿಸೇವೆಯ ಕೈಂಕರ್ಯಗಳು ಸ್ಥಾನೀಕರ ಬಿಕ್ಷಾಕೈಂಕರ್ಯಸೇವೆಗಳೂ ಸಹ ತಿರುನಕ್ಷತ್ರಮಹೋತ್ಸವ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರಲು ಸಹಕಾರಿಯಾಗಿವೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು