LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಭೂ ಗಳ್ಳರ ಜೊತೆ ಶಾಮೀಲಾಗಿ ಸರ್ಕಾರಿ ಆಸ್ತಿ ಮಾರಾಟ: ಕ್ರಮಕ್ಕೆ ಮನವಿ

ಕೆಜಿಎಫ್: ಕಂದಾಯ ನಿಯಮವನ್ನು ಉಲ್ಲಂಘನೆ ಮಾಡಿ ಗ್ರಾಮೀಣ ಸೇವೆ ಮರೆತು ನಗರದಲ್ಲಿ ವಾಸ್ತವ ಹೂಡಿ ಪ್ರತಿ ರೈತರ ಸೇವೆಗೂ ದಲ್ಲಾಳಿಗಳನ್ನು ನೇಮಕ ಮಾಡಿಕೊಂಡು ಹಣ ವಸೂಲಿ ಮಾಡಿಕೊಂಡು, ರೈತರನ್ನು ನಿರ್ಲಕ್ಷೆ ಮಾಡಿ ಭೂ ಗಳ್ಳರ ಜೊತೆ ಶಾಮೀಲಾಗಿ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿರುವ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು, ಗ್ರಾಮೀಣ ಸೇವೆ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಕಂದಾಯ ಮಂತ್ರಿಗಳನ್ನು ಆಗ್ರಹಿಸಿದರು.ಹತ್ತಾರು ದಶಕಗಳಿಂದ ಭೂಮಿ ಇಲ್ಲದ ರೈತರು ಭೂಮಿಗಾಗಿ ಸರ್ಕಾರ ಬಿಡುಗಡೆ ಮಾಡಿರುವ ನಮೂನೆ 50, 53, 57 ರಲ್ಲಿ ಅರ್ಜಿ ನಮೂನೆ ಸಲ್ಲಿಸಿಕೊಂಡು ಜಾತಕ ಪಕ್ಷಿಗಳಂತೆ ದರಕಾಸ್ತು ಕಮಿಟಿ ಜಾರಿಗೆ ಬರುತ್ತದೆ ನಮ್ಮ ಭೂಮಿಯ ಅಕ್ರಮ ಸಕ್ರಮವಾಗುತ್ತದೆ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಸಾವಿರಾರು ಬಡ ರೈತ ಕೂಲಿ ಕಾರ್ಮಿಕರಿಗೆ ನ್ಯಾಯ ಇಲ್ಲ ಎಂದು ಆರೋಪ ಮಾಡಿದರು ರೈತರ ಜೀವನಾಡಿ ನಿಜವಾದ ರೈತನಾಯಕ ಆಲಂಗೂರು ಶ್ರೀನಿವಾಸ ಅಣ್ಣನವರ ಅವಧಿಯಲ್ಲಿ ನೈಜ್ಯ ಪಾರದರ್ಶಕ ಭೂಮಿ ಇಲ್ಲದ ರೈತರಿಗೆ ಭೂಮಿ ನೀಡಿದ ನಂತರ ಇದುವರೆವಿಗೂ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ ಎಂದು ಆರೋಪ ಮಾಡಿದರು ಅಕಾಲಿಕ ಆಲಿಕಲ್ಲು ಮಳೆಯಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಲು ವಿಶೇಷ ತಂಡ ರಚನೆ ಮಾಡಿ ಪ್ರತಿ ಏಕರೆಗೆ 2ಲಕ್ಷ ಪರಿಹಾರ ವಿತರಣೆ ಮಾಡುವ ಬೇಕೆಂದು ಅಗ್ರಹಿಸಿದರು
ತಾಲ್ಲೂಕಾದ್ಯಕ್ಷ ರಾಮಸಾಗರ ವೇಣು ಮಾತನಾಡಿ ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬ ಗಾದೆಯಂತೆ ಸರ್ಕಾರ ರೈತರಿಗೆ ಅನುಕೂಲವಾಗಲಿ ಎಂದು ಕಂದಾಯ ಸೇವೆ ರೈತರ ಮನೆ ಬಾಗಿಲಿಗೆ ನೀಡುವ ನೂರೊಂದು ಯೋಜನೆ ಆದೇಶ ಮತ್ತು ವಿಧಾನಸೌಧದ 224 ಕೊಠಡಿಗಳಿಗೆ ಸೀಮಿತವಾಗಿದೆ ಎಲ್ಲಾ ಕಡತ ನೀಡಿದರೂ ನೂರೊಂದು ನೆಪ ಹೇಳಿ ರೈತರ ಕಡತಕ್ಕೆ ಮುಕ್ತಿ ನೀಡದೆ ದಲ್ಲಾಳರ ಮುಖಾಂತರ ಬರುವ ಬೆಂಗಳೂರು ಭೂಗಳ್ಳರಿಗೆ ತಾಲ್ಲೂಕು ಕಛೇರಿ ಕೆಲವು ಕಂದಾಯ ಸರ್ವೆ ಅಧಿಕಾರಿಗಳು ಅಡಮಾನ ಇಟ್ಟಿದ್ದಾರೆಂದು ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಕಂದಾಯ ಮಂತ್ರಿಗಳಾದ ಕೃಷ್ಣಬೈರೇಗೌಡರು ಪಿ.ನಂಬರ್ ದುರಸ್ತಿ ಮಾಡಲು ಆದೇಶ ಮಾಡಿ ವರ್ಷ ಕಳೆದಿದೆ. ಆದರೆ ಗಡಿ ಭಾಗದ ಸಾವಿರಾರು ರೈತರ ಎಲ್ಲಾ ಕಡತಗಳ ದಾಖಲೆಗಳು ಸರಿ ಇದ್ದರು, ಕಂದಾಯ ಅಧಿಕಾರಿಗಳು ಪ್ರತಿ ಕಡತಕ್ಕೆ 2 ರಿಂದ 5 ಲಕ್ಷ ಹಣ ನಿಗದಿ ಮಾಡಿ ಹಣ ನೀಡಿದರೆ, ಕಡತವೇ ಬೇಕಾಗಿಲ್ಲ ನೇರವಾಗಿ ಪಿ.ನಂಬರ್ ದುರಸ್ತಿ ಮಾಡಿ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಆದರೆ ರಸ್ತೆ ಕೈಗಾರಿಕೆ ಮತ್ತಿತರ ಅಭಿವೃದ್ಧಿಗಳಿಗೆ ಭೂಮಿ ಕಳೆದುಕೊಂಡಿರುವ ಗಡಿಭಾಗದ ರೈತರು ಏನು ಪಾಪ ದ್ರೋಹ ಮಾಡಿದ್ದಾರೋ ಗೊತ್ತಿಲ್ಲ. ಪಿ.ನಂಬರ್ ದುರಸ್ತಿ ಎಂದರೆ ಗಡಿಭಾಗದ ರೈತರನ್ನು ಅಪರಾದಿಗಳಂತೆ ಕಂದಾಯ ಅಧಿಕಾರಿಗಳು ಕಾಣುತ್ತಿದ್ದಾರೆ. ಇದರಿಂದ ಸರ್ಕಾರದಿಂದ ಬರುವ ಪರಿಹಾರದ ಹಣಕ್ಕೂ ಪರದಾಡಬೇಕಾಧ ಪರಿಸ್ಥಿತಿ ಇದ್ದರೂ ಕಂದಾಯ ಅಧಿಕಾರಿಗಳು ರೈತರನ್ನು ಕಡೆಗಣಿಸುತ್ತಿದ್ದಾರೆಂದು ಕಿಡಿಕಾರಿದರು.ಒಂದುವಾರದೊಳಗೆ ನೈಜ ಸಾಗುವಳಿ ಚೀಟಿ ಇರುವ ರೈತರಿಗೆ ಪಹಣಿ, ಖಾತೆ ಮಾಡಬೇಕು. ಪಿ.ನಂಬರ್ ದುರಸ್ತಿ ಮಾಡಿ ಗಡಿಭಾಗದ ರೈತರ ಸಮಸ್ಯೆ ಬಗೆ ಹರಿಸಬೇಕು. ಹಾಗೂ ಗ್ರಾಮೀಣ ಸೇವೆ ಮರೆತು ನಗರಕ್ಕೆ ಹೊಂದಿಕೊಂಡಿರುವ ಕಂದಾಯ ಸರ್ವೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ರೈತರ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಮನವಿ ನೀಡಿ ಒತ್ತಾಯಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಉಪತಹಸೀಲ್ದಾರ್ ಮಂಜುನಾಥ ರವರು ತಹಸೀಲ್ದಾರ್ ರವರ ಗಮನಕ್ಕೆ ತಂದು ಎಲ್ಲಾ ಕಂದಾಯ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು