LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕರ್ನಾಟಕ ರಾಜ್ಯ ಭೋವಿ ವಡ್ಡರ ಸಂಘ ಪದಾಧಿಕಾರಿಗಳ ಆಯ್ಕೆ

ಬಂಗಾರಪೇಟೆ: ರಾಜ್ಯದಲ್ಲಿ ಬೋವಿ ಸಮುದಾಯವು ಪ್ರತಿಷ್ಠಿತ ಸಮಾಜವಾಗಿದ್ದು, ಇಡೀ ರಾಜ್ಯದಲ್ಲಿಯೇ ಏಕೈಕ ಸಂಸದರಾಗಿರುವ ಎಂ.ಮಲ್ಲೇಶಬಾಬು ಅವರನ್ನು ಕಡೆಗಣಿಸಿ ಅವರ ವಿರುದ್ದವೇ ಸಮುದಾಯವನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿ ಮತ್ತೊಂದು ಗುಂಪಾಗಿ ಹೊರಹೊಮ್ಮಿರುವುದು ಇಡೀ ಸಮುದಾಯಕ್ಕೆ ಮಾಡಿರುವ ದ್ರೋಹವಾಗಿದೆ ಎಂದು ಕರ್ನಾಟಕ ರಾಜ್ಯ ಬೋವಿ ವಡ್ಡರ ಸಂಘದ ಜಂಟಿ ಕಾರ್ಯದರ್ಶಿ ಎಂ.ರಾಮಚAದ್ರಪ್ಪ ಹೇಳಿದರು.
ತಾಲೂಕಿನ ಕಾರಹಳ್ಳಿ ಹೊರಲವಯದಲ್ಲಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಂಸದ ಎಂ.ಮಲ್ಲೇಶಬಾಬು ಅವರ ತಾಯಿ ಜಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿಯವರು ಹಾಲಿ ಅಧ್ಯಕ್ಷರಾಗಿದ್ದಾರೆ. ಇವರನ್ನು ರಾಜಕೀಯ ತೇಜೋವಧೆ ಮಾಡುವ ದುರುದ್ದೇಶದಿಂದ ಬೋವಿ ಸಮುದಾಯವರೇ ಆಗಿರುವ ಕೆಲವು ಮುಖಂಡರು ಜಿಲ್ಲೆಯಲ್ಲಿ ಬೋವಿ ಸಮುದಾಯವನ್ನು ಗುಂಪುಗಾರಿಕೆ ಸೃಷ್ಠಿ ಮಾಡಿ ಸಮುದಾಯಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಬೋವಿ ಸಮುದಾಯವು ಬಲಿಷ್ಠವಾಗದೇ ಸಂಘಟನೆ ಇಲ್ಲದೇ ಕೇವಲ 26 ಮುಖಂಡರು ಸೇರಿಕೊಂಡು ಬಂಗಾರಪೇಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಸಭೆ ನಡೆಸಿ ಸ್ವಯಂಘೋಷಿತ ಪದಾಧಿಕಾರಿಗಳನ್ನು ನೇಮಕ ಮಾಡಿಕೊಂಡಿರುವುದು ಇಡೀ ಬೋವಿ ಸಮುದಾಯಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಜಿಲ್ಲಾ ಕ್ಷೇಮಾಭಿವೃದ್ದಿ ಸಂಘದ ಹೆಸರಿನಲ್ಲಿ ಬೋವಿ ಸಮುದಾಯವನ್ನು ಇಬ್ಬಾಗ ಮಾಡುವುದಕ್ಕೆ ಹೋಗುತ್ತಿರುವುದಕ್ಕೆ ಬ್ರೇಕ್ ಹಾಕಬೇಕಾಗಿದೆ ಎಂದರು.
40 ವರ್ಷಗಳಿಂದ ಜಿಲ್ಲೆಯಲ್ಲಿ ಬೋವಿ ಸಮುದಾಯದ ಹಿರಿಯ ಮುತ್ಸದ್ದಿಗಳು ಕಟ್ಟಿಬೆಳೆಸಿರುವ ಬೋವಿ ಸಂಘವನ್ನು ಪಕ್ಕಕ್ಕೆ ತಳ್ಳಿ ಸಮುದಾಯವರೇ ಆಗಿರುವ ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತೊಂದು ಬೋವಿ ಸಂಘವನ್ನು ಹುಟ್ಟುಹಾಕುತ್ತಿರುವುದು ಎಷ್ಠರಮಟ್ಟಿಗೆ ಸರಿ ಎನ್ನುವುದನ್ನು ಚಿಂತನೆ ನಡೆಸಬೇಕಾಗಿದೆ. ಸಿದ್ದರಾಮೇಶ್ಪರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡುವುದಕ್ಕೆ ಬಿಡದೇ ಕಾಟಾಚಾರಕ್ಕೆ ಮಾಡುವುದರ ಮೂಲಕ ಇಡೀ ಸಮುದಾಯಕ್ಕೆ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ನೇತೃತ್ವದಲ್ಲಿ ಸಮುದಾಯವನ್ನು ಬಲಿಷ್ಠವಾಗಿ ಸಂಘಟನೆ ಮಾಡಲು ಎಲ್ಲರೂ ತಯಾರಾಗಬೇಕೆಂದು ಮನವಿ ಮಾಡಿದರು.
ತಾಲೂಕಿನಲ್ಲಿ ಬೋವಿ ಸಮುದಾಯದ ಸಾವಿರಾರು ಜನರ ಅಭಿಪ್ರಾಯಗಳನ್ನು ಪಡೆದು ಭಾನುವಾರ ಸಭೆಯಲ್ಲಿ ನೂರಾರು ಜನರು ಬಂಗಾರಪೇಟೆ ತಾಲೂಕಿನ ವಿವಿಧ ಮೂಲೆ ಮೂಲೆಗಳಿಂದ ಆಗಮಿಸಿ ಎಲ್ಲರ ಮುಂದೆ ಇಂದು ಪೋಷಕರ ಸಂಘ ಯುವ ವೇದಿಕೆ ನಗರ ಘಟಕ ಸರ್ಕಾರಿ ನೌಕರರ ಸಂಘ ಈ ನಾಲ್ಕು ಸಮಿತಿಗಳನ್ನು ಎಲ್ಲರ ಮುಂದೆ ಅಧ್ಯಕ್ಷರು ಪದಾಧಿಕಾರಿಗಳನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಬೋವಿ ಸಮುದಾಯದ ಪೋಷಕರ ಸಂಘದ ಅಧ್ಯಕ್ಷರಾಗಿ ತಮ್ಮೇನಹಳ್ಳಿ ರಮೇಶ್, ಯುವ ವೇದಿಕೆ ಸಂಘದ ಅಧ್ಯಕ್ಷರಾಗಿ ನಾಯಕರಹಳ್ಳಿ ಹನುಮಂತಯ್ಯ, ನಗರ ಘಟಕ ಅಧ್ಯಕ್ಷರಾಗಿ ವೆಂಕಟಾಚಲಪತಿ, ಗಾಂಧಿನಗರ ಆರ್.ಸಂಜೀವಪ್ಪ, ಸರ್ಕಾರಿ ನೌಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಬೋವಿ ಯುವ ವೇದಿಕೆ ಸಂಘಟಿಕ ಮಾಲೂರು ಎಸ್.ವಿ.ಲೋಕೇಶ್, ನಾಯಕರಹಳ್ಳಿ ಹನುಮಂತಯ್ಯ, ಬೋವಿ ಸಮುದಾಯದ ಹಿರಿಯ ಮುಖಂಡರಾದ ಎಳನೀರು ವೆಂಕಟೇಶ್, ಕಳವಂಚಿ ವೆಂಕಟೇಶ್, ಚಿಕ್ಕಹೊಸಹಳ್ಳಿ ಚೌಡಪ್ಪ, ಬ್ಯಾಂಕ್ ನಾರಾಯಣಪ್ಪ, ರೇಷ್ಮೆ ಇಲಾಖೆಯ ರಾಮಕೃಷ್ಣಪ್ಪ, ತೊಪ್ಪನಹಳ್ಳಿ ಗೋವಿಂದಪ್ಪ, ಭುವನಹಳ್ಳಿ ಗೋವಿಂದಪ್ಪ, ಗಾಂಧೀನಗರ ವೆಂಕಟಾಚಲಪತಿ, ಕಾವರನಹಳ್ಳಿ ಬ್ಯಾಟಪ್ಪ, ಬೋವಿನಗರ ಜಯರಾಮ್, ತಿಪ್ಪಯ್ಯ, ರಾಮು, ರತ್ನಪ್ಪ ಇತರರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು