LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕಲೆ, ಸಂಸ್ಕೃತಿ, ಸಂಗೀತಕ್ಕೆ ಇರುವ ಬೆಲೆ ಹಣಕ್ಕಿಲ್ಲ: ಶಿವರುದ್ರ ಸ್ವಾಮೀಜಿ

ಕನಕಪುರ: ಕಲೆ, ಸಂಸ್ಕೃತಿ ಹಾಗೂ ಸಂಗೀತಕ್ಕೆ ಇರುವ ಬೆಲೆ ಹಣಕ್ಕಿಲ್ಲ ಎಂಬ ಮಾತು ನೂರಕ್ಕೆ ನೂರು ಸತ್ಯ, ಕಲೆ, ಸಂಸ್ಕೃತಿಗೆ ಮನುಷ್ಯನ ಮನಸ್ಸಿಗೆ ಶಾಂತಿ, ನೆಮ್ಮದಿ ಹಾಗೂ ಭಾವನಾತ್ಮಕವಾಗಿ ಶ್ರೀಮತಂಗೊಳಿಸುವ ಶಕ್ತಿ ಇದೆ ಎಂದು ಶ್ರೀಕ್ಷೇತ್ರ ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ನವ್ಯ ನೃತ್ಯ ಅಕಾಡಮಿ ವತಿಯಿಂದ ಜರುಗಿದ ಶ್ರೀ ಲಹರಿಕ ನಾಟ್ಯ ಕಾರ್ಯಕ್ರಮ ಉದ್ಘಾಟಿಸಿ ಆಶಿರ್ವಚನ ನೀಡಿ ಮಾತನಾಡಿದ ಅವರು ಸಂಗೀತ ನೀಡುವ ಆನಂದವನ್ನು ಜಗತ್ತಿನಲ್ಲಿ ಯಾವುದೇ ಸಂಪತ್ತಿನಿAದ ಅಳೆಯಲು ಸಾಧ್ಯವಿಲ್ಲ,ಒತ್ತಡದ ಜೀವನ ದಲ್ಲಿ ಒಂದು ಸುಂದರ ಹಾಡು ಅಥವಾ ಮಧುರವಾದ ವಾದ್ಯ,ಅಥವಾ ಭರತ ನಾಟ್ಯಗಳು ಮನಸ್ಸಿಗೆ ಮುದವನ್ನು ನೀಡುತ್ತವೆ, ಹಣದಿಂದ ಪ್ರಪಂಚದ ಬೇಕಾದ ವಸ್ತುವನ್ನು ಖರೀದಿಸಬಹುದು,ಆದರೆ ಕೆಲ, ಸಂಸ್ಕೃತಿ, ಸಂಗೀತದಿAದ ಸಿಗುವ ಆನಂದ, ನೆಮ್ಮದಿ ಮತ್ತು ಭಾವನಾತ್ಮಕ ಬೆಲೆ ಯನ್ನು ಹಣದಿಂದ ಖರೀದಿಸಲು ಆಗುವುದಿಲ್ಲ ಅಂತಹ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ನವ್ಯ ನರ್ತನ ನೃತ್ಯ ಶಾಲೆಯ ನವ್ಯಶ್ರೀ ಭರತನಾಟ್ಯವನ್ನು ಆಯ್ದುಕೊಂಡಿರುವುದು ಶ್ಲಾಘ ನೀಯವಾಗಿದೆ ಎಂದರು. ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ಸನಾತನ ಧರ್ಮದಿಂದ ತಲೆತಲಾಂತರವಾಗಿ ಬಂದಿರುವ ಕಲೆ, ಸಂಸ್ಕೃತಿ ಹಾಗೂ ಸಂಗೀತ ನಮ್ಮ ನಾಡಿನ ಹೆಮ್ಮೆ.ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ,ಈ ಪರಂಪರೆಯನ್ನು ಜೀವಂತವಾಗಿಡಲು ಪೋಷಕರು ತಮ್ಮ ಮಕ್ಕಳಿಗೆ ಅರಿವು ಮೂಡಿಸುವುದು ಅಗತ್ಯವಾಗಿದ್ದು ಭರತನಾಟ್ಯವು ಭಾರತದ ಅತ್ಯಂತ ಪ್ರಾಚೀನ ಮತ್ತು ಆಕರ್ಷಕವಾದ ಶಾಸ್ತೀಯ ನೃತ್ಯ ಪ್ರಕಾರವಾಗಿದ್ದು ಭರತನಾಟ್ಯ ಕೇವಲ ನೃತ್ಯವಲ್ಲ, ಭಾರತೀಯ ಸಂಸ್ಕೃತಿ, ಆಧ್ಯಾತ್ಮಕತೆ, ಮೌಲ್ಯ ಗಳ ಪ್ರತಿಬಿಂಭವಾಗಿದೆ,ಇAತಹ ನೃತ್ಯಗಳು ನಮ್ಮ ದೇಶದ ಸಂಸ್ಕೃತಿ ಬಗ್ಗೆ ಹೆಮ್ಮೆ ಮತ್ತು ಗೌರವವನ್ನು ಹೆಚ್ಚಿಸಲಿದ್ದು ಪೋಷಕರು ತಮ್ಮ ಮಕ್ಕಳಿಗೆ ಓದಿನ ಜೊತೆಗೆ ಪ್ರಾಚೀನ ಕಲೆಯಾದ ಭರತ ನಾಟ್ಯದ ತರಬೇತಿ ಕೊಡಿಸುವಂತೆ ಸಲಹೆ ನೀಡಿದರು. ಬೆಂಗಳೂರು ಕಬ್ಬನ್ ಪಾರ್ಕ ಎ.ಸಿ.ಪಿ ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಿಗೂ ಭರತನಾಟ್ಯದಂತಹ ಶ್ರೇಷ್ಠ ಕಲೆಯನ್ನು ಪರಿಚಯಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಿ, ಆತ್ಮ ವಿಶ್ವಾಸ ಮೂಡಿಸಿ, ವಕ್ತಿತ್ವ ವಿಕಸನಕ್ಕೆ ಪೂರಕವಾದ ಇಂತಹ ಕಾರ್ಯಕ್ರಮ ಗಳು ನಿರಂತರವಾಗಿ ನಡೆಯಬೇಕಿದೆ,ಮನುಷ್ಯ ತನ್ನ ಜೀವನದಲ್ಲಿ ಅರಿಸ್ಟಾಟಲ್ನ ಮೂರು ಸತ್ಯಾಸತ್ಯತೆ ಯನ್ನು ಅರಿಯಬೇಕು, ಮನುಷ್ಯ ತನ್ನ ನಡುವಳಿಕೆ, ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳ ಮೇಲೆ ಜೀವನ ನಡೆಸಬೇಕು, ಅನಾವಶ್ಯಕವಾಗಿ ಮಾತನಾಡುವುದು, ಸತ್ಯ ವನ್ನ ಹೇಳುವುದು,ಅವಶ್ಯಕತೆ ಇದ್ದರೆ ಮಾತ್ರ ಮಾತನಾಡ ಬೇಕು ಎನ್ನುವ ಉದ್ದೇಶಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡರೆ ಒಳ್ಳೆಯದು, ಸಾರ್ವಜನಿಕರು ಪೋಲಿಸ್ ನವರ ತುರ್ತು ಸೇವೆಗಳಿಗೆ 100 ಬಳಸದೆ 112 ನಂಬರಿಗೆ ಕರೆ ಮಾಡುವಂತೆ ತಿಳಿಸಿದರು. ನೃತ್ಯ ಶಾಲೆಯ 10 ಕ್ಕೂ ಹೆಚ್ಚು ತಂಡಗಳು ಕಂಸಾಳೆ, ಸಿದ್ದಪ್ಪಾಜಿ,ಧರಣಿ ಮಂಡಲ ಮಧ್ಯದೊಳಗೆ, ಶಿವತಾಂಡವ ,ರಾಮಭಜನೆ ಯಂತಹ ಅನೇಕ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ಕಾರ್ಯಕ್ರಮದಲ್ಲಿ ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರನಾಥ ಸ್ವಾಮೀಜಿ ಆಶೀರ್ವಚಿಸಿದರು, ನೃತ್ಯ ನಿರ್ದೇಶಕಿ ಕಾವ್ಯ ದಿಲೀಪ್, ನಾಟಕ ನಿರ್ದೇಶಕ ಜಗದೀಶ್ವರಚಾರ್ಯ, ನೃತ್ಯ ಶಾಲೆಯ ಕೆ.ಎಂ.ನವ್ಯಶ್ರೀ, ಮಾತ ಪಿತೃಗಳಾದ ಕಲ್ಪನಾ, ಮಹದೇವಪ್ರಸಾದ್ ಸೇರಿದಂತೆ ನಗರದ ಸಾರ್ವಜನಿಕರು ಕಲಾಭಿಮಾನಿಗಳು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು