LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

`ಸಾಗುವಳಿ ಚೀಟಿ ವಿತರಿಸುವ ಕಾರ್ಯಕ್ಕೆ ವೇಗ'

ರಾಮನಗರ: ಹಲವು ವಷಗಳಿಂದ ಸಮಸ್ಯೆಯಾಗಿ ಉಳಿದು ಧೂಳು ಹಿಡಿದಿದ್ದ ರೈತರ ಸಾಗುವಳಿ ಅರ್ಜಿಗಳಿಗೆ ಮುಕ್ತಿ ನೀಡಿ ಸಾಗುವಳಿ ಚೀಟಿಗಳನ್ನು ವಿತರಿಸುವ ಕಾರ್ಯಕ್ಕೆ ವೇಗ ನೀಡಿದ್ದೇನೆ ಎಂದು ಶಾಸಕ ಹೆಚ್.ಎ.ಇಕ್ಬಾಲ್‌ಹುಸೇನ್ ಹೇಳಿದರು.ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಗರ್ ಹುಕ್ಕುಂ ಸಾಗುವಳಿ ಸಭೆಯಲ್ಲಿ ಅವರು ಮಾತನಾಡಿದರು. ಸಾಗುವಳಿ ಚೀಟಿ ವಿತರಿಸುವ ಸಂಬAಧ ತಹಸೀಲ್ದಾರ್ ಮತ್ತು ಅಧಿಕಾರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿ, ಸಮಸ್ಯೆಗಳನ್ನು ಹಂತಹAತವಾಗಿ ನಿವಾರಣೆ ಮಾಡಿಕೊಂಡು ಸ್ಥಳ ಪರಿಶೀಲನೆ ನಡೆಸಿ ಸಾಗುವಳಿ ಪತ್ರ ಹಂಚುವ ಹಂತಕ್ಕೆ ಬಂದಿದ್ದೇವೆ. ಈಗಾಗಲೇ ಕೈಲಂಚಾ ಭಾಗದ ಕೆಲವು ಸಾಗುವಳಿ ಪ್ರದೇಶಗಳನ್ನು ಪರಿಶೀಲನೆ ನಡೆಸಿದ್ದು, ನ್ಯಾಯ ಕೊಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.ಈ ಹಿಂದೆ ಬಗರ್ ಹುಕ್ಕುಂ ಸಾಗುವಳಿ ಸಭೆ ಸಕಾಲದಲ್ಲಿ ನಡೆಸದೆ ರಾಜಕಾರಣ ಮಾಡಿದ್ದಾರೆ. ಪರಿಣಾಮ ಕೆಲವು ರೈತರ ಅರ್ಜಿಗಳಿಗೆ ಮುಕ್ತಿ ಸಿಕ್ಕಿಲ್ಲ. ಇನ್ನೂ ಕೆಲವು ರೈತರ ಅರ್ಜಿಗಳು ವಜಾ ಆಗಿವೆ. ಕೆಲವರು ಮರಣ ಹೊಂದಿದ್ದಾರೆ. ಅವರ ಮಕ್ಕಳು ಅನುಭವದಲ್ಲಿದ್ದು ಬೆಳೆ ಬೆಳೆಯುತ್ತಿದ್ದಾರೆ. ಅಂತವರಿಗೆ ನಾನು ಶಾಸಕನಾಗಿದ್ದು ರೈತರ ವಿಷಯದಲ್ಲಿ ಯಾವುದೇ ರಾಜಕಾರಣ ಮಾಡಲ್ಲ. ಈ ಹಿಂದೆ ಕೆಲವು ರೈತರ ಅರ್ಜಿಗಳು ವಜಾಗೊಂಡಿವೆ. ಅಂತಹ ರೈತರು ಉಪ ವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲಿ ಎಂದರು.
ರಾಜಸ್ವ ನಿರೀಕ್ಷಕರುಗಳು ಅರ್ಜಿಗಳ ಲಾಗಿನ್ ಪ್ರಕ್ರಿಯೆಯನ್ನು ಮುಗಿಸಿ, ಬೇಗ ಅಪ್ ಡೇಟ್ ಮಾಡಿದ ನಂತರವಷ್ಟೇ ಸಾಗುವಳಿ ಭೂಮಿ ಪರಿಶೀಲನೆ ನಡೆಸಲು ಸಾಧ್ಯವಾಗಲಿದೆ. ಕಸಬಾ 1, ಕಸಬಾ 2 ಹಾಗೂ ಕೈಲಂಚಾ ವ್ಯಾಪ್ತಿಯಲ್ಲಿ ನಮೂನೆ 50, 53 ಮತ್ತು 57ನಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಲಾಗಿನ್ ಮಾಡಿ ಅನುಭವದಲ್ಲಿರುವ ಭೂಮಿಯ ಸ್ಥಳ ಪರಿಶೀಲನೆ ನಡೆಸಿ ಅರ್ಹ ರೈತರಿಗೆ ಶೀಘ್ರವಾಗಿ ಸಾಗುವಳಿ ಚೀಟಿ ಕೊಡೋಣ. ಇದಕ್ಕೆ ತಹಸೀಲ್ದಾರ್, ಸಮಿತಿ ಸದಸ್ಯರು, ಅಧಿಕಾರಿಗಳು ನನ್ನ ಜೊತೆ ಕೈ ಜೋಡಿಸಿ ಎಂದರು.
ಕಸಬಾ 1 ರಲ್ಲಿ 6 ಸರ್ವೇ ನಂಬರ್ ನಲ್ಲಿ 45 ಅರ್ಜಿಗಳಿದ್ದು ಇದೇ 22ರ ಬುಧವಾರ, ಕಸಬಾ 2 ರಲ್ಲಿ 7 ರ?ವೆ ನಂಬರ್ ಗಳಲ್ಲಿ 21 ಅರ್ಜಿಗಳಿದ್ದು, ಇದೇ 13 ರ ಸೋಮವಾರ ಸ್ಥಳ ಪರಿಶೀಲನೆ ನಡೆಸಲಾಗುವುದು. ಕೈಲಂಚ 1 ರಲ್ಲಿ 17 ಸರ್ವೇ ನಂಬರ್ ಗಳಲ್ಲಿ 97 ಅರ್ಜಿಗಳಿದ್ದು ಮೇ,5,12 ಮತ್ತು 19ರಂದು, ಕೈಲಂಚಾ 2 ರಲ್ಲಿ 4 ಸರ್ವೇ ನಂಬರ್‌ಗಳಲ್ಲಿ 24 ಅರ್ಜಿಗಳಿದ್ದು ಮೇ ಕೊನೆಯ ವಾರ ಪರಿಶೀಲನೆ ನಡೆಸಲಾಗುವುದು. ಕಂದಾಯ ನಿರೀಕ್ಷಕರುಗಳು ಫಲಾನುಭವಿಗಳಿಗೆ ಮಾಹಿತಿ ನೀಡಿ ಸ್ಥಳದಲ್ಲಿರಲು ತಿಳಿಸುವಂತೆ ಸೂಚನೆ ನೀಡಿದರು.
ಬಗರ್ ಹುಕ್ಕುಂ ಸಭೆಯಲ್ಲಿ ತಹಸೀಲ್ದಾರ್ ತೇಜಸ್ವಿನಿ, ಸಮಿತಿ ಸದಸ್ಯರಾದ ತಿಮ್ಮಯ್ಯ, ರವಿ, ಅಮೃತ ಸೇರಿದಂತೆ ಎಡಿಎಲ್‌ಆರ್, ರಾಜಸ್ವ ನಿರೀಕ್ಷಕರು, ಲೆಕ್ಕಾಧಿಕಾರಿಗಳು, ಸರ್ವೇಯರ್ ಭಾಗವಹಿಸಿದ್ದರು. ನಂತರ ಶಾಸಕರು ಸಾರ್ವಜನಿಕರ ಕುಂದುಕೊರೆತೆ ಅರ್ಜಿಗಳನ್ನು ಸ್ವೀಕರಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು