LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಸಾದಲಿ ಗ್ರಾಮದ ಸ್ವಾಭಿಮಾನಿ ಮತದಾರರು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನ ಒಪ್ಪಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಶಿಡ್ಲಘಟ್ಟ ಗ್ರಾಮಾಂತರ: ತಾಲ್ಲೂಕಿನ ಸಾದಲಿ ಗ್ರಾಮದ ಮುಖಂಡರು, ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ, ಶಾಸಕ ಬಿ.ಎನ್.ರವಿಕುಮಾರ್ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ತಾಲ್ಲೂಕಿನ ಮೇಲೂರು ಶಾಸಕ ಬಿ.ಎನ್.ರವಿ ಕುಮಾರ್ ಅವರ ಗೃಹ ಕಚೇರಿಯಲ್ಲಿ ಸಾದಲಿ ಗ್ರಾಮದ ಸವಿತಾ ಸಮಾಜದ ಇಪ್ಪತ್ತೂ ಕುಟುಂಬಗಳು ಸೇರಿದಂತೆ ಇನ್ನೂ ಅನೇಕ ಮುಖಂಡರು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ, ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕ ಬಿ.ಎನ್.ರವಿ ಕುಮಾರ್ ಅವರು ಸೇರ್ಪಡೆಯಾದಂತಹ ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಮುಖಂಡ ನರಸಿಂಹ ಮೂರ್ತಿ ಅವರು, ಸಾದಲಿ ಭಾಗವು ಅಭಿವೃದ್ಧಿ ಹೊಂದದೆ ಇರುವುದು ದುರಾದೃಷ್ಟದ ಸಂಗತಿಯಾಗಿದೆ. ಈ ಹಿಂದೆ ಹಲವರು ಶಾಸಕರುಗಳು ಯಾವುದೇ ರೀತಿಯಾದಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಇರುವುದು ನಮ್ಮ ಭಾಗದ ಜನತೆಯ ದುರಾದೃಷ್ಟ. ಈಗಿನ ಶಾಸಕ ಬಿ.ಎನ್ ರವಿಕುಮಾರ್ ಅವರು ನಮ್ಮ ಸಾದಲಿ ಭಾಗಕ್ಕೆ ಹೆಚ್ಚಿನ ಆಧ್ಯತೆ ನೀಡಿ, ಗಡಿಮಿಂಚೇನಹಳ್ಳಿ ರಸ್ತೆ, ಸಾದಲಿ- ಪೆರೆಸಂದ್ರ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಸರ್ಕಾರದ ಅನುದಾನ ಸಿಗದೇ ಇದ್ದ ಪಕ್ಷದಲ್ಲಿ ವೈಯಕ್ತಿಕವಾಗಿ ಅಭಿವೃದ್ಧಿಪಡಿಸುವ ಭರವಸೆಯನ್ನು ನೀಡಿದ್ದು, ನಾವೆಲ್ಲ ಸ್ವಾಭಿಮಾನದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದು ತಿಳಿಸಿದರು.

ಸಾದಲಿ ಗ್ರಾಮದ ಬಿ.ಎಸ್.ಶಿವಪ್ಪ, ಬಿ.ಎಸ್.ಮಂಜುನಾಥ್, ಎಸ್.ಎನ್.ರಾಜು, ಎಸ್.ಎಂ ಮಂಜುನಾಥ್, ಕ್ರಾಸ್ ಮಂಜುನಾಥ್, ಚರಣ್ ಕುಮಾರ್, ನರಸಿಂಹಮೂರ್ತಿ, ಎಸ್.ಆರ್. ಮಂಜುನಾಥ್, ಟೈಲರ್ ವೆಂಕಟೇಶ್, ನಾಗಭೂಷಣ್, ಪ್ರಸಾದ್, ಬಿ.ಎಸ್. ಸುಬ್ರಮಣಿ, ಎಸ್.ಎನ್ ಶಂಕರಪ್ಪ, ಎಸ್.ವಿ.ನಾರಾಯಣಸ್ವಾಮಿ, ಎಸ್.ವಿ.ಕೃಷ್ಣಪ್ಪ, ಎಸ್.ವಿ.ಸುಬ್ರಮಣಿ, ಎಸ್.ವಿ ಚಂದ್ರಶೇಖರ್, ಬಿ.ಎಸ್.ನಾಗರಾಜ್, ಎಸ್.ಟಿ.ಸತೀಶ್ ಕುಮಾರ್, ಎಸ್.ಎಂ.ಸುರೇಶ್, ಎಸ್.ಎನ್ ನರಸಿಂಹಮೂರ್ತಿ, ಎಸ್.ಎನ್.ಚಿಕ್ಕನರಸಿಂಹಮೂರ್ತಿ, ನರಸಿಂಹರಾಜು, ಎಸ್.ಎಂ..ನಾಗರಾಜು, ಕೆ.ಎನ್.ಗೋಪಿನಾಥ್, ಪಾರಿವ್ ಅಹಮದ್ ಮುಂತಾದವರು ಹಾಜರಿದ್ದರು.

ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ಜೆಡಿಎಸ್ ಮುಖಂಡ ತಾದೂರು ರಘು ಸೇರಿದಂತೆ ಮುಂತಾದವರು ಹಾಜರಿದ್ದರು.
೨೬.ಎಸ್.ಡಿ.ಎಲ್.ಪಿ.೦೨: ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರ ಸ್ವಗೃಹದಲ್ಲಿ ಸಾದಲಿ ಗ್ರಾಮದ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು